ಉತ್ತಮ ಸಮಾಜಕ್ಕಾಗಿ

ಪರಿವರ್ತನಾ ಯಾತ್ರೆಗೆ ಬೆಳಗಾವಿಯಲ್ಲಿ ಭಾರೀ ಸ್ವಾಗತ

0

ಬೆಳಗಾವಿ: ನಗರದಲ್ಲಿ ಇಂದು ಎಲ್ಲಿ ನೋಡಿದರೂ ಬಿಜೆಪಿಯದ್ದೆ ಭರಾಟೆ ಕಂಡು ಬಂದಿತು. ಯಡಿಯೂರಪ್ಪ ನೇತೃತ್ವದ ಪರಿವರ್ತನಾ ಯಾತ್ರೆ ಇಂದು ನಗರ ಪ್ರವೇಶಿಸಿತು. ಹಳೇ ಬೆಳಗಾವಿ ತುಂಬ ಬಿಜೆಪಿ ಬಾವುಟ ಹಾರಾಡುತ್ತಿದ್ದು ಮುಖ್ಯ ರಸ್ತೆಗಳ ತುಂಬೆಲ್ಲ ಪ್ಲೆಕ್ಸ ಬ್ಯಾನರ್ ಗಳು ರಾರಾಜಿಸುತ್ತಿದ್ದವು.ಬೆಳಿಗ್ಗೆ ಹಿರೇಭಾಗೆವಾಡಿ ಕಾರ್ಯಕ್ರಮ ಮುಗಿಸಿ ಸಾಂಯಂಕಾಲ ಹಲಗಾ ಮೂಲಕ ಖಾಸಬಾಗ್ ಮಾರ್ಗದ ಮೂಲಕ ಶಿವಾಜಿ ಗಾರ್ಡನ ತಲುಪಿತು.ಇಲ್ಲಿಂದ ಭಾರೀ ಸಂಖ್ಯೆಯಲ್ಲಿ ಜಮಾಯಿಸಿದ್ದ ಕಾರ್ಯಕರ್ತರು ಪೂರ್ಣ ಕುಂಭದ ಮೂಲಕ ಸ್ವಾಗತಿಸಿದರು, ನಂತರ ಬೈಕ್ ರ್ಯಾಲಿ ಮೂಲಕ ಅವರನ್ನು ನಾಥ ಪೈ ಸರ್ಕಲ್ ಪಕ್ಕದ ಕಾರ್ಯಕ್ರಮದ ಜಾಗಕ್ಕೆ ಕರೆ ತರಲಾಯಿತು. ಅವರ ಜೊತೆ ಛತ್ತೀಸಗಡದ ಸಿ.ಎಂ, ಡಾ. ರಮಣಸಿಂಗ್, ಸಂಸದ ಸುರೇಶ ಅಂಗಡಿ, ಶಾಸಕ ಅಭಯ ಪಾಟೀಲ, ಸಾಥ ನೀಡಿದರು.

ಕೇಂದ್ರ ಸರಕಾರದ ಅನುದಾನ ರಾಜ್ಯ ಸರಕಾರ ಬಳಸುತ್ತಿಲ್ಲ : ಬಿ.ಎಸ್ ಯಡಿಯೂರಪ್ಪ ಆರೋಪ

ಬೆಳಗಾವಿ: ರಾಜ್ಯ ಸರಕಾರಕ್ಕೆ ಕೇಂದ್ರ ಸರಕಾರ ನೀಡಿದ ಅನುದಾನ ಸರಿಯಾಗಿ ಬಳಕೆಯಾಗುತ್ತಿಲ್ಲ ಎಂದು ಮಾಜಿ.ಮುಂ. ಬಿ.ಎಸ್ ಯಡಿಯೂರಪ್ಪ ಆರೋಪಿಸಿದರು. ನಗರದ ಶಹಾಪೂರ ಪ್ರದೇಶದಲ್ಲಿ ನಡೆದ ಪರಿವರ್ತನಾ ಯಾತ್ರೆಯ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ರಾಜ್ಯ ಸರಕಾರ ಭ್ರಷ್ಟರ ಸರಕಾರವಾಗಿದ್ದು ಭ್ರಷ್ಟ ಹಾಗೂ ಕೊಲೆಗಡುಕ ಮಂತ್ರಿಗಳನ್ನು ರಕ್ಷಿಸುತ್ತಿದೆ ಎಂದು ಹೇಳಿದರು. ಮುಂದಿನ ಬಾರಿ ಕಾಂಗ್ರೆಸ್ ಸರಕಾರ ರಚಿಸುವದು ಅಸಾಧ್ಯ, ಜನರ ಆಶೀರ್ವಾದ ಬಿ.ಜೆ.ಪಿ ಜೊತೆ ಇದೆ ಎಂದು ಇದೇ ಸಂಧರ್ಭದಲ್ಲಿ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಛತ್ತೀಸಗಡದ ಸಿ.ಎಂ. ಡಾ: ರಮಣ ಸಿಂಗ್, ಸಚಿವ ಅನಂತ ಕುಮಾರ, ಸಂಸದ ಸುರೇಶ ಅಂಗಡಿ ಧಾರವಾಡ ಸಾಂಸದ ಪ್ರಲ್ಹಾದ ಜೋಶಿ, ಶೋಭಾ ಕರಂದ್ಲಾಜೆ, ಮಾಜಿ ಶಾಸಕ ಅಭಯ ಪಾಟೀಲ ಮತ್ತಿತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.