ಉತ್ತಮ ಸಮಾಜಕ್ಕಾಗಿ

ರಾಜ್ಯ ಸರಕಾರದ ಮೂಡನಂಬಿಕೆ ಕಾಯಿಧೆಯ ವಿರುದ್ಧ ಬೆಳಗಾವಿದಲ್ಲಿ  ಹಿಂದೂ ಜನಜಾಗೃತಿ ಸಮಿತಿಯ ಪ್ರತಿಭಟನೆ.

0
ಬೆಳಗಾವ: ಸುವರ್ಣ ವಿಧಾನಸೌಧದ ಬಳಿ ಕರ್ನಾಟಕ ರಾಜ್ಯ ಸರಕಾರದ ಕರ್ನಾಟಕ ಅಮಾನವೀಯ, ದುಷ್ಟ ಪದ್ಧತಿಗಳು ಹಾಗೂ ವಾಮಾಚಾರ ಇವುಗಳ ಪ್ರತಿಬಂಧ ಮತ್ತು ನಿರ್ಮೂಲನೆ ವಿಧೇಯಕ, ೨೦೧೭ ವಿದೇಯಕದ ವಿರುದ್ಧ ಪ್ರತಿಭಟನೆ ನಡೆಯಿತು. ಈ ಸಮಯದಲ್ಲಿ ಡಾ. ಅಂಜೇಶ ಕಣಗಲಕರ್, ಶ್ರೀ. ಸುಧೀರ ಹಿರೆಕರ್, ಸೌ. ಅಕ್ಕಾತಾಯಿ ಸುತಾರ, ರಣರಾಘಿಣಿ ಶಾಖೆಯ ಉಜ್ವಲ ಗಾವಡೆ, ಸೌ. ಜ್ಯೋತಿ ದಾಬೋಳಕರ ಮುಂತಾದವರು ಇದ್ದರು.  ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮೋಹನ ಗೌಡ ಇವರು ಮಾತನಾಡುತ್ತಾ ” ಈ ಮಸೂಧೆಯಲ್ಲಿ   ಕೇವಲ ಹಿಂದೂ ಸಮಾಜದ ಆಚಾರ-ವಿಚಾರಗಳ ಮಾತ್ರ ಗುರಿಯಾಗಿಸಲಾಗಿದೆ. ಆದರೆ ಅನ್ಯ ಧರ್ಮಿಯರ ಸಂದರ್ಭದಲ್ಲಿ ಯಾವುದೇ ಅನಿಷ್ಠ, ಅಮಾನವೀಯ ಆಚರಣೆಗಳನ್ನು ಇದರಲ್ಲಿ ಸೇರಿಸಿಲ್ಲ, ಏಕಪಕ್ಷೀಯವಾಗಿದೆ.
೧. ಕಾಯಿದೆಯ ಅನುಸೂಚಿ ೨ ರಲ್ಲಿ ಇಂದ್ರಿಯಗಳಲ್ಲಿ ಅನಿರಿಕ್ಷಿತ ಶಕ್ತಿ ಒಬ್ಬನ ದೇಹದಲ್ಲಿ ಆಹ್ವಾನಿಸಲಾಗಿದೆ ಎಂದು ಹೇಳುವುದು ನಿರ್ಬಂಧಿಸಲಾಗಿದೆ. ಆದರೆ ಇದರ ಅಂತರರ್ಗತ ಪ್ರಾಚೀನ ಕಾಲದಿಂದ ಗ್ರಾಮಗಳಲ್ಲಿ ಹಬ್ಬ, ಉತ್ಸವ, ದೇವಸ್ಥಾನದ ಕಾರ್ಯಕ್ರಮಗಳ ಸಮಯದಲ್ಲಿ ದೇವರು ಮೈಮೇಲೆ ಬರುವುದು ಮತ್ತು ಭಕ್ತರ, ಊರಿನ ಸಂಕಷ್ಟಕ್ಕೆ ಪರಿಹಾರ ಹೇಳುವುದು ಸಹ ನಿಷೇದಕ್ಕೆ ಒಳಗಾಗಬಹುದು.
೨. ಕಾಯಿದೆಯ ಅನುಸೂಚಿ ೩ ರಲ್ಲಿ ವ್ಯಕ್ತಿಯ ಅಂಗಾಗಳಿಗೆ ಅಥವಾ ದೇಹಕ್ಕೆ ಬಿಸಿ ಮಾಡಿದ ವಸ್ತುಗಳನ್ನು ಮುಟ್ಟಿಸುವುದರ ಮೂಲಕ ಆತನಿಗೆ ನೋವುಂಟು ಮಾಡುವುದು ಅಪರಾಧವೆಂದು ಸೇರಿಸಲಾಗಿದೆ. ಆದರೆ ಇದು ಮಾದ್ವ, ವೈಷ್ಣವ ಸಂಪ್ರದಾಯ, ಇತ್ಯಾಧಿ ಹಿಂದೂ ಸಮುದಾಯದ ಮುದ್ರಾಧಾರಣ ಪದ್ಥತಿಯ ಮೇಲೆ ನಿಷೇಧವನ್ನು ತರಬಹುದು.
೩. ಅನುಸೂಚಿ ೬ ರಲ್ಲಿ ಶಸ್ತ್ರ ಚಿಕಿತ್ಸೆಯನ್ನು ಬೆರಳುಗಳ ಮೂಲಕ ಮಾಡುವುದಾಗ ಹೇಳಿಕೊಳ್ಳುವುದು ಅಪರಾಧ ಹೇಳಲಾಗಿದೆ. ಅದರೆ ಕ್ರೈಸ್ತ ಪಾದ್ರಿಗಳು ಪ್ರಾರ್ಥನಾ ಸಭೆಗಳನ್ನು ಮಾಡಿ ಅತೀಂದ್ರೀಯ ಶಕ್ತಿಗಳ ಮೂಲಕ ಕ್ಯಾನ್ಸರ್ ಗುಣಪಡಿಸುವ ಪ್ರಚಾರ ಸಭೆಗಳ ಬಗ್ಗೆ ಉಲ್ಲೇಖ ಇಲ್ಲ, ಹೀಲಿಂಗ್ ಮೂಲಕ ಅಮಾಯಕ ಜನರ ಮತಾಂತರ ಮಾಡುವುದು? ಅವರನ್ನು ಕೆಳಗೆ ಬೀಳಿಸುವುದು, ರೋಗ ಗುಣಪಡಿಸುವ ನೆಪದಲ್ಲಿ ಹೋಲಿ ವಾಟರ್ ಕೊಡುವ ಬಗ್ಗೆ ಉಲ್ಲೇಖ ಇಲ್ಲ? ಆಸ್ಪತ್ರೆಗೆ ಕರೆದುಕೊಂಡು ಹೋಗದೇ ಪ್ರಾರ್ಥನೆ ಮಾಡುವುದು ಮೂಡನಂಬಿಕೆಯ ಬಗ್ಗೆ ಉಲ್ಲೇಖ ಇಲ್ಲ. ಇದು ತಾರತಮ್ಯವಾಗಿದೆ.
೪. ಕಾಯಿಧೆಯ ಅನುಸೂಚಿ ೯ ರಲ್ಲಿ ಮಕ್ಕಳಿಗೆ ಚಿಕಿತ್ಸೆ ನೀಡುವ ನೆಪದಲ್ಲಿ ಅವರಿಗೆ ಹಾನಿಯುಂಟುಮಾಡುವ ಎಂದರೆ ಅವರನ್ನು ಮುಳ್ಳುಗಳ ಮೇಲೆ ಅಥವಾ ಎತ್ತರದಿಂದ ಎಸೆಯುವುದು ನಿಷೇಧಿಸಿದೆ. ಆದರೆ ಮುಸಲ್ಮಾನರು ಚಿಕ್ಕ ಮಕ್ಕಳಿಗೆ ಸುನ್ನತ್ ಹೆಸರಿನಲ್ಲಿ ಮರ್ಮಾಂಗದ ಚರ್ಮ ಭಾಗ ಕತ್ತರಿಸುವ ದೈಹಿಕ ಹಿಂಸೆಯನ್ನು ಈ ಕಾಯಿದೆಯಲ್ಲಿ ಉಲ್ಲೇಖ ಇಲ್ಲ.
೫. ಕಾಯಿಧೆಯ ಅನುಸೂಚಿ ೧೦ ರಲ್ಲಿ ಪ್ರತ್ಯೇಕವಾಗಿರುವಂತೆ ಒತ್ತಾಯಿಸುವ, ಗ್ರಾಮದೊಳಗೆ ಪುನರ ಪ್ರವೇಶ ನಿಷೇಧಿಸುವ ಮೂಲಕ ಮಹಿಳೆಯರ ವಿರುದ್ಧ ದುಷ್ಠ ಪದ್ಧತಿಯನ್ನು ಆಚರಿಸುವುದು ಅಪರಾಧವೆಂದು ಉಲ್ಲೇಖಿಸಲಾಗಿದೆ. ಆದರೆ ಮುಸಲ್ಮಾನರು ಸ್ತ್ರೀಯರಿಗೆ ಮಸೀಧಿಯ ಒಳಗೆ ಪ್ರವೇಶ ನೀಡದಿರುವ ಬಗ್ಗೆ ಅಥವಾ ಮುಸಲ್ಮಾನ ದಂಪತಿ ತಲಾಖ್ ನಂತರ ಪಶ್ಚಾತ್ತಾಪವಾಗಿ ನಂತರ ಪುನಃ ಒಂದಾಗಿ ಜೀವಿಸಲು ಒಪ್ಪಿದರೆ, ಆಗ ಮುಸ್ಲಿಂ ಸ್ತ್ರೀ ಬೇರೆಯವನ ಜೊತೆ ವಾಸಿಸಬೇಕು ಎನ್ನುವ ಅಮಾನವೀಯ ಪದ್ದತಿಯ ಬಗ್ಗೆ  ಅಥವಾ ಅವರ ವ್ಯಕ್ತಿ ಸ್ವಾತಂತ್ರ್ಯವನ್ನು ಹಾಳು ಮಾಡುವ ಬುರಕಾ ಬಗ್ಗೆ ಉಲ್ಲೇಖ ಇಲ್ಲ.
೭. ಕಾಯಿಧೆಯ ಅನುಸೂಚಿ ೧೧ ರಲ್ಲಿ ಸಾರ್ವಜನಿಕರಿಗೆ ಪೀಡೆಯುಂಟು ಮಾಡುವ, ಪ್ರಾಣಿಯನ್ನು ಅದರ ಕುತ್ತಿಗೆಯನ್ನು ಕಚ್ಚುವ ಮೂಲಕ ಕೊಲ್ಲುವಂಥ (ಗಾವು) ದುಷ್ಟಪದ್ಧತಿಯನ್ನು ನಡೆಸುವಂತೆ ಯಾವೊಬ್ಬ ವ್ಯಕ್ತಿಯನ್ನು ಒತ್ತಾಯಪಡಿಸುವುದು ಅಪರಾಧವಾಗಿದೆ. ಆದರೆ ಮುಸಲ್ಮಾನರು ಪ್ರಾಣಿಗಳ ಕುತ್ತಿಗೆಯನ್ನು ಕತ್ತರಿಸಿ, ಪ್ರಾಣಿಗಳು ರಕ್ತಸ್ರಾವವಾಗುವ ಹಾಗೆ ಸಾಯಿಸುವ “ಹಲಾಲ್‌ಕಟ್”ನಂತಹ ಕ್ರೂರ ಕೃತ್ಯದ ನಿಷೇಧದ ಬಗ್ಗೆ ಉಲ್ಲೇಖ ಇಲ್ಲ.
೮. ಕಾಯಿಧೆಯ ಅನುಸೂಚಿ ೧೨ ರಲ್ಲಿ ಉರುಳುಸೇವೆ, ಮಡೆ ಮಡೆ ಸ್ನಾನವನ್ನು ನಿಷೇಧಿಸಲಾಗಿದೆ. ಆದರೆ ಇದರಿಂದ ಇಲ್ಲಿಯವರೆಗೆ ಎಷ್ಟು ಜೀವಿಗಳಿಗೆ ಹಾನಿಯಾಗಿದೆ ಎಂಬುದರ ಬಗ್ಗೆ ಸರಕಾರ ಬಳಿ ಅಂಕಿ ಅಂಶಗಳು ಇದೇಯಾ? ಭಕ್ತರು ಅದು ಸ್ವಯಂ ಪ್ರೇರಿತವಾಗಿ ಮಾಡುವ ನಂಬಿಕೆಯಾಗಿದೆ. ಈ ನಂಬಿಕೆಯ ಮೇಲೆ ಘಾಸಿ ಮಾಡುವುದು ಎಷ್ಟರ ಮಟ್ಟಿಗೆ ಸರಿ?
೯. ಕಾಯಿಧೆಯ ಅನುಸೂಚಿ ೧೩ ರಲ್ಲಿ ಜಾತ್ರೆಗಳಲ್ಲಿ ಕೆಂಡಹಾಯಿಸುವ ಬಗ್ಗೆ ಉಲ್ಲೇಖ ಇದೆ. ಆದರೆ ಇದರಿಂದ ಎಷ್ಟು ಪ್ರಮಾಣದಲ್ಲಿ ಜೀವ ಹಾನಿಯಾಗುತ್ತದೆ? ಎನ್ನುವದರ ಬಗ್ಗೆ ಅಂಕಿಅಂಶ ಸರಕಾರದ ಬಳಿ ಇದೆಯೇ? ರಸ್ತೆಗಳಲ್ಲಿ ಅಪಘಾತ ವಾಗುತ್ತದೆಯೆಂದು ರಸ್ತೆಯನ್ನು ಮುಚ್ಚಿಸಲಾಗುತ್ತದೆಯೇ?
ಅದಕ್ಕಿಂತ ಹೆಚ್ಚಾಗಿ ಮುಸಲ್ಮಾನರಲ್ಲಿ ಜಿಹಾದ್ ಹೆಸರಿನಲ್ಲಿ ಅಮಾಯಕ ಮುಗ್ದ ಮುಸಲ್ಮಾನ ಯುವಕರನ್ನು ಸ್ವರ್ಗದಲ್ಲಿ ಅಪ್ಸರೆಯರು ಸಿಗುತ್ತಾರೆಂದು ಕಾಪೀರ( ಮುರ್ತಿಮೂಜಕರು) ಹತ್ಯೆ ಮಾಡಲು ಪ್ರೇರಣೆ ನೀಡುವ ಮುಸಲ್ಮಾನ್ ಧರ್ಮಗುರುಗಳ ಭೊಧನೆ ದೇಶದ ಭದ್ರತೆಗೆ, ಸಮಾಜಕ್ಕೆ ಎಷ್ಟು ಅಪಾಯಕಾರಿ ಎಂಬುದರ ಬಗ್ಗೆ ಉಲ್ಲೇಖ ಇಲ್ಲ. ಇದು ಭಯಾನಕ ಮೂಡನಂಬಿಕೆ ಅಲ್ಲವೇ?
ಅದೇ ರೀತಿ ಕ್ರೈಸ್ತರಲ್ಲಿ ಕ್ಯಾನ್ಸರ ಗುಣಪಡಿಸಲು ಹೋಲಿ ವಾಟರ್‌ನ್ನು ನೀಡುವುದು, ಪ್ರಾರ್ಥನೆ ಮಾಡುವುದು, ಹೀಲಿಂಗ್ ಮಾಡುವುದು ವ್ಯಕ್ತಿಯ ಮರಣದ ನಂತರ ಪುನ ಬರುತ್ತಾನೆಂದು ಶವಸಂಸ್ಕಾರ ಮಾಡದೆ ಪುನರಜನ್ಮಕ್ಕೆ ಪ್ರಾರ್ಥನೆ ಮಾಡುವುದು ಮುಂತಾದ ಮೌಢ್ಯತೆಗಳನ್ನು ಕಾಯಿದೆಯಲ್ಲಿ ಸೇರಿಸಿಲ್ಲ.
೧೦. ಸಂವಿಧಾನದ ಕಲಂ ೫೧ ಎ ಎಚ್ ನಂತೆ ಪ್ರತಿಯೊಂದನ್ನು ವೈಜ್ಞಾನಿಕ ಹಿನ್ನಲೆಯಲ್ಲಿ ಆದ್ಯಯನ ಮಾಡುವ ಸಂವಿಧಾನದ ಆಶಯದ ಬಗ್ಗೆ ಸರಕಾರ ಏನು ಕ್ರಮ ಇಲ್ಲ. ಈ ದಿಶೆಯಲ್ಲಿ ಸಮಾಜದಲ್ಲಿ ವೈಜ್ಙಾನಿಕ ದೃಷ್ಠಿಕೋನ ಬೆಳೆಸುವ ಏನು ಕ್ರಮದ ಬಗ್ಗೆ ವಿದೇಯಕದ ಬಗ್ಗೆ ಉಲ್ಲೇಖ ಇಲ್ಲ.  
೧೧. ಕಾಯಿದೆಯನ್ನು ರಚಿಸುವಾಗ ಆಯಾ ಕ್ಷೇತ್ರದ ತಜ್ಞರ ಜೊತೆಗೆ ಸಮಾಲೋಚನೆ ಮಾಡುವುದು ಮುಖ್ಯವಾಗಿದೆ. ಉದಾಹರಣೆಗೆ ಹಿಂದೂ ಧರ್ಮದ ಆಚರಣೆಯ ವಿಷಯದಲ್ಲಿ ಶಂಕರಾಚಾರ್ಯರ, ಧರ್ಮಧಿಕಾರಿಗಳ, ಸಂತರ ಅಭಿಪ್ರಾಯವನ್ನು ಕೇಳಲಿಲ್ಲ. ಹಾಗಾಗಿ ಈ ಕಾಯಿದೆಯನ್ನು ರದ್ಧುಗೊಳಿಸಬೇಕಾಗಿ ವಿನಂತಿ. 

Leave A Reply

 Click this button or press Ctrl+G to toggle between Kannada and English

Your email address will not be published.