ಉತ್ತಮ ಸಮಾಜಕ್ಕಾಗಿ

ಪ್ರಾಮುಖ್ಯರಹಿತ 134 ಕಾನೂನುಗಳು ಇನ್ನಿಲ್ಲ

0

ಬೆಳಗಾವಿ(ಸುವರ್ಣಸೌಧ): ಪ್ರಾಮುಖ್ಯವಲ್ಲದ ಸುಮಾರು 134 ಅಧಿನಿಯಮ(Laws) ನಿರಸನಗೊಳಿಸುವ ವಿಧೇಯಕ ಮಧ್ಯಾಹ್ನ ಪರಿಷತ್ತಿನಲ್ಲಿ ಮಂಡನೆಯಾಗಿ ಅಂಗೀಕಾರಗೊಂಡಿತು. ಸುಮಾರು 134 ಪ್ರಾಮುಖ್ಯತೆ ಕಳೆದುಕೊಂಡ ಬಿಲ್ ಗಳನ್ನು ವಾಪಸ್ ಪಡೆಯಲು ನಿರ್ಧಾರ ಪ್ರಕಟಿಸಲಾಯಿತು. ಈಗಾಗಲೇ ಕೇಂದ್ರ ಸರಕಾರ ಸುಮಾರು 1500 ಅನಾವಶ್ಯಕ ಬಿಲ್ ಗಳನ್ನು ಹಿಂತೆಗೆದುಕೊಂಡದ್ದನ್ನು ಸದನ ಉಲ್ಲೇಖಿಸಿತು. 2011 ರಿಂದ 2015 ರವರೆಗಿನ ಅನಾವಶ್ಯಕ ಕಾನೂನುಗಳನ್ನು ಹಿಂಪಡೆಯುವ ಬಗ್ಗೆ ಕಾನೂನು ಇಲಾಖೆ ಕ್ರಮ ವಹಿಸಲಿದೆ ಎಂದು ಸಭಾನಾಯಕ ಸೀತಾರಾಂ ತಿಳಿಸಿ, ಕಾನೂನು ಸಚಿವರ ಗಮನ ಸೆಳೆಯುವುದಾಗಿ ತಿಳಿಸಿದರು.

ಸಭಾಪತಿ ಡಿ. ಎಚ್. ಶಂಕರಮೂರ್ತಿ ಮಾತನಾಡಿ ಅಧಿಕಾರಿಗಳು ಜನಪರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕು. ಸವಾಲು ಬಂದಾಗ ಕಾನೂನು ಮಾಡಬೇಕು, ಸವಾಲು ಪರಿಹಾರ ಆದ ಮೇಲೆ ಕಾನೂನು ಮುಂದುವರೆಸುವುದು ಸೂಕ್ತವಲ್ಲ ಎಂದು ಅಭಿಪ್ರಾಯ ಪಟ್ಟರು. ಇಂದು ಎಷ್ಟೋ ಹಳೆಯ ಕಾನೂನುಗಳು ಜಾರಿ ಮಾಡುವ ಹಂತದಲ್ಲಿ ಇಲ್ಲವೇ ಇಲ್ಲ. ಅಂತಹ ಅನಾವಶ್ಯಕ ಕಾನೂನುಗಳನ್ನು ಇಟ್ಟುಕೊಳ್ಳುವುದು ಸೂಕ್ತವಲ್ಲ ಎಂದು ಸದನ ಅಭಿಪ್ರಾಯಪಟ್ಟಿತು.

Leave A Reply

 Click this button or press Ctrl+G to toggle between Kannada and English

Your email address will not be published.