ಉತ್ತಮ ಸಮಾಜಕ್ಕಾಗಿ

‘Over Energy’: ತಾಳ್ಮೆ ಕಳೆದುಕೊಂಡು ಯುವಕನ ಕೈಗೆ ಥಳಿಸಿದ ಡಿಕೆಶಿ; AV ವೈರಲ್

0

ಬೆಳಗಾವಿ: ಇಂಧನ ಸಚಿವ ಡಿ. ಕೆ. ಶಿವಕುಮಾರ ತಾಳ್ಮೆ ಕಳೆದುಕೊಂಡು ಯುವಕನ ಕೈಗೆ ಥಳಿಸುವ ಮೂಲಕ ಆತನ ಮೊಬೈಲ್ ಕೆಳ ಬೀಳುವಂತೆ ಮಾಡಿ ಅಧಿಕಾರ ದರ್ಪ ಮೆರೆದ ಘಟನೆ ಖಾಸಗಿ ಕಾಲೇಜೊಂದರಲ್ಲಿ ಇಂದು ನಡೆದಿದ್ದು ವಿಡಿಯೋ ವೈರಲ್ ಆಗಿದೆ.

ಸುದ್ದಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದ ಡಿ. ಕೆ. ಶಿವಕುಮಾರ ಅವರ ಹಿಂದೆಯೇ, ಅರಿಯದ ಮುಗ್ದ ವಿದ್ಯಾರ್ಥಿಯೊಬ್ಬ ತನ್ನ ಮೊಬೈಲ್ ನಲ್ಲಿ ಸೆಲ್ಫಿ ತೆಗೆದುಕೊಂಡು ಸಂಭ್ರಮಪಡುತ್ತಿದ್ದ ವೇಳೆ ತಾಳ್ಮೆ ಕಳೆದುಕೊಂಡು ಹಿಂದೆ ನೋಡಿದ ಮಿನಿಸ್ಟರ್ ಶಿವಕುಮಾರ ಆತನ ಕೈಗೆ ಥಳಿಸಿದ್ದು ವಿಡಿಯೋದಲ್ಲಿ ಸೆರೆಯಾಗಿದೆ. ಘಟನೆಯಲ್ಲಿ ಯುವಕನ ಅಷ್ಟೋ ಇಷ್ಟೋ ಬೆಲೆಯ ಮೊಬೈಲ್ ಕೆಳಗೆ ಬಿದ್ದು ಹಾಳಾಗಿದ್ದು, ಪಾಪ ವಿದ್ಯಾರ್ಥಿ ದುಃಖಿತನಾದ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಜನರ ಮೇಲೆ ಆಳ್ವಿಕೆ ನಡೆಸುವ ಜನಪ್ರತಿನಿಧಿಗಳು ಇಷ್ಟು Arrogant ತೋರಿಸಬಾರದು ಎಂದು ಸಾರ್ವಜನಿಕ ವಲಯದಿಂದ ಆಕ್ರೋಶ ವ್ಯಕ್ತವಾಗಿದೆ.

ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ KSCRC (Karnataka State Child Rights Commission) ಅಂತಾರಾಷ್ಟ್ರೀಯ ಮಕ್ಕಳ ದಿನದಂಗವಾಗಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಂದರ್ಭ ಈ ಘಟನೆ ನಡೆದಿದೆ. KSCRC ಅಧ್ಯಕ್ಷೆ ಕೃಪಾ ಆಳ್ವಾ, ಬಿಎಂಟಿಸಿ ಅಧ್ಯಕ್ಷ ನಾಗರಾಜ ಯಾದವ ಉಪಸ್ಥಿತರಿದ್ದರು. ಮಿನಿಸ್ಟರ್ ನಡೆಯಿಂದ ಕ್ಷಣ ಕಾಲ ಅವ್ಯಕ್ತ ಸ್ಬಬ್ದತೆ ಮೂಡಿತು.

Leave A Reply

 Click this button or press Ctrl+G to toggle between Kannada and English

Your email address will not be published.