ಉತ್ತಮ ಸಮಾಜಕ್ಕಾಗಿ

ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನ, ಯಲ್ಲಮ್ಮನಗುಡ್ಡದ ಸಮಗ್ರ ಅಭಿವೃಗೆ 137 ಕೋಟಿ ಮಂಜೂರು

0

ಬೆಳಗಾವಿ: ಸುಕ್ಷೇತ್ರ ಸವದತ್ತಿ ಯಲ್ಲಮ್ಮ ದೇವಸ್ಥಾನದ ಸಮಗ್ರ ಅಭಿವೃದ್ಧಿಗಾಗಿ ಒಟ್ಟು 137 ಕೋಟಿ ರೂಪಾಯಿ ವೆಚ್ಚದ ವಿವಿಧ ಯೋಜನೆಯ ಕಾಮಗಾರಿಗಳಿಗೆ ಸರ್ಕಾರ ಅನುಮೋದನೆ ನೀಡಿ ಅನುದಾನ ಒದಗಿಸಿದ್ದು, ಇನ್ನು ಒಂದು ತಿಂಗಳೊಳಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ ಎಂದು ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಮನಗೌಡ ತಿಪರಾಶಿ ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕ್ಷೇತ್ರಕ್ಕೆ ಆಗಮಿಸುವ ಕೋಟ್ಯಂತರ ಭಕ್ತಾಧಿಗಳ ಅನುಕೂಲಕ್ಕಾಗಿ ಶುದ್ಧ ಕುಡಿಯುವ ನೀರು, ಅನ್ನ ದಾಸೋಹ ಭವನ ನಿರ್ಮಾಣ, ರಸ್ತೆ ಅಭಿವೃದ್ಧಿ, ಪಾರ್ಕಿಂಗ್ ನಿರ್ಮಾಣ, ಒಳಚರಂಡಿ ವ್ಯವಸ್ಥೆ ಸೇರಿದಂತೆ ಅನೇಕ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದೆ ಎಂದರು.
ಕ್ಷೇತ್ರದ ಅಭಿವೃದ್ಧಿಗೆ ಇಷ್ಟೊಂದು ಪ್ರಮಾಣದಲ್ಲಿ ಅನುದಾನ ಬಿಡುಗಡೆಗೆ ನೆರವಾದ ಗ್ರಾಮೀಣ ನೀರು ಸರಬರಾಜು ಮತು ಗ್ರಾಮೀಣಾಭಿವೃದ್ಧಿ ಇಲಾಖೆಯ ಸಚಿವರಾದ ಎಚ್.ಕೆ.ಪಾಟೀಲ, ಜಿಲ್ಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ, ಲೋಕೋಪಯೋಗಿ ಇಲಾಖೆಯ ಸಚಿವ ಡಾ.ಎಚ್.ಸಿ.ಮಹಾದೇವಪ್ಪ, ಮುಜರಾಯಿ ಸಚಿವರಾದ ರುದ್ರಪ್ಪ ಲಮಾಣಿ ಅವರಿಗೆ ದೇವಸ್ಥಾನ ವ್ಯವಸ್ಥಾಪನಾ ಸಮಿತಿ ಹಾಗೂ ಭಕ್ತಾಧಿಗಳ ಪರವಾಗಿ ಕೃತಜ್ಞತೆ ಸಲ್ಲಿಸಿದರು.
ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಸಿ.ಕೋಟಾರಗಸ್ತಿ, ಸಮಿತಿಯ ನಿರ್ದೇಶಕರಾದ ಎಂ.ಐ.ಪುರದಗುಡಿ, ಎಸ್.ಆರ್.ಪಾಟೀಲ, ಎಸ್.ವಿ.ಬಳ್ಳಾರಿ, ಎಚ್.ವಿ.ಉಳ್ಳಾಗಡ್ಡಿ, ಸೋಮಶೇಖರ ನಾಯಕ ಮತ್ತಿತರರು ಉಪಸ್ಥಿತರಿದ್ದರು.

• ಬೆಳಗಾವಿ ಜಿಲ್ಲೆ, ಸವದತ್ತಿಯ ಶ್ರೀ ರೇಣುಕಾ ಯಲ್ಲಮ್ಮಾ ದೇವಸ್ಥಾನವು ಕರ್ನಾಟಕ ರಾಜ್ಯದ ಮುಜರಾಯಿ ಇಲಾಖೆಯ ವ್ಯಾಪ್ತಿಗೆ ಒಳಪಟ್ಟ “ ಎ ” ಶ್ರೇಣಿಯ ಅಧಿಸೂಚಿತ ಧಾರ್ಮಿಕ ಸಂಸ್ಥೆಯಾಗಿರುತ್ತದೆ. ಈ ದೇವಸ್ಥಾನವು ಪುರಾತನ ಪೌರಾಣಿಕ ಪುಣ್ಯಕ್ಷೇತ್ರವಾಗಿದ್ದು, ಶ್ರೀ ಕ್ಷೇತ್ರಕ್ಕೆ ಕರ್ನಾಟಕ ರಾಜ್ಯದಿಂದಷ್ಟೇ ಅಲ್ಲದೆ, ನೆರೆಯ ರಾಜ್ಯಗಳಾದ ಮಹಾರಾಷ್ಟ್ರ, ಆಂಧ್ರಪ್ರದೇಶ, ತಮಿಳನಾಡು, ಗೋವಾ ಹಾಗೂ ದೇಶದ ವಿವಿಧ ರಾಜ್ಯಗಳಿಂದ ಲಕ್ಷಾಂತರ ಭಕ್ತಾದಿಗಳು ವರ್ಷವಿಡಿ ಆಗಮಿಸಿ ಶ್ರೀ ದೇವಿಯ ದರ್ಶನಾಶಿರ್ವಾದ ಪಡೆದು ಪುನೀತರಾಗುತ್ತಾರೆ.
• ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರು ಸಮುಹವಾಗಿ ಕನಿಷ್ಟ ಮೂರು ದಿನಗಳ ಅವಧಿಗೆ ವಾಸ್ತವ್ಯ ಮಾಡಿ ಸ್ವತ: ಮೃಷ್ಠಾನ ಅಡುಗೆ ತಯಾರಿಸಿ ಶ್ರೀ ದೇವಿಗೆ ನೈವೇಧ್ಯೆ ಸಮರ್ಪಣೆ ಮಾಡಿ ತಾವು ಸಹ ಭೋಜನ ಸ್ವೀಕರಿಸಿ ನಂತರ ತಮ್ಮ ಊರುಗಳಿಗೆ ಹೋಗುವ ಸಂಪ್ರದಾಯವಿರುತ್ತದೆ.
• ಸಾಮಾನ್ಯ ದಿನಗಳಲ್ಲಿ ಪ್ರತಿದಿನ 15 ರಿಂದ 20 ಸಾವಿರ ಭಕ್ತರು ಆಗಮಿಸುತ್ತಿದ್ದು, ಪ್ರತಿ ಹುಣ್ಣಿವೆಗೆ 6 ರಿಂದ 7 ಲಕ್ಷ ಜನ ಹಾಗೂ ಭಾರತ ಹುಣ್ಣಿವೆಯಂದು 7 ರಿಂದ 8ಲಕ್ಷ ಭಕ್ತ ಜನ ಆಗಮಿಸುತ್ತಿದ್ದು, ಒಂದು ವರ್ಷದ ಅವಧಿಗೆ ಸರಾಸರಿ 55.00 ರಿಂದ 60.00ಲಕ್ಷ, ಜಾತ್ರಾ ಸಮಯದಲ್ಲಿ ಹೆಚ್ಚುವರಿಯಾಗಿ 15.00 ರಿಂದ 20.00 ಲಕ್ಷ ಭಕ್ತರನ್ನು ಒಳಗೊಂಡು ಸರಾಸರಿ 70.00 ರಿಂದ 80.00ಲಕ್ಷ ಭಕ್ತರು ಆಗಮಿಸುತ್ತಾರೆ ಎಂದು ಅಂದಾಜಿಸಲಾಗಿದೆ. ಅಲ್ಲದೇ ಹೆಚ್ಚಿನ ಸಂಖ್ಯೆಯ ಭಕ್ತರು ಗ್ರಾಮೀಣ ಪ್ರದೇಶದಿಂದ ಬರುವ ಭಕ್ತರಾಗಿರುತ್ತಾರೆ. ಹೀಗೆ ಪ್ರತಿ ವರ್ಷ ಅಗಷ್ಟ ತಿಂಗಳ ಶ್ರಾವಣ ಮಾಸದಿಂದ ಪ್ರಾರಂಭÀಗೊಂಡು, ಅಕ್ಟೋಬರದಲ್ಲಿ ನವರಾತ್ರಿ, ಶೀಗೆಹುಣ್ಣಿವೆ, ಡಿಸೆಂಬರ್ ತಿಂಗಳಿನಲ್ಲಿ ಹೊಸ್ತಲ ಹುಣ್ಣಿವೆ, ಜನೇವÀರಿಯಲ್ಲಿ ಬನದ ಹುಣ್ಣಿವೆ, ಫೆಬ್ರುವರಿಯಲ್ಲಿ ಭಾರತ ಹುಣ್ಣಿವೆ ಹಾಗೂ ಏಪ್ರೀಲನಲ್ಲಿ ದವನದ ಹುಣ್ಣಿವೆ ಹೀಗೆ ವರ್ಷದ ಒಂಭತ್ತು ತಿಂಗಳ ಪರ್ಯಂತ ಜಾತ್ರೆಗಳು ಜರುಗುತ್ತಿದ್ದು, ಸದರಿ ಜಾತ್ರೆಗಳು ಬೇಸಿಗೆಯಲ್ಲಿ ಬರುತ್ತವೆ. ಶ್ರೀ ಕ್ಷೇತ್ರದ ನೀರು ಸರಬರಾಜಿಗಾಗಿ ಯಲ್ಲಮ್ಮನಗುಡ್ಡದಿಂದ ಸುಮಾರು 7.0 ಕಿ, ಮೀ ಅಂತರದಲ್ಲಿ ಇರುವ ಮಲಪ್ರಭಾ ಜಲಾಶಯದ ಹಿನ್ನೀರಿನ ನೀರು ಮೂಲ ಆಧಾರವಾಗಿರುತ್ತದೆ. ಇದರ ಹೊರತಾಗಿ ಯಾವುದೇ ನೀರಿನ ಮೂಲ ಇರುವುದಿಲ್ಲ. ಹೀಗೆ ಶ್ರೀ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಸ್ನಾನ, ಅಡುಗೆ ಮಾಡಲು, ಬಟ್ಟೆ ತೊಳೆಯಲು, ಭಕ್ತರು ತರುವ ಎತ್ತುಗಳಿಗೆ ಕುಡಿಯಲು ಮತ್ತು ಮೈತೊಳೆಯಲು ನೀರು ಪೂರೈಕೆ ಮಾಡುವ ಅನಿವಾರ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಾಮಾನ್ಯ ನೀರಿನ ಬೇಡಿಕೆಗಿಂತ ಹೆಚ್ಚುವರಿಯಾಗಿ ನೀರು ಪೂರೈಕೆಯ ಅಗತ್ಯತೆ ಇದೆ. ಸದರಿ ಅಂಶಗಳನ್ನು ಪರಿಗಣಿಸಿ ಸಮರ್ಪಕವಾದ ಶ್ರೀ ಕ್ಷೇತ್ರ ರೇಣುಕಾ ಯಲ್ಲಮ್ಮಾ ದೇವಸ್ಥಾನ, ಯಲ್ಲಮ್ಮನಗುಡ್ಡಕ್ಕೆ ಎರಡನೇ ಹಂತದ ಸ್ವತಂತ್ರ ಕುಡಿಯುವ ನೀರು ಸರಬರಾಜು ಯೋಜನೆಯನ್ನು ಹಮ್ಮಿಕೊಳ್ಳಲಾಗಿದೆ.
• ಈ ಪುಣ್ಯ ಕ್ಷೇತ್ರದ ಸಮಗ್ರ ಅಭಿವೃದ್ದಿಗಾಗಿ ಪ್ರಧಾನ ಮುಖ್ಯ ವಾಸ್ತು ಶಿಲ್ಪಿಗಳು ಲೋಕೋಪಯೋಗಿ ಇಲಾಖೆ, ಬೆಂಗಳೂರು ಅವರಿಂದ ಸಮಗ್ರ ನಕ್ಷೆಯನ್ನು (ಒಚಿsಣeಡಿ Pಟಚಿಟಿ) 1997 ರಲ್ಲಿ ತಯಾರಿಸಿಕೊಳ್ಳಲಾಗಿದೆ. ಸದರಿ ಸಮಗ್ರ ನಕ್ಷೆಯನ್ನು (ಒಚಿsಣeಡಿ Pಟಚಿಟಿ) ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಹಂತಹಂತವಾಗಿ ಅಭಿವೃದ್ದಿ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ.
• ಈ ಎಲ್ಲ ಅವಶ್ಯಕತೆಗಳನ್ನು ಪರಿಗಣಿಸಿ ಪ್ರಸ್ತುತ 2017 ರಲ್ಲಿ ಶ್ರೀ ಕ್ಷೇತ್ರದ ಅಭಿವೃದ್ದಿಯ ದಿಶೆಯಲ್ಲಿ ಘನ ಕರ್ನಾಟಕ ಸರ್ಕಾರದಿಂದ ಐತಿಹಾಸಿಕ ರೂಪರೇಷೆಗಳನ್ನು ರಚಿಸಲಾಗಿದ್ದು, ಸುಮಾರು 132.00 ಕೋಟಿಗಳ ಬೃಹತ್ ಮೊತ್ತದ ಅಭಿವೃದ್ದಿ ಕಾರ್ಯಗಳನ್ನು ಕೈಗೊಳ್ಳಲಾಗಿದ್ದು, ಈ ಅಭಿವೃದ್ದಿ ಕಾರ್ಯಗಳ ರೂಪ ರೇಷೆಗಳನ್ನು ತಯಾರಿಸುವಲ್ಲಿ ಸನ್ಮಾನ್ಯ ಶ್ರೀ ಹೆÀಚ್, ಕೆ, ಪಾಟೀಲ ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವರು, ಕರ್ನಾಟಕ ಸರಕಾರ ಅವರ ಅಧ್ಯಕ್ಷತೆ ಹಾಗೂ ಸನ್ಮಾನ್ಯ ಶ್ರೀ ರಮೇಶ ಲಕ್ಷ್ಮಣ ಜಾರಕಿಹೊಳಿ. ಸಹಕಾರ ಸಚಿವರು ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವರು, ಕರ್ನಾಟಕ ಸರಕಾರ ಮತ್ತು ಸನ್ಮಾನ್ಯ ಶ್ರೀ ರುದ್ರಪ್ಪ. ಮಾನಪ್ಪ ಲಮಾಣಿ, ಜವಳಿ ಮತ್ತು ಮುಜರಾಯಿ ಸಚಿವಮಹೋದಯರವರ ಘನ ಉಪಸ್ಥಿತಿಯಲ್ಲಿ ಹಾಗೂ ಮಾನ್ಯ ಡಾ|| ನಾಗಲಾಂಭಿಕಾ ದೇವಿ, ಭಾ.ಆ.ಸೇ, ಪ್ರಧಾನ ಕಾರ್ಯದರ್ಶಿಗಳು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಸರಕಾರ ಮತ್ತು ಮಾನ್ಯ ಪಿ. ಎನ್. ಪ್ರಕಾಶ. ಭಾ.ಅ.ಸೇ. ಆಯುಕ್ತರು, ಕರ್ನಾಟಕ ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆ, ಅವರ ಅಮೂಲ್ಯ ನಿರ್ದೇಶನದಲ್ಲಿ ಹಲವಾರು ಸುತ್ತಿನ ಸಭೆಯ ಚರ್ಚೆ ಹಾಗೂ ಇತರ ಇಲಾಖೆಯ ಅಧಿಕಾರಿಗಳು ಹಾಗೂ ಶ್ರೀ ರೇಣುಕಾ ಯಲ್ಲಮ್ಮಾ ದೇವಸ್ಥಾನದ, ವ್ಯವಸ್ಥಾಪನಾ ಸಮಿತಿಯ ಎಲ್ಲ ಸದಸ್ಯರು, ಕಾರ್ಯನಿರ್ವಾಹಕ ಅಧಿಕಾರಿಗಳು, ದೇವಾಲಯದ ಅಭಿಯಂತರರು ಹಾಗೂ ಇತರೆ ಅಧಿಕಾರಿಗಳ ಸಹಕಾರದೊಂದಿಗೆ ಸದರಿ ಸಮಗ್ರ ಮೊತ್ತದ ಪರಿಷ್ಕøತ ಮಾಷ್ಟರ್ ಪ್ಲ್ಯಾನ್‍ನ್ನು ತಯಾರಿಸಲು ಸಾಧ್ಯವಾಗಿರುತ್ತದೆ.
ಶ್ರೀ ಕ್ಷೇತ್ರ ಯಲ್ಲಮ್ಮನಗುಡ್ಡದ ಸಮಗ್ರ ಅಭಿವೃದ್ದಿಗಾಗಿ ತಯಾರಿಸಲಾದ ಪರಿಷ್ಕøತ ಮಾಸ್ಟರ್ ಪ್ಲ್ಯಾನ್‍ದನ್ವಯ ಈ ಕೆಳಗಿನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಉದ್ದೇಶಿಸಲಾಗಿದೆ.
• ಸನ್ಮಾನ್ಯ ಶ್ರೀ ಹೆÉಚ್.ಕೆ.ಪಾಟೀಲ. ಸಚಿವರು, ಗ್ರಾಮೀಣ ನೀರು ಸರಬರಾಜು ಮತ್ತು ಗ್ರಾಮೀಣಾಭಿವೃದ್ದಿ ಪಂಚಾಯತ್ ರಾಜ್ ಇಲಾಖೆಯ ಅನುದಾನದಿಂದ
ಕ್ರ,ಸಂ ಕಾಮಗಾರಿ ವಿವರ ಅನುದಾನದ ಮೊತ್ತ ರೂ. ಲಕ್ಷಗಳಲ್ಲಿ
1 ಎರಡನೇ ಹಂತದ ಸ್ವತಂತ್ರ ಕುಡಿಯುವ ನೀರಿನ ಯೋಜನೆ. 3150.00
2 ಸಮುದಾಯ ಶೌಚಾಲಯ ಹಾಗೂ ವಿವಿಧ ಪ್ರದೇಶಗಳಲ್ಲಿ ಶೌಚಾಲಯ ಕಟ್ಟಡ ನಿರ್ಮಾಣ 596.00
3 ಪ್ರತಿ ಗಂಟೆಗೆ 200 ಲೀಟರ್ ಸಾಮಥ್ರ್ಯದ ಶುದ್ಧ ಕುಡಿಯುವ ನೀರಿನ ಘಟಕ(ಆರ್.ಓ ವಾಟರ್) 74.00
3 ದೇವಸ್ಥಾನದ ಪೂರ್ವ ದಿಕ್ಕಿನಲ್ಲಿ ವರ್ತುಳ ರಸ್ತೆ ಹಾಗೂ ಶ್ರೀ ಕ್ಷೇತ್ರದಲ್ಲಿಯ ಮುಖ್ಯ ರಸ್ತೆಗಳ ಅಗಲೀಕರಣ ಕೆಲಸ. 1800.00
5620.00

• ಸನ್ಮಾನ್ಯ ಶ್ರೀ ಡಾ|| ಹೆಚ್.ಸಿ.ಮಹಾದೇವಪ್ಪ, ಸಚಿವರು. ಲೋಕೋಪಯೋಗಿ ಇಲಾಖೆಯ ಅನುದಾನದಿಂದ
ಕ್ರ,ಸಂ ಕಾಮಗಾರಿ ವಿವರ ಅನುದಾನದ ಮೊತ್ತ ರೂ. ಲಕ್ಷಗಳಲ್ಲಿ
1 ಸವದತ್ತಿ ಹಂಚಿನಾಳ ಜಿಲ್ಲಾ ಮುಖ್ಯ ರಸ್ತೆ ವ್ಹಾಯ ಯಲ್ಲಮ್ಮನಗುಡ್ಡದ ರಸ್ತೆಯನ್ನು ಬೈ-ಪಾಸ್ ರಸ್ತೆಯನ್ನಾಗಿ ಮಾಡಲು ಸೇತುವೆ ಹಾಗೂ ರಸ್ತೆ ನಿರ್ಮಾಣ ಕಾಮಗಾರಿ. 1500.00
2 ಸವದತ್ತಿ-ಹಂಚಿನಾಳ ಜಿಲ್ಲಾ ಮುಖ್ಯ ರಸ್ತೆ 0-4.20 ಕಿ, ಮೀ ಹಾಗೂ 6.05 ರಿಂದ 11.55ರ ವರೆಗಿನ ರಸ್ತೆ ಶ್ರೀ ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಕೂಡು ರಸ್ತೆಯ ಅಗಲೀಕರಣ ಮಾಡುವುದು. 1678.00
3178.00

• ಸನ್ಮಾನ್ಯ ಶ್ರೀ ರುದ್ರಪ್ಪ. ಮಾನಪ್ಪ. ಲಮಾಣಿ. ಮುಜರಾಯಿ ಸಚಿವರ ಇಲಾಖೆಯ ಶ್ರೀ ರೇಣುಕಾ ಯಲ್ಲಮ್ಮಾ ದೇವಸ್ಥಾನದ ನಿಧಿಯಿಂದ
ಕ್ರ,ಸಂ ಕಾಮಗಾರಿ ವಿವರ ರೇಖಾ ಅಂದಾಜು
ವೆಚ್ಚ
ರೂ. ಲಕ್ಷಗಳಲ್ಲಿ
1 ಸಮಗ್ರ ಶ್ರೀ ಕ್ಷೇತ್ರಕ್ಕೆ ಮೊದಲ ಹಂತದ ಒಳಚರಂಡಿ ವ್ಯವಸ್ಥೆ ಮಾಡುವುದು. 1200.00
(1850.00)
2 500 ಜನರ ಸಾಮಥ್ರ್ಯದ ಉಚಿತ ಅನ್ನದಾಸೋಹ ಭವನ ಕಟ್ಟಡ ನಿರ್ಮಾಣ 257.35
3 ಮೊದಲ ಹಂತದಲ್ಲಿ ದೇವಸ್ಥಾನದ ಉತ್ತರ ದಿಕ್ಕಿನ ಕೊಳ್ಳದ ಪ್ರದೇಶದಲ್ಲಿ ನಾಲ್ಕು ಚಕ್ರ ವಾಹನಗಳ ನಿಲುಗಡೆಗಾಗಿ ವ್ಯವಸ್ಥೆ ಮಾಡುವುದು. 578.90
4 25 ಜನರ ಸಾಮಥ್ರ್ಯದ ನಾಲ್ಕು ತಂಗುದಾಣಗಳ ನಿರ್ಮಾಣ ಮಾಡುವುದು. 304.00
5 50 ಜನರ ಸಾಮಥ್ರ್ಯದ ನಾಲ್ಕು ತಂಗುದಾಣಗಳ ನಿರ್ಮಾಣ ಮಾಡುವುದು. 360.00
6 ಶ್ರೀ ಕ್ಷೇತ್ರದ ಎಲ್ಲ ರಸ್ತೆಗಳ ಎರಡೂ ಬದಿಯಲ್ಲಿ 275 ಅಂಗಡಿಗಳ ನಿರ್ಮಾಣ ಮಾಡುವುದು. 963.00
7 ಶ್ರೀ ಕ್ಷೇತ್ರದ ಪಶ್ಚಿಮದಲ್ಲಿಯ ವರ್ತುಳ ರಸ್ತೆ ಹಾಗೂ ಕೂಡು ರಸ್ತೆಗಳ ಮಧ್ಯ ಭಾಗದ ಪ್ರದೇಶವನ್ನು (ಸೆಕ್ಟರ್) ಅಭಿವೃದ್ಧಿ ಮಾಡುವುದು (ಸಮಾರು 50 ಎಕರೆ ವಸ್ತೀರ್ಣ) 563.35
8 ಸಿದ್ದರ ಗವಿಯ ಅಭಿವೃದ್ಧಿ ಮಾಡುವುದು 26.40
4253.00

ಇದಲ್ಲದೇ ಈ ಕೆಳಗಿನ ಅಂಶಗಳನ್ನು ಮುಂದಿನ ಹಂತದಲ್ಲಿ ಕ್ರಮಕೈಗೊಳ್ಳಲು ಸಹ ಉದ್ದೇಶಿಸಲಾಗಿದೆ. 1. ಡಿಜಿಟಲ್ ಬೋರ್ಡ್,
2. ಎಲ್ಲ ಪ್ರದೇಶದಲ್ಲಿ ಸೌಂಡ್ ಸಿಸ್ಟಮ್
3. ರಸ್ತೆಗುಂಟ ಶುದ್ದ ಹಾಗೂ ತಂಪಾದ ಕುಡಿಯುವ ನೀರಿನ ವ್ಯವಸ್ಥೆ.
4. ಪೋಲೀಸ್ ಠಾಣೆ.
5. ಪ್ರಾಥಮಿಕ ಆರೋಗ್ಯ ಕೇಂದ್ರ.
6. ತುರ್ತು ಆರೋಗ್ಯ ಅಂಬುಲನ್ಸ್
7. ಸ್ವಚ್ಚತೆ.
8. ಎತ್ತಿನಗಾಡಿಗಳ (ಚಕ್ಕಡಿ) ತಂಗುದಾಣಗಳ ವ್ಯವಸ್ಥೆ.
9. ಪೂಜಾ ಕೈಂಕರ್ಯಗಳ ಲೈವ್ ಟಿವಿ ವ್ಯವಸ್ಥೆ.
10. ವೈರ್‍ಲೆಸ್ ಸಂಪರ್ಕ ವ್ಯವಸ್ಥೆ(ವಾಕಿ-ಟಾಕಿ).
11. ಉಚಿತ ವಾಹನಗಳ ಸೌಕರ್ಯ.
12. ಯಲ್ಲಮ್ಮನಗುಡ್ಡದಿಂದ ಸವದತ್ತಿ ಹಾಗೂ ಯಲ್ಲಮ್ಮನಗುಡ್ಡದಿಂದ ಹಿರೇಕುಂಬಿ ಕ್ರಾಸ್‍ವರೆಗೆ ಡಬಲ್
ರೋಡ್ ವ್ಯವಸ್ಥೆ.
13. ಸೋಲಾರ್ ಹಾಗೂ ಗಾಳಿಯಿಂದ ವಿದ್ಯುತ್ ವ್ಯವಸ್ಥೆ.
14. ಮುನವಳ್ಳಿ ಹಾಗೂ ಇತರ ಸ್ಥಳಗಳಲ್ಲಿ ಸ್ತ್ರೀಯರ ಸ್ನಾನ ಘಾಟಗಳ ವ್ಯವಸ್ಥೆ.
15. ಯಲ್ಲಮ್ಮನಗುಡ್ಡದಲ್ಲಿಯ ಸಧ್ಯಕ್ಕೆ ಇರುವ ಗಾರ್ಡನ್‍ದ ಸ್ಥಳವನ್ನು ಬದಲಾಯಿಸುವುದು.

Leave A Reply

 Click this button or press Ctrl+G to toggle between Kannada and English

Your email address will not be published.