ಉತ್ತಮ ಸಮಾಜಕ್ಕಾಗಿ

ಭಾರಿ ಅಡುಗೆ ತಯಾರಿ

0

ಬೆಳಗಾವಿ(ಸುವರ್ಣಸೌಧ): ಧಾರವಾಡದ ಮಯೂರ ಆದಿತ್ಯ ಹೊಟೇಲ್ ರೆಸ್ಟೋರೆಂಟ್ ವತಿಯಿಂದ ಸುಮಾರು 5 ಸಾವಿರ ಗಣ್ಯಮಾನ್ಯರಿಗೆ ಊಟದ ವ್ಯವಸ್ಥೆ ಸುವರ್ಣಸೌಧ ಆವರಣದ ಆಗ್ನೆಯ ಮೂಲೆಯಲ್ಲಿ ಅಡುಗೆ ತಯಾರಿ ಮಾಡಿ ಪ್ರತಿದಿನ ಬಡಿಸಲಾಗುತ್ತಿದೆ. ಮನೋಹರ ಮೊರೆ ಮಾಲಿಕತ್ವದ ಹೊಟೇಲ್ ಸಿಬ್ಬಂದಿಯ ಪೈಕಿ 100 ಬಾಣಸಿಗರು, ಸುಮಾರು 550 ಹೆಲ್ಪರ್ಸ್, ಚಪಾತಿ ಮಾಡಲು 100 ಜನ ಸೇರಿ 650 ಸಿಬ್ಬಂಧಿ ಆಹಾರ ತಯಾರಿಯಲ್ಲಿ ತೊಡಗಿದ್ದಾರೆ.ಪ್ರತಿದಿನ ಹಿಂದಿನ ದಿನವೇ ಮರುದಿನ ತಯಾರಿಸಬೇಕಾದ ಅಡುಗೆಯ ಮೆನ್ಯೂ ತಯಾರಿಸಿಟ್ಟುಕೊಳ್ಳಲಾಗುತ್ತದೆ ಎನ್ನುತ್ತಾರೆ ಮಾಲಿಕ ಮನೋಹರ ಮೋರೆ. ಹೇಮಲ ದೇಸಾಯಿ ಸೇರಿದಂತೆ ನಾಲ್ಕಾರು ವ್ಯವಸ್ಥಾಪಕರು, Fssai ಅಧಿಕಾರಿ ಎಂ. ಎಸ್. ಬೆಕ್ಕೇರಿ ಮತ್ತು ತಂಡ ತಯಾರಿಸಿದ ಅಡುಗೆಯನ್ನು ಪರಿಶೀಲಿಸಿದ ನಂತರವೇ ಆಹಾರ ಬಡಿಸಲು ಬಫೆ ಸೇರುತ್ತದೆ. ಸಚಿವರು, IAS, ಅಧಿಕಾರಿಗಳು, ಶಾಸಕರು, ಪತ್ರಕರ್ತರು, ಸರಕಾರಿ ಅಧಿಕಾರಿಗಳು ವಿಧಾನಸೌಧದ ಒಳಗೆ ಆಹಾರ ಉಣ್ಣುತ್ತಾರೆ.
ಭಾರಿ ದೊಡ್ಡ ಪ್ರಮಾಣದಲ್ಲಿ ಅಡುಗೆ ತಯಾರಿಸುವ ಪರಿ ಗಮನ ಸೆಳೆಯುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ಸ್ ಮತ್ತಿತರ ಆಹಾರ ತಾವೇ ಖುದ್ದಾಗಿ ಬಡಿಸುತ್ತೇವೆ ಎಂದು ಮನೋಹರ ತಿಳಿಸುತ್ತಾರೆ.ಮಂಡ್ಯದಿಂದ ಆಗಮಿಸಿದ ಬಾಣಸಿಗರು ಮುದ್ದೆ, ಸೊಪ್ಪು ಸಾರು ತಯಾರಿಸುತ್ತಾರೆ. ಗಂಜಿ ಮಾಡಲು ಕುಂದಾಪುರ ವಿಶೇಷ ಬಾಣಸಿಗರು ಆಗಮಿಸಿದ್ದಾರೆ. ಪ್ರತಿದಿನ 6 ರಿಂದ 7 ಕ್ವಿಂಟಲ್ ಸೋನಾಮಸೂರಿ ಅಕ್ಕಿ, ಪ್ರತಿದಿನ 50 ಸಾವಿರ ಬೆಲೆಯ ಕ್ವಿಂಟಲ್ ಗಟ್ಟಲೇ ತರಹೇವಾರಿ ತರಕಾರಿ, ಕಳೆದ 5 ದಿನಗಳಲ್ಲಿ 45 ಕ್ವಿಂಟಲ್ ಈರುಳ್ಳಿ ಖರ್ಚಾಗಿದೆ. ಪ್ರತಿದಿನ ಕನಿಷ್ಠ 12 ಸಿಲಿಂಡರ್ ಖಾಲಿಯಾಗುವ ಬೃಹತ್ ಅಡುಗೆ ತಯಾರಿ ಸುವರ್ಣಸೌಧದ ಅಗ್ನಿಮೂಲೆಯಲ್ಲಿ ನಡೆದಿದೆ.

Leave A Reply

 Click this button or press Ctrl+G to toggle between Kannada and English

Your email address will not be published.