ಉತ್ತಮ ಸಮಾಜಕ್ಕಾಗಿ

ಏಕವಚನದ ಅತಿರೇಕಕ್ಕಿಳಿದ ಡಿಎಸ್ಪಿ, ಜರ್ನಾಲಿಸ್ಟ್ಸ್ ಧರಣಿ

0

ಬೆಳಗಾವಿ: ಸುವರ್ಣಸೌಧದ ಸಚಿವ ಸಂಪುಟ ಸಭಾಂಗಣದ ಎದುರು ಸೋಮವಾರ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಅನುಚಿತ ವರ್ತನೆ ಖಂಡಿಸಿ ಮಾಧ್ಯಮ ಪ್ರತಿನಿಧಿಗಳು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.

ಡಿವೈಎಸ್ಪಿ ಶ್ರೇಣಿಯ ಪೊಲೀಸ್ ಅಧಿಕಾರಿ, ಸಚಿವ ಸಂಪುಟ ಸಭೆ ವಿವರಕ್ಕಾಗಿ ಕಾಯುತ್ತಿದ್ದ ಮಾಧ್ಯಮದವರ ಬಳಿ ಆಗಮಿಸಿ ‘ಏಯ್…ಇಲ್ಲಿಂದ ದೂರ ಹೋಗ್ರೊ….ಯಾರೋ ಅಲ್ಲಿ ಎಲ್ಲರನ್ನೂ ದೂರ ತಳ್ಳೋ…’ ಎಂದು ಉದ್ಧಟತನ ತೋರಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮಾಧ್ಯಮದವರು, ಸಭೆ ವಿವರ ಪಡೆಯಲು ನಾವು ಕಾಯುತ್ತಿರುವುದು. ಏಕವಚನದಲ್ಲಿ ನಿಂಧಿಸಿದ್ದು ಸರಿಯಲ್ಲ. ಮರ್ಯಾಧೆಯಿಂದ ಮಾತನಾಡಿಸಿ ಎಂದು ತಿಳಿ ಹೇಳಲು ಮುಂದಾದರು. ಆದರೆ ಅಷ್ಟಕ್ಕೆ ಮತ್ತಷ್ಟು ಉದ್ರೇಕಗೊಂಡ ಡಿವೈಎಸ್ಪಿ, ತಿ….ಮುಂಚ್ಕೊಂಡು ಹೋಗ್ರೊಲೊ. ನಿಮಗೆ ಮರ್ಯಾದೆ ಬೇರೆ ಕೇಡು. ನಾನ್ಯಾರು ಗೊತ್ತ.? ಎಂದು ಅವಾಜ್ ಹಾಕಿದರು. ಇದರಿಂದ ತಾಳ್ಮೆ ಕಳೆದುಕೊಂಡ ಮಾಧ್ಯಮದವರು ಆ ಪೊಲೀಸ್ ಅಧಿಕಾರಿಗೆ ಅವರದ್ದೇ ಭಾಷೆಯಲ್ಲಿ ಪ್ರತ್ಯುತ್ತರ ನೀಡಲು ಶುರು ಮಾಡಿದರು. ಇದರಿಂದ ಮಾತಿನ ಚಕಮಕಿ ನಡೆದು ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಯಿತು.

ವಿಷಯ ತಿಳಿದ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿಕಾಂತೇಗೌಡ ಸ್ಥಳಕ್ಕೆ ಬಂದು ಡಿವೈಎಸ್ಪಿ ವರ್ತನೆಗೆ ನಾನು ಕ್ಷಮೆ ಕೋರುತ್ತೇನೆ. ದಯವಿಟ್ಟು ಧರಣಿ ನಿಲ್ಲಿಸಿ ಎಂದು ಮನವಿ ಮಾಡಿದರು. ಇದಕ್ಕೆ ಜಗ್ಗದ ಮಾಧ್ಯಮದವರು, ಅನುಚಿತವಾಗಿ ವರ್ತಿಸಿದ ಆ ಡಿವೈಎಸ್ಪಿಯಿಮದಲೇ ಕ್ಷಮೆ ಕೇಳಿಸಿ ಎಂದು ಪಟ್ಟು ಹಿಡಿದರು. ಕಡೆಗೆ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿರುವುದನ್ನು ಅರಿತ ಹಿರಿಯ ಪೊಲೀಸ್ ಅಧಿಕಾರಿಗಳು, ಡಿವೈಎಸ್ಪಿಯನ್ನು ಸ್ಥಳಕ್ಕೆ ಕರೆಸಿ ಮಾಧ್ಯಮ ಪ್ರತಿನಿಧಿಗಳ ಬಳಿ ಕ್ಷಮೆ ಕೇಳಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: