ಉತ್ತಮ ಸಮಾಜಕ್ಕಾಗಿ

ರೈತರ ಭೂಸ್ವಾಧೀನಕ್ಕೆ ಸೂಕ್ತ ಬೆಲೆಯ ಪರಿಹಾರ ಕೊಡಿ ಸ್ವಾಮಿ: ಈಶ್ವರಪ್ಪ ಆಗ್ರಹ

0

ಬೆಳಗಾವಿ(ಸುವರ್ಣಸೌಧ): ಉತ್ತರ ಕರ್ನಾಟಕದ ಸಮಸ್ಯೆಗಳ ಬಗೆಗೆ ಚರ್ಚೆ ಮಾಡುವ ಉದ್ದೇಶ ಇಲ್ಲಿನ ಅಭಿವೃದ್ಧಿಗೆ ಸರಿ. ಆದರೆ ಏನು ಅಭಿವೃದ್ಧಿ ಆಗಿದೆ, ಯಾಕೆ ಮಾಡುತ್ತಿಲ್ಲ ಎಂದು ವಿಪಕ್ಷ ನಾಯಕ ಕೆ. ಎಸ್. ಈಶ್ವರಪ್ಪ ತಿಳಿಸಿದರು. ನೀರಾವರಿ ಯೋಜನೆಗಳ ಜಾರಿಯಲ್ಲಿ ನುಡಿದಂತೆ ನಡೆದಿದ್ದೇವೆ ಎನ್ನುವ ಕಾಂಗ್ರೆಸ್ ಸರಕಾರ ಯಾವ ಯೋಜನೆ ಮುಗಿಸಿದೆ. ಇಚ್ಛಾಶಕ್ತಿ ಇಲ್ಲದೇ ಏನು ಮಾಡಲು ಸಾಧ್ಯವಿಲ್ಲ. ಸರಕಾರ ಮೊದಲು ನೀರಾವರಿ ಯೋಜನೆಗಳನ್ನು ಉತ್ತರ ಕರ್ನಾಟಕದಲ್ಲಿ ಆದ್ಯತೆ ಮೇಲೆ ಜಾರಿಗೆ ತರಲಿ ಎಂದರು.

9 ಉಪಯೋಗಿ ಯೋಜನೆಗಳು ಪೂರ್ಣವಾಗಿವೆ ಎಂದು ಸಚಿವ ಎಂ. ಬಿ. ಪಾಟೀಲ ಕಳೆದ ವರ್ಷ ಹೇಳಿದ್ದರು. ಕೆಲವೊಂದು ಯೋಜನೆಗಳಿಗೆ ಈಗ ಟೆಂಡರ್ ಕರೆಯುತ್ತಿದ್ದಾರೆ. ಟಾರ್ಗೆಟ್ ದೊಡ್ಡದಿಟ್ಟುಕೊಂಡು ಸಾಧನೆ ಮಾಡಿದ್ದೇನು ಎಂದು ನೀರಾವರಿ ಸಚಿವರನ್ನು ತರಾಟೆಗೆ ತೆಗೆದುಕೊಂಡರು. UKP ಅಭಿವೃದ್ಧಿಗೆ ಆದ್ಯತೆ ಕೊಡಬೇಕು. ಸಮಯ, ಕರ್ತವ್ಯ, ವ್ಯಕ್ತಿ ಸಂಪನ್ಮೂಲ ಕೊಟ್ಟು ಕೆಲಸ ಮುಗಿಸಿ. 36% ಮಾತ್ರ ಕೆಲಸವಾಗಿದೆ ಅನ್ನಬಹುದು. 20 ಲಕ್ಷ ಎಕರೆ ಜಾಗಕ್ಕೆ ನೀರು ಕೊಡುವ ಟಾರ್ಗೆಟ್ ಇಟ್ಟುಕೊಂಡು 6 ಲಕ್ಷ ಎಕರೆ ಮಾತ್ರ ಟಾರ್ಗೆಟ್‌ ಮಾಡಿದರೆ ಹೆಂಗೆ ಎಂದು ಸರಕಾರವನ್ನು ತರಾಟೆಗೆ ತೆಗೆದುಕೊಂಡರು. ಮುಖ್ಯಮಂತ್ರಿ, ಸಚಿವರು, IAS ಅಧಿಕಾರಿಗಳು ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಯಲ್ಲಿ ಭಾಗವಹಿಸದ ಬಗ್ಗೆ ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದರು. ತಾತನ ಕಾಲದಿಂದ ಇದ್ದ ಜೀವನಾಧಾರದ ಖುಷ್ಕಿ ಜಮೀನು ಬಿಟ್ಟುಕೊಡುವ ರೈತರಿಗೆ ಉತ್ತಮ ದರ ಸರಕಾರ ಯಾಕೆ ಕೊಡುವುದಿಲ್ಲ. ಖುಷ್ಕಿಗೆ 2ಲಕ್ಷ ಮತ್ತು ನೀರಾವರಿಗೆ 6 ಲಕ್ಷ ಪರಿಹಾರ ಮಾತ್ರ ಕೊಟ್ಟರೆ ಹೇಗೆ ಎಂದರು. ಸಚಿವ ಎಚ್. ಕೆ. ಪಾಟೀಲ ರೈತರೊಂದಿಗೆ ಸಮಾಲೋಚನೆ ನಡೆಸಿಯೇ ಪರಿಹಾರ ಕೊಡಲಾಗುತ್ತದೆ ಎಂದರು. ಖುಷ್ಕಿಗೆ ಕನಿಷ್ಠ 30 ಲಕ್ಷ ಹಾಗೂ ನೀರಾವರಿ ಭೂಮಿಗೆ 40 ಲಕ್ಷ ಸರಕಾರ ಪರಿಹಾರ ಕೊಡಬೇಕು ಎಂದು ಈಶ್ವರಪ್ಪ ತಿಳಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.