ಉತ್ತಮ ಸಮಾಜಕ್ಕಾಗಿ

‘ಉತ್ತರ ಕರ್ನಾಟಕ’ ಎಂದರೆ ಮಲತಾಯಿ ಧೋರಣೆ ಬಿಡಿ; ಡೆವಲಪ್ ಮಾಡಿ: ಹೊರಟ್ಟಿ ಉವಾಚ

0

ಬೆಳಗಾವಿ(ಸುವರ್ಣಸೌಧ): ಉತ್ತರ ಕರ್ನಾಟಕದಲ್ಲಿ ಬಹಳಷ್ಟು ಅಭಿವೃದ್ಧಿ ಆಗಬೇಕು, ಮಲತಾಯಿ ಧೋರಣೆಯನ್ನು ಬಿಡಬೇಕು ಎಂದು ಪರಿಷತ್ ಸದಸ್ಯ ಬಸವರಾಜ ಹೊರಟ್ಟಿ ಆಗ್ರಹಿಸಿದ್ದಾರೆ. ಕಳಸಾ ಬಂಡೂರಿ ಯೋಜನೆ ಜಾರಿಗೊಳಿಸಲು ಶತಾಯ ಗಥಾಯ ಕರ್ನಾಟಕ ವಂದಾಗದಿದ್ದರೆ ಏನೂ ಪ್ರಯೋಜನವಿಲ್ಲ. ಎಲ್ಲ ಕೈಗಾರಿಕೆಗಳ ಬರೀ ಬೆಂಗಳೂರಿನಲ್ಲಿ ಇದ್ದು, ವೆಳಗಾವಿ ಮತ್ತು ಗುಲ್ಬರ್ಗಾ ವಿಭಾಗದ ಜಿಲ್ಲೆಗಳಿಗೆ ಬರಬೇಕು, ಡಿ. ಎಂ. ನಂಜುಂಡಪ್ಪ ವರದಿ ಜಾರಿಯಾಗಬೇಕು, ಮೇರುಚಂದ ಮಹಾಜನ ವರದಿ ಜಾರಿಯಾಗಿ ಮಹಾರಾಷ್ಟ್ರದ ಖ್ಯಾತೆ ತಣ್ಣಗಾಗಿಸಬೇಕು, ಕಿತ್ತೂರು ಮಾರ್ಗವಾಗಿ ರೈಲ್ವೇ ಹಳಿ ಬೆಳಗಾವಿಗೆ ಹಾಕಿಸಬೇಕು, ಬೆಳೆಗಳಿಗೆ ಬೆಂಬಲ ಬೆಲೆ, ಶೈತ್ಯಾಗಾರಗಳ ನಿರ್ಮಾಣ ಮಾಡಬೇಕು ಎಂದರು. ಕಳಸಾ ನಾಲಾ ಯೋಜನೆ ಜಾರಿಗೆ ಕಳೆದ 675 ದಿನದಿಂದ ರೈತರ ಪ್ರತಿಭಟನೆ, ಉಪವಾಸ ನಡೆದರೂ ಯಾವ ಪ್ರಯೋಜನ ಆಗಿಲ್ಲ ಎಂದರು. ನವಲಗುಂದ, ನರಗುಂದ, ಅಣ್ಣಿಗೇರಿ, ಹುಬ್ಬಳ್ಳಿ ಧಾರವಾಡ, ಗದಗ ಜನತೆಯ ಪ್ರಯಿಭಟನೆಗೆ ಸರಕಾರ ಗಮನ ಕೊಡಬೇಕು ಎಂದರು.

ಮಹಾರಾಷ್ಟ್ರ- ಗೋವಾ- ಕರ್ನಾಟಕ ಕುಳಿತು ಮಾತನಾಡಬೇಕಿದೆ, ನ್ಯಾಯಾಲಯದ ಹೊರಗೆ ಪ್ರಧಾನಿ ಮೋದಿ ಕಳಸಾ ವಿವಾದ ಇತ್ಯರ್ಥಗೊಳಿಸಬೇಕು. ಬೆಳಗಾವಿ ಮತ್ತು ಹುಬ್ಬಳ್ಳಿ ಧಾರವಾಡದ ಮೇಲೆ ಗೋವಾ ರಾಜ್ಯದ ಜೀವನ ನಿಂತಿದೆ. ನಾವಿಲ್ಲದಿದ್ದರೆ ಗೋವಾ ಜನತೆ ಬರೀ ಮೀನು ತಿನ್ನಬೇಕಷ್ಟೆ ಎಂದ ಹೊರಟ್ಟಿ ಇನ್ಮುಂದೆ ಕರ್ನಾಟಕ ಸರಕಾರ ಗೋವಾಕ್ಕೆ ತಕ್ಕ ಬುದ್ಧಿ ಕಲಿಸಬೇಕೆಂದರು. ವಿಧಾನ ಪರಿಷತ್ ಮತ್ತು ವಿಧಾನಸಭೆ ಎರಡೂ ಕೇಂದ್ರದ ಮೇಲೆ ಒತ್ತಡ ಹಾಕಬೇಕು ಎಂದರು.

ಬಗರಹುಕುಂ ಸಾಗುವಳಿ ಹಕ್ಕುಪತ್ರ ಎಲ್ಲರಿಗೂ ಸರಕಾರ ವಿತರಿಸಬೇಕು ಎಂದರು. ಡಿ. ಎಂ. ನಂಜುಂಡಪ್ಪ ವರದಿ 2002 ರಲ್ಲಿ ಬಂದರೂ ಇನ್ನೂ ಪ್ರಗತಿಯಿಲ್ಲ. 1570 ಕೋಟಿ ಅಂದಿನ ಸಿಎಂ ಕುಮಾರಸ್ವಾಮಿ ಸರಕಾರ ಕೊಟ್ಟಿತ್ತು, ಆದರೂ ಅಭಿವೃದ್ಧಿ ಆಗುತ್ತಿಲ್ಲ. ವಾಯುವ್ಯ ಹಾಗೂ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆಗಳಿಗೆ ಹಳೆ ಬಸ್ ಗಳು ಇವೆ, ಸುಧಾರಣೆ ಇಲ್ಲ. ಗುಲ್ಬರ್ಗಾ, ಬೆಳಗಾವಿ ಡಿವಿಜನ್ ನಲ್ಲಿ ರಾಜ್ಯದ 57 ಸಕ್ಕರೆ ಕಾರ್ಖಾನೆಗಳಿದ್ದರೂ ಸಕ್ಕರೆ ನಿರ್ದೇಶಕ ಕಚೇರಿ ಬೆಂಗಳೂರಿನಲ್ಲಿಟ್ಟಿದ್ಯಾಕೆ ಎಂದು ಅಸಮಧಾನ ವ್ಯಕ್ತಪಡಿಸಿದರು. ಬೆಳಗಾವಿ ಪ್ರಾದೇಶಿಕ ಆಯುಕ್ತರನ್ನು ಬಹಳ ವರ್ಷಗಳಿಂದ ನೇಮಕ ಮಾಡುತ್ತಿಲ್ಲವೆಂದರೆ ಎಂಥ ನಿಷ್ಕಾಳಜಿ ಇದು ಎಂದರು. ಸಕ್ಕರೆ ಮತ್ತು ಟೆಕ್ಸಟೈಲ್ ನಿರ್ದೇಶನಾಲಯ ಥಕ್ಷಣ ಬೆಳಗಾವಿಗೆ ಬರಲಿ ಎಂದು ಒತ್ತಾಯಿಸಿದರು.

ಕೆಪಿಎಸ್ ಸಿಯಲ್ಲಿ ಎಷ್ಟು ಜನ ಉತ್ತರ ಕರ್ನಾಟಕ ಉವಾಚ ಮೆಂಬರಗಳಿದ್ದಾರೆ ಎಂದು ಪ್ರಶ್ನಿಸಿದರು. ಜಾತಿವಾರು ನೌಕರಿ ಆಯ್ಕೆ ಕೆಪಿಎಸ್ ಸಿಯಲ್ಲಿ ನಡೆಯುತ್ತವೆ ಎಂಬ ಗಂಭೀರ ವಿಷಯ ಹೊರಗಿಟ್ಟರು. ಸರಕಾರ ಈ ಕೂಡಲೇ ಬೆಳಗಾವಿ ಸುವರ್ಣಸೌಧಕ್ಕೆ 8ರಿಂದ 10 ಕಚೇರಿ ಸ್ಥಳಾಂತರಿಸಬೇಕು ಎಂದು ಸರಕಾರವನ್ಬು ಒತ್ತಾಯಿಸಿದರು. ಸರಕಾರ ಇನ್ಮುಂದೆ ಮಲತಾಯಿ ಧೋರಣೆ ಕೈ ಬಿಡದಿದ್ದರೆ ಒಳಿತಲ್ಲ ಎಂದು ಬಸವರಾಜ ಹೊರಟ್ಟಿ ಎಚ್ಚರಿಸಿದರು.

ಬೆಳಗಾವಿಗಾಗಿ ನಾವೆಲ್ಲ ರಾಜಕೀಯ ಒಟ್ಟಾಗಬೇಕು:

ಬೆಳಗಾವಿ(ಸುವರ್ಣವಿಧಾನಸೌಧ): ಮಹಾನ್ಯಾಯವಾದಿ ಮೇಹರ್ ಚಂದ ಮಹಾಜನ ಮಹಾರಾಷ್ಟ್ರ-ಕರ್ನಾಟಕ ಗಡಿ ವಿವಾದ ಇತ್ಯರ್ಥ ಪಡಿಸಿ ವರದಿ ಕೊಟ್ಟು 50 ವರ್ಷವಾದರೂ ಕೇಂದ್ರ ಸೂಕ್ತ ನಿರ್ಧಾರ ತಳೆಯಲಿಲ್ಲ, ಮಹಾರಾಷ್ಟ್ರ ಖ್ಯಾತೆ ಬಿಟ್ಟಿಲ್ಲ ಎಂದು ಸದಸ್ಯ ಬಸವರಾಜ ಹೊರಟ್ಟಿ ಅಸಮಧಾನ ವ್ಯಕ್ತಪಡಿಸಿದ್ದು, ರಾಜಕೀಯ ಒಕ್ಕಟ್ಟಿಗೆ ಕರೆ ನೀಡಿದ್ದಾರೆ. ಉತ್ತರ ಕರ್ನಾಟಕ ಸಮಸ್ಯೆಗಳ ಬಗ್ಗೆ ಪರಿಷತ್ ನಲ್ಲಿ ಚರ್ಚಿಸುವ ಸಂದರ್ಭ ಬಹಳ ವಿಸ್ಕೃತವಾಗಿ ಮಾತನಾಡಿದರು. ಸಂಸತ್ತಿನಲ್ಲಿ ನಮ್ಮ ರಾಜ್ಯದ ಸಂಸದರು ಗಟ್ಟಿ ಧ್ವನಿ ಎಬ್ಬಿಸದ್ದರಿಂದ ಗಡಿ ಸಮಸ್ಯೆ ಹಾಗೇ ಉಳಿದಿದೆ. ಬೆಳಗಾವಿಯಲ್ಲಿ ಮರಾಠಿ ಬೋರ್ಡಗಳು ಯಾಕೆ ಇವೆ, ಇಲ್ಲಿಯ ಅನ್ನ ನೀರು ಸ್ವೀಕರಿಸಿ ನಮ್ಮ ನೆಲದಲ್ಲಿ ಮರಾಠಿಗರು ಕರಾಳ ದಿನಾಚರಣೆ ಆಚರಿಸುತ್ತಾರೆ ಎಂದರೆ ಏನರ್ಥ ಎಂದು ಮರಾಠಿಗರ ವಿರುದ್ಧ ಹೊರಟ್ಟಿ ಆಕ್ರೋಶ ವ್ಯಕ್ತಪಡಿಸಿದರು. ಕಪ್ಪುಬಟ್ಟೆ ಕಟ್ಟಿಕೊಂಡು ಕರಾಳ ದಿನ ಆಚರಿಸುವ ಮೇಯರ ಅವರನ್ನು ನಮ್ಮ ಸರಕಾರ ಸುಮ್ಮನೆ ಬಿಟ್ಟಿದ್ಯಾಕೆ, ಎಂಇಎಸ್ ವೆಂಬಲಿತ ಎಂಎಲ್ ಎಗಳು ಕರ್ನಾಟಕ ಸರಕಾರದ ವಿರುದ್ಧ ಮಾತಾಡುತ್ತಾರೆ ಎಂದರೆ ಎಷ್ಟು ಧೈರ್ಯ, ಮರಾಠಿಗರ ಮಹಾಮೇಳಾವಗೆ ಅನುಮತಿ ಯಾಕೆ ಕೊಡುತ್ತೀರಿ ಎಂದು ಹೊರಟ್ಟಿ ಸರಕಾರವನ್ನು ಪ್ರಶ್ನಿಸಿದರು.

ಸುಮಾರು 816 ಹಳ್ಳಿಗಳು, 9 ನಗರಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಆಸೆಬುರುಕ ಮಹಾರಾಷ್ಟ್ರ ಹುನ್ನಾರ ಮಾಡಿಕೊಂಡೇ ಇದೆ. ನಮ್ಮ ಸರಕಾರ ನಿಷ್ಕಾಳಜಿ ಮಾಡಿದರೆ ಅನಾಹುತ ಕಟ್ಟಿಟ್ಟ ಬುತ್ತಿ ಎಂದರು. ರಾಜಕೀಯ ಒಕ್ಕಟ್ಟು ಮಾಡಿಕೊಂಡು ಈಗ ಮಹಾರಾಷ್ಟ್ರ ಮತ್ತು ಮರಾಠಿಗರಿಗೆ, ಕರ್ನಾಟಕ ರಾಜ್ಯ ಸರಕಾರ ಟಾಂಗ್ ಕೊಡಬೇಕು ಎಂದರು. ನ್ಯಾಯಾಲಯಕ್ಜೆ ಸಾಕ್ಷಾಧಾರಗಳು ಬೇಕು. ಸೂಕ್ತ ಎಚ್ಚರಿಕೆಯ ಹೆಜ್ಜೆ ಸರಕಾರ ಇಟ್ಟಾಗ ಸರ್ವೋಚ್ಚ ನ್ಯಾಯಾಲಯದಲ್ಲಿ ನಮಗೆ ಮುನ್ನೆಡೆ ಸಿಗುತ್ತದೆ. ಕರ್ನಾಟಕದ ಎಲ್ಲ ರಾಜಕಾರಣಿಗಳು ಮಹಾರಾಷ್ಡ್ರದ ನೊಂಡುತನ ಮುರಿಯಲು ಮುಂದಾಗಬೇಕು. ರಾಜ್ಯದ ಸಭ್ಯತೆ ನಮಗೇ ಮುಳುವಾಗಬಾರದು ಎಂದು ಹೊರಟ್ಟಿ ಕರೆ ನೀಡಿದರು.

Leave A Reply

 Click this button or press Ctrl+G to toggle between Kannada and English

Your email address will not be published.