ಉತ್ತಮ ಸಮಾಜಕ್ಕಾಗಿ

ಮುಂಗಾರು ಬೆಳೆಹಾನಿ; ರೂ.1600 ಕೋಟಿ ಪರಿಹಾರ: ಕಾಗೋಡು ತಿಮ್ಮಪ್ಪ

0

ಬೆಳಗಾವಿ, 2017-18ನೇ ಸಾಲಿನ ಮುಂಗಾರು ಬೆಳೆ ಹಾನಿ ಪರಿಹಾರವಾಗಿ ರಾಜ್ಯಾದ್ಯಂತ ಸುಮಾರು 1600 ಕೋಟಿ ರೂ. ಒದಗಿಸಲಾಗಿದೆ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ತಿಳಿಸಿದ್ದಾರೆ.
ವಿಧಾನ ಪರಿಷತ್‍ನಲ್ಲಿಂದು ವಿ.ಸೋಮಣ್ಣ ಅವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯಾದ್ಯಂತ ಮುಂಗಾರು ಬೆಳೆಹಾನಿಯಾಗಿ 23 ಲಕ್ಷ ರೈತರಿಗೆ ಸುಮಾರು 1600 ಕೋಟಿ ಬೆಳೆಹಾನಿ ಪರಿಹಾರ ಒದಗಿಸಲಾಗಿದೆ ಎಂದು ಅವರು ತಿಳಿಸಿದರು.
ರಾಜ್ಯದಲ್ಲಿ ಅತಿವೃಷ್ಟಿಯಿಂದ ಹತ್ತಿ, ತೊಗರಿ, ಮುಸುಕಿನ ಜೋಳ, ಜೋಳ, ಭತ್ತ, ಸಜ್ಜೆ, ಹುರುಳಿ, ಸೂರ್ಯಕಾಂತಿ, ಕಡಲೆ, ಸೋಯಾ, ಅವರೆ ಇತ್ಯಾದಿ ಬೆಳೆಗಳು ಹನಿಗೊಳಗಾಗಿದು ಕೋಲಾರ, ತುಮಕೂರು, ಶಿವಮೊಗ್ಗ, ಚಾಮರಾಜನಗರ, ಬೆಳಗಾವಿ, ಕಲಬುರ್ಗಿ, ಯಾದಗಿರಿ, ರಾಯಚೂರು ಹಾಗೂ ಕೊಪ್ಪಳ ಜಿಲ್ಲೆಯ 1,02,882 ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ಹಾನಿಯಾಗಿದೆ ಎಂದು ಅವರು ತಿಳಿಸಿದರು.
ಪ್ರಕೃತಿ ವಿಕೋಪದಿಂದ ಶೇ33ಕ್ಕಿಂತ ಹೆಚ್ಚಿನ ಪ್ರಮಾಣದ ಹಾನಿಗೊಳಗಾಗಿದ್ದಲ್ಲಿ ಕೇಂದ್ರ ಸರ್ಕಾರದ ಎಸ್‍ಡಿಆರ್‍ಎಫ್ ಹಾಗೂ ಎನ್‍ಡಿಆರ್‍ಎಫ್ ಮಾರ್ಗಸೂಚಿಯಂತೆ ಪರಿಹಾರ ವಿತರಿಸಲು ಕ್ರಮ ಕೈಗೊಳ್ಳಲಾಗಿದೆ. ಹಿಂಗಾರು ಮಳೆಹಾನಿ ತೀವ್ರತರವಾದ ಬೆಳೆ ಹಾನಿ ಆಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಮೂಲಗೇಣಿ ಪದ್ಧತಿ ಜರಿಯಲ್ಲಿದ್ದು, ಮೂಲಗೇಣಿದಾರರಿಗೆ ಹಾಗೂ ಒಳ ಮೂಲಗೇಣಿದರರಿಗೆ ಮಾಲಿಕತ್ವ ಪ್ರದಾನ ಮಾಡುವ ಸರ್ಕಾರದ ಅಧಿಸೂಚನೆ ಪ್ರಕಟಿಸಿದ್ದು ಕರ್ನಾಟಕ ಹೈಕೋರ್ಟ್ ಪ್ರಕರಣಗಳು ಇತ್ಯರ್ಥವಾಗಿ ಅಂತಿಮ ಆದೇಶವಾದ ನಂತರ ಮೂಲಗೇಣಿದಾರರ ಬೇಡಿಕೆ ಈಡೇರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಐವಾನ್ ಡಿಸೋಜಾ ಅವರ ಪ್ರಶ್ನೆಗೆ ಅವರು ಉತ್ತರಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.