ಉತ್ತಮ ಸಮಾಜಕ್ಕಾಗಿ

ತನಿಖೆಗೆ ಬಸವರಾಜ ಯತ್ನಾಳ ಆಗ್ರಹ

0

ಬೆಳಗಾವಿ (ಸುವರ್ಣಸೌಧ): ಕರ್ನಾಟಕ ಗೃಹಮಂಡಳಿ ಅವ್ಯಾಹಾರಗಳು ಅತಿಯಾಗಿವೆ, ನಕಲಿ ಡಿಡಿ ಹಾವಳಿ ಹೆಚ್ಚಾಗಿದೆ ಎಂದು ಪರಿಷತ್ ಸದಸ್ಯ ಬಸವರಾಜ ಯತ್ನಾಳ ಪರಿಷತ್ ಗಮನ ಸೆಳೆದರು. ಕರ್ನಾಟಕ ಗೃಹ ಮಂಡಳಿ ಮನೆ ಹಂಚಿಕೆ/ ನಿವೇಶನ ಹಂಚಿಕೆ ಮಾನದಂಡಗಳ ಬಗ್ಗೆ ಬಸವರಾಜ ಯತ್ನಾಳ ಅಸಮಧಾನ ವ್ಯಕ್ತಪಡಿಸಿದರು. ಗೃಹಮಂಡಳಿ ಅವ್ಯವಹಾರಗಳ ಬಗ್ಗೆ ಸಿಬಿಐ ತನಿಖೆಗೆ ವಹಿಸಬೇಕೆಂದು ಆಗ್ರಹಿಸಿದರು.

ವಿಜಯಪುರ ನಗರದಲ್ಲಿ ಮನೆ ಹಂಚಿಕೆ ಮಾಡುವ ಸಂದರ್ಭ ಭಾರಿ ಅವ್ಯವಹಾರ ನಡೆಯುತ್ತಿದೆ. ನಿವೇಶನ ಪಡೆಯಲು ಗ್ರಾಹಕರು ಕಟ್ಟಿರುವ ಹಣಕ್ಕೆ ಸೂಕ್ತ ದಾಖಲೆಗಳನ್ನು ಅಧಿಕಾರಿಗಳು ಇಟ್ಟುಕೊಂಡಿಲ್ಲ. ಸರಕಾರಿ ಮಾರ್ಗಸೂಚಿಗಳನ್ನು ಅನುಸರಿಸದೇ ಮನೆಗಳ, ನಿವೇಶನಗಳ ಹಂಚಿಕೆ ನಡೆದಿದೆ ಎಂದರು. ಸಚಿವರು ಉತ್ತರಿಸಿ ಈಗಾಗಲೇ ಈ ಸಂಬಂಧ ಆರೋಪದಲ್ಲಿ ಸಿಲುಕಿದ ಮೂವರು ಅಧಿಕಾರಿಗಳನ್ನು ಅಮಾನತು ಮಾಡಲಾಗಿದ್ದು, ನಿವೃತ್ತ ಜಿಲ್ಲಾ ನ್ಯಾಯಾಧೀಶರನ್ನು ವಿಚಾರಣೆಗೆ ನೇಮಿಸಲಾಗಿದೆ ಎಂದು ವಸತಿ ಸಚಿವ ಎಂ. ಕೃಷ್ಣಪ್ಪ ಸದನಕ್ಕೆ ತಿಳಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.