ಉತ್ತಮ ಸಮಾಜಕ್ಕಾಗಿ

18 ಶಾಸಕರ ಸದಸ್ಯತ್ವ ರದ್ದು ಪಡಿಸಲು ಆಗ್ರಹಿಸಿ ಜೆಡಿಎಸ್ ಪ್ರತಿಭಟನೆ

0

ಬೆಳಗಾವಿ: ಜಿಲ್ಲೆಯ 18 ಶಾಸಕರು ತಮ್ಮ ಜವಾಬ್ದಾರಿ ಮರೆತು ತಮ್ಮ ತಮ್ಮ ಸ್ವಹಿತಾಸಕ್ತಿಗಾಗಿ ರಾಜಕೀಯ ಮಾಡುತ್ತಿದ್ದು ಜಿಲ್ಲೆಯ ಅಭಿವೃದ್ಧಿ ಕುಂಠಿತಗೊಂಡಿದೆ ಎಂದು ಆರೋಪಿಸಿ ನಗರದ ರಾಣಿ ಚೆನ್ನಮ್ಮ ವೃತ್ದಲ್ಲಿ ಇಂದು ಜೆಡಿಎಸ್ ಯುವ ಘಟಕ ಪ್ರತಿಭಟನೆ ನಡೆಸಿದರು.ಜಿಲ್ಲೆಯ ಯುವಕರು ಉದ್ಯೋಗಕ್ಕಾಗಿ ಬೇರೆ ನಗರಗಳಿಗೆ ವಲಸೆ ಹೋಗುತ್ತಿದ್ದಾರೆ, ಮಹಾದಾಯಿ ವಿಚಾರವಾಗಿ ಯಾವದೇ ರೀತಿಯ ಪ್ರಯತ್ನ ಇವರುಗಳು ಮಾಡುತ್ತಿಲ್ಲ ಆದ್ದರಿಂದ ಜಿಲ್ಲೆಯ ಎಲ್ಲ 18 ಶಾಸಕರ ಸದಸ್ಯತ್ವವನ್ನು ರದ್ದು ಗೋಳಿಸಬೇಕೇಂದು ಆಗ್ರಹಿಸಿ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸಂತೋಷ ಉಪಾಧ್ಯಾಯ ಅವರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ಸುವರ್ಣ ಸೌಧಕ್ಕೆ ತೆರಳಲಾಯಿತು. ಈ ಸಂಧರ್ಭದಲ್ಲಿ ಜಿಲ್ಲಾ IT Wing ಅಧ್ಯಕ್ಷ ಕಲಿಮ ಮಾಡಿವಾಲೆ, ಗೌಸ್ ಖಾನಪುರಿ ಮತ್ತು ಯುವ ಜೆಡಿಎಸ್ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.