ಉತ್ತಮ ಸಮಾಜಕ್ಕಾಗಿ

ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವ ಯಾವುದೇ ಚಿಂತನೆ ಸರಕಾರದ ಮುಂದೆ ಇಲ್ಲ: CM ಸಿದ್ಧರಾಮಯ್ಯ

0

ಬೆಳಗಾವಿ: ಅಪರಾಧಗಳು ನಡೆದ ನಂತರ ಅವುಗಳ ತನಿಖೆ ನಡೆದು ಪ್ರಕರಣಗಳು ಪತ್ತೆಯಾಗುವದು ಸಾಮನ್ಯ ಆದರೆ ಅಪರಾಧ ನಡೆಯುವುದಕ್ಕಿಂತ ಮೊದಲೇ ಅದನ್ನು ಪತ್ತೆ ಹಚ್ಚಿ ತಡೆಯುವ ಕೆಲಸವಾಗಬೇಕು ಎಂದು ಮು.ಮಂ ಸಿದ್ಧರಾಮಯ್ಯ ಹೇಳಿದರು. ಇಂದು ನಗರದ ಕೆ.ಎಲ್.ಇ. ಡಾ: ಜೀರಗಿ ಸಭಾಂಗಣದಲ್ಲಿ ಸುಧಾರಿತ ಪೋಲಿಸ್ ಬೀಟ್ ಸದಸ್ಯರ ಸಮಾವೇಶ ಹಾಗೂ ಕನ್ನಡದಲ್ಲಿ ಕವಾಯತು ಕೈಪಿಡಿ ಸಮಾರಂಭದಲ್ಲಿ ಮಾತನಾಡಿದ ಅವರು ಬೇರೆ ದೊಡ್ಡ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕವು ಕಾನೂನು ಸುವ್ಯವಸ್ಥೆಯಲ್ಲಿ ಮುಂಚುಣಿಯಲ್ಲಿದೆ ಎಂದರು. ರಾಜ್ಯದಲ್ಲಿ ಮದ್ಯ ನಿಷೇಧ ಮಾಡುವ ಯಾವುದೇ ಚಿಂತನೆ ಸರಕಾರದ ಮುಂದೆ ಇಲ್ಲ ಇದೆಲ್ಲ ವದಂತಿ ಎಂದು ಇದೇ ಸಂಧರ್ಭದಲ್ಲಿ ಅವರು ಹೇಳಿದರು. ಕಾರ್ಯಕ್ರಮದಲ್ಲಿ ಗ್ರಹಸಚಿವ ರಾಮಲಿಂಗಾ ರೆಡ್ಡಿ, ಶಾಸಕ ಫಿರೋಜ್ ಸೇಠ, ಹಿರಿಯ ಪೋಲಿಸ್ ಅಧಿಕಾರಿಗಳು ಬೀಟ್ ಸದಸ್ಯರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: