ಉತ್ತಮ ಸಮಾಜಕ್ಕಾಗಿ

ಬಿಜೆಪಿ ಕಾರ್ಯಕರ್ತರ ಹತ್ಯೆಗೆ ಸಚಿವರೊಬ್ಬರು ಕಾರಣ: ಸೋಮಣ್ಣ ಬೇವಿನಮರದ

0

ಬೆಳಗಾವಿ(ಸುವರ್ಣಸೌಧ): ರಾಜ್ಯದಲ್ಲಿ ಇತ್ತಿಚೆಗೆ ಹಿಂದೂಪರ ಹಾಗೂ ಬಿಜೆಪಿ ಕಾರ್ಯಕರ್ತರ ಹತ್ಯೆ ಅಮಾನುಷವಾಗಿ ನಡೆದಿದೆ, ಗೃಹ ಇಲಾಖೆ ಜವಾಬ್ದಾರಿಯಿಂದ ವರ್ತಿಸುತ್ತಿಲ್ಲ ಎಂದು ಸದಸ್ಯ ಸೋಮಣ್ಣ ಬೇವಿನಮರದ ಆಕ್ಷೇಪ ವ್ಯಕ್ತಪಡಿಸಿದರು. ಬೆಳಿಗ್ಗೆ 11ಕ್ಕೆ ಪರಿಷತ್ ಪ್ರಾರಂಭವಾಗುತ್ತಿದ್ದಂತೆ ಎರಡನೇ ಪ್ರಶ್ನೋತ್ತರ ವೇಳೆಯಲ್ಲಿ ಗೃಹ ಸಚಿವ ರಾಮಲಿಂಗಾರೆಡ್ಡಿ ಮಾಹಿತಿ ನಾಳೆ ಕೊಡುವುದಾಗಿ ತಿಳಿಸಿದರು.

ಸಮಾಧಾನಗೊಳ್ಳದ ಸೋಮಣ್ಣ ಬೇವಿನಮರದ ಸಚಿವರೊಬ್ಬರ ಕೈವಾಡ ಕೊಲೆಯಲ್ಲಿದೆ ಎಂದು ಉಲ್ಲೇಖಿಸಿ ಆರೋಪಿಸಿದರು. ಆರೋಪಿತ ಸಚಿವರ ಪರವಾಗಿ ಸಾಕ್ಷಿ ಹೇಳುವಂತೆ ಅನ್ಯಾಯಕ್ಕೊಳಗಾದ ಕುಟುಂಬಕ್ಕೆ ಪೊಲೀಸ್ ಅಧಿಕಾರಿಗಳು ಒತ್ತಾಯಿಸುತ್ತಿದ್ದಾರೆ ಎಂದು ಅಸಮಧಾನ ವ್ಯಕ್ತಪಡಿಸಿ ಪ್ರತಿಭಟನೆಗೆ ಸದನದ ಬಾವಿಗಿಳಿದರು. ಶುಕ್ರವಾರ ಚರ್ಚೆ ಮತ್ತು ಗೃಹಸಚಿವರು ಉತ್ತರ ಕೊಡಿಸುವ ಭರವಸೆ ಸಭಾಧ್ಯಕ್ಷ ಡಿ. ಎಚ್. ಶ.ಕರಮೂರ್ತಿ ತಿಳಿಸಿದರು. ಮಾಧ್ಯಮಗಳಲ್ಲಿ ಈಗಾಗಲೇ ಇತ್ತೀಚಿನ ಹಿಂದೂಪರ 15 ಕಾರ್ಯಕರ್ತರ ಹತ್ಯೆಗೆ ಸಚಿವರೊಬ್ಬರು ಕಾರಣ ಎಂಬ ವರದಿ ಬರುತ್ತಿದೆ ಎಂದು ಬೇವಿನಮರದ ಸದನದಲ್ಲಿ ಆಕ್ರೋಶ ವ್ಯಕ್ತಪಡಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.