ಉತ್ತಮ ಸಮಾಜಕ್ಕಾಗಿ

ಮಿಲ್ಕ್ & ಸಿಲ್ಕ್ ಕ್ಷೇತ್ರದ ಬೆಳವಣಿಗೆ ರೈತರ ಅಭಿವೃದ್ಧಿ: ಎ.ಮಂಜು

0

ಬೆಳಗಾವಿ: ರಾಜ್ಯದ ರೈತರ ಜೀವನಮಟ್ಟ ಸುಧಾರಿಸುವದಲ್ಲಿ ಹೈನುಗಾರಿಕೆ ಹಾಗೂ ರೇಷ್ಮೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಪಶುಸಂಗೋಪನಾ ಸಚಿವರಾದ ಎ.ಮಂಜು ರವರು ಹೇಳಿದರು.ಇಂದು ಆಟೋ ನಗರದಲ್ಲಿರುವ ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತ ಆಯೋಜಿತ ನೂತನ ಫ್ಲೆಕ್ಸಿ ಘಟಕವನ್ನು ಮು.ಮಂ ಸಿದ್ದರಾಮಯ್ಯ ಜೊತೆ ಉದ್ಘಾಟಿಸಿ ಮಾತನಾಡಿದ ಅವರು ರಾಜ್ಯದಲ್ಲಿ ಕ್ಷೀರಕ್ರಾಂತಿ, ರೇಷ್ಮೇಕ್ರಾಂತಿ ಜೋತೆಗೆ ಶೀಘ್ರ ರೆಡ್ ಮೀಟ್ ಕ್ಷೇತ್ರದ ಬೆಳವಣಿಗೆ ಕೂಡ ಆಗಲಿದೆ ಎಂದರು. ರೈತರು ಹೈನುಗಾರಿಕೆ ಜೊತೆಗೆ, ಕುರಿ, ಕೋಳಿ ಸಾಗಾಣಿಕೆ ಮಾಡಬೇಕೆಂದು ಕರೆ ಕೊಟ್ಟರು. ಕಾರ್ಯಕ್ರಮದಲ್ಲಿ ಕರ್ನಾಟಕ ಹಾಲು ಮಹಾ ಮಂಡಳಿಯ ಪದಾಧಿಕಾರಿಗಳು, ಹಾಲು ಉತ್ಪಾದಕ ಸಹಕಾರಿ ಸಂಘದ ಸದಸ್ಯರು ಹಾಜರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.