ಉತ್ತಮ ಸಮಾಜಕ್ಕಾಗಿ

ಬೆಳಗಾವಿಯ ಪೋಲಿಸ್ ಠಾಣೆಗಳಿಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ಭೇಟಿ

0

ಬೆಳಗಾವಿ: ಇಂದು ಬೆಳಗಾವಿಯ ಉದ್ಯಮಬಾಗ, ಮಾರ್ಕೆಟ್, ಎ.ಪಿ.ಎಮ್.ಸಿ ಪೊಲೀಸ್ ಠಾಣೆಗಳಿಗೆ ಗೃಹ ಸಚಿವ ರಾಮಲಿಂಗಾರೆಡ್ಡಿ ರವರು ಭೇಟಿ ನೀಡಿ ಪರಿಶೀಲನೆ ನಡೆಸಿ ಅಧಿಕಾರಿಗಳಿಗೆ ಸೂಕ್ತ ಹಾಗೂ ಕಟ್ಟುನಿಟ್ಟಿನ ಮಾರ್ಗದರ್ಶನ ನೀಡಿದರು.ಇಂದು ಸಾಂಯಂಕಾಲ ವಿವಿಧ ಠಾಣೆಗಳಿಗೆ ಆಗಮಿಸಿದ ಸಚಿವರು ಠಾಣೆಯಲ್ಲಿ ಸಿಬ್ಬಂದಿಗಳ ಜೊತೆ ಕೆಲ ಹೊತ್ತು ಚರ್ಚಿಸಿ ಹಿರಿಯ ಅಧಿಕಾರಿಗಳಿಂದ ಠಾಣೆಯ ಕಾರ್ಯ ವೈಖರಿ ಹಾಗೂ ಪ್ರಕರಣಗಳ ಬಗ್ಗೆ ಮಾಹಿತಿ ಪಡೆದರು. ಇದೇ ಸಂಧರ್ಭದಲ್ಲಿ ಮಾತನಾಡಿದ ಅವರು. ಪೊಲೀಸ್ ಪೇದೆಯಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗಿನ ಎಲ್ಲಾ ಸಿಬ್ಬಂದಿಗೆ ಅತ್ಯಾಧುನಿಕ, ಅಗತ್ಯ ತರಬೇತಿಗಳನ್ನು ನೀಡಲಾಗುತ್ತಿದೆ ಎಂದು ತಿಳಿಸಿದರು.ಗೃಹ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ಸಂದರ್ಭದಲ್ಲಿ ಅವರು ಹೇಳಿದರು. ಸಚಿವರ ಜೊತೆ ನಗರ ಪೋಲಿಸ್ ಆಯುಕ್ತ ಕೃಷ್ಣಭಟ್, ಹಿರಿಯ ಅಧಿಕಾರಿಗಳಾದ ಸೀಮಾ ಲಾಟಕರ್, ಅಮರನಾಥ ರೆಡ್ಡಿ, ಆಯಾ ಠಾಣೆಗಳ CPI ಗಳು ಹಾಗೂ ಸಿಬ್ಬಂದಿಗಳು ಹಾಜರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: