ಉತ್ತಮ ಸಮಾಜಕ್ಕಾಗಿ

ಗಡಿಯಂಚಿನ ಶಿನೊಳ್ಳಿ ಗ್ರಾಮದಲ್ಲಿ ವಿವಾದಾತ್ಮಕ ಹೇಳಿಕೆ

0

ಬೆಳಗಾವಿ: ಬೆಳಗಾವಿ ಮಹಾರಾಷ್ಟ್ರದ ಭಾಗವಾಗಲಿದೆ ಎಂದು ಶಿವಸೇನಾ ಮಹಾಮುಖ್ಯಸ್ಥ ಉದ್ಧವ ಠಾಕ್ರೆ ಇಂದು ಬೆಳಗಾವಿ ಗಡಿಯಂಚಿನ ಶಿನೊಳ್ಳಿ ಗ್ರಾಮದಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ವಿವಾದಿತ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರುವವರೆಗೆ ನಾನು ವಿಶ್ರಮಿಸಲಾರೆ ಎಂದು ಕೊಲ್ಲಾಪುರ ಜಿಲ್ಲೆ ಚಂದಗಡ ತಾಲೂಕು ಶಿನೊಳಿ ಗ್ರಾಮದಲ್ಲಿ ಜನತೆಯನ್ನು ಉದ್ದೇಶಿಸಿ ಮಾತನಾಡಿದ್ದಾರೆ. ಪಶ್ಚಿಮ ಮಹಾರಾಷ್ಟ್ರ ಭಾಗದಲ್ಲಿ ಸಾರ್ವಜನಿಕ ಸಮಾರಂಭಗಳಲ್ಲಿ ಭಾಗವಹಿಸಲು ಆಗಮಿಸಿದ್ದ ಉದ್ಧವ ಠಾಕ್ರೆ ಉಚಗಾವಿ ರಸ್ತೆಯಾಚೆಯ ಈ ಹಳ್ಳಿಯಲ್ಲಿ ಹೇಳಿಕೆ ನೀಡಿದ್ದಾರೆ. ಮುಂಬಯಿನಿಂದ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಆಗಮಿಸಿದ ಉದ್ಧವ ಠಾಕ್ರೆ ಬಳಿಕ ಶಿನೊಳ್ಳಿಗೆ ತೆರಳಿ ಶಿವಾಜಿ ಪುತ್ಥಳಿ ಅನಾವರಣಗೊಳಿಸಿದರು. ಮತ್ತೆ ರಾಜ್ಯದ ವಿರುದ್ಧ ಶೆಡ್ಡು ಹೊಡೆದಿರುವ ಬೆಳಗಾವಿ ಮೇಯರ್ ಸಂಜೋತಾ ಬಾಂದೇಕರ ಉದ್ಧವ ಠಾಕ್ರೆ ಅವರೊಂದಿಗೆ ಮಹಾರಾಷ್ಟ್ರ ನೆಲದಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು.

ಎಂಇಎಸ್ ಮತ್ತು ಶಿವಸೇನಾ ಮುಖಂಡರಾದ ದೀಪಕ ದಳವಿ, ಮನೋಹರ ಕಿಣೆಕರ, ಪ್ರಕಾಶ ಶಿರೋಳಕರ ಠಾಕ್ರೆ ಅವರನ್ಬು ವಿಮಾನ ನಿಲ್ದಾಣದಲ್ಲಿ ಸ್ವಾಗತಿಸಿದರು. ಗಡಿಖ್ಯಾತೆ ಕೆದಕುವ ಪ್ರಯತ್ನ ತೆರೆದ ಸಭೆಯಲ್ಲಿಯೇ ಉದ್ಧವ ನಡೆಸಿದರು. ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಘೋಷಣೆ ಕೂಗಲಾಯಿತು. ಮರಾಠಿ ಭಾಷಿಕರ ಪ್ರದೇಶವಾದ ಬೆಳಗಾವಿ ಮತ್ತು ಇತರ ಪ್ರದೇಶಗಳು ಮಹಾರಾಷ್ಟ್ರದ ಭಾಗವೇ ಹೊರತು ಕರ್ನಾಟಕದ್ದವು ಎನ್ನುವುದು ಮೂರ್ಖತನ. ಮರಾಠಿ ಭಾಷಿಕರ ಹಿಂದೆ ಶಿವಸೇನಾ ಇದೆ ಎಂದು ಅಭಯ ನೀಡಿದರು. ಮೇಯರ್ ಸರಿತಾ ಪಾಟೀಲ, ಕಿರಣ ಸಾಯನಾಯಿಕ, ಫಂಡರಿ ಪರಬ್, ಪಾಲಿಕೆ ಸದಸ್ಯ ರತನ್ ಮಾಸೇಕರ ಇತರರು ಶಿನೊಳ್ಳಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಶಿನೊಳ್ಳಿ ಮಹಾರಾಷ್ಟ್ರ ರಾಜ್ಯವಾದರೂ ಬೆಳಗಾವಿ ಬುಡದಲ್ಲಿರುವುದರಿಂದ ಶಿನೊಳ್ಳಿ ಜನ ಬೆಳಗಾವಿ ನಗರವನ್ನು ವ್ಯವಹಾರಿಕವಾಗಿ ನೆಚ್ಚಿಕೊಂಡಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.