ಉತ್ತಮ ಸಮಾಜಕ್ಕಾಗಿ

25 ನೂತನ ಬಸ್‍ಗಳಿಗೆ ಚಾಲನೆ

0

ಬೆಳಗಾವಿ: ರಾಜ್ಯ ಸಾರಿಗೆ ಸಂಸ್ಥೆಯು 210 ಪ್ರಶಸ್ತಿಗಳನ್ನು ಪಡೆಯುವುದರೊಂದಿಗೆ ದೇಶದಲ್ಲಿಯೇ ಉತ್ತಮ ಸಾರಿಗೆ ಸಂಸ್ಥೆಯಾಗಿ ಬೆಳೆಯುತ್ತಿದೆ ಎಂದು ಸಾರಿಗೆ ಸಚಿವ ರೇವಣ್ಣ ಅವರು ಹೇಳಿದರು.
ಇಲ್ಲಿನ ನಗರ ಬಸ್ ನಿಲ್ದಾಣದಲ್ಲಿ ಶುಕ್ರವಾರ (ನ.24) 25 ನೂತನ ಬಸ್‍ಗಳಿಗೆ ಚಾಲನೆ ಹಾಗೂ ಬೆಳಗಾವಿ ವಿಭಾಗದ 3 ನೂತನ ಮಾರ್ಗಗಳಲ್ಲಿ 5 ಸಾರಿಗೆ ಸೇವೆಗಳಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಳಗಾವಿಯು ದೊಡ್ಡ ಜಿಲ್ಲೆಯಾಗಿರುವುದರಿಂದ ಒಟ್ಟು 650 ಹೊಸ್ ಬಸ್‍ಗಳನ್ನು ನೀಡಬೇಕಿತ್ತು. ಆದರೆ ಸದ್ಯ 52 ಹೊಸ್ ಬಸ್‍ಗಳನ್ನು ಬಿಡುಗಡೆಗೊಳಿಸಲಾಗಿದೆ. ಇದರಿಂದ 35 ಸಾವಿರ ವಿದ್ಯಾರ್ಥಿಗಳು ಸಂಚರಿಸಲು ಅನುಕೂಲವಾಗಲಿದೆ ಎಂದು ತಿಳಿಸಿದರು.
ರಾಜ್ಯ ಸಾರಿಗೆ ಸಂಸ್ಥೆಯ ಸಿಬ್ಬಂದಿ ಸಂಸ್ಥೆಯ ಏಳ್ಗೆಗಾಗಿ ಹಗಲಿರುಳು ಶ್ರಮಿಸಿ, ಸಾರ್ವಜನಿಕರಿಗೆ ಉತ್ತಮ ಸೇವೆ ನೀಡುತ್ತಿದ್ದಾರೆ. ಸಾರ್ವಜನಿಕರು ಸಾರಿಗೆಗಾಗಿ ಬಸ್‍ಗಳನ್ನು ಹೆಚ್ಚಾಗಿ ಬಳಸಿ ಸಂಸ್ಥೆಗೆ ಸಹಕಾರ ನೀಡಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವಾಯುವ್ಯ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ ಸದಾನಂದ ಡಂಗನವರ, ವ್ಯವಸ್ಥಾಪಕ ನಿರ್ದೇಶಕ ಪಾಂಡುರಂಗ ನಾಯಕ, ಜಿಪಂ ಅಧ್ಯಕ್ಷೆ ಶ್ರೀಮತಿ ಆಶಾ ಐಹೊಳೆ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.