ಉತ್ತಮ ಸಮಾಜಕ್ಕಾಗಿ

ಗ್ರಾಮೀಣಾಭಿವೃದ್ಧಿ ವಿ.ವಿ.ಯಲ್ಲಿ ಸರ್ಟಿಫಿಕೇಟ್ ಕೋರ್ಸ ಹಾಗೂ ಡಿಪ್ಲೋಮ ಆರಂಭ – ಸಚಿವ ಹೆಚ್.ಕೆ.ಪಾಟೀಲ

0

ಬೆಳಗಾವಿ,ಸುವರ್ಣ ವಿಧಾನ ಸೌಧ ನ.24; ಗದಗ ನಗರದಲ್ಲಿ 2017-18 ನೇ ಶೈಕ್ಷಣಿಕ ವರ್ಷದಿಂದ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವ ವಿದ್ಯಾಲಯ ಆರಂಭವಾಗಿದೆ. ಸದ್ಯ 5 ಸ್ನಾತಕೋತ್ತರ ವಿಭಾಗಗಳು ಆರಂಭವಾಗಿವೆ,ಮುಂಬರುವ ವರ್ಷಗಳಲ್ಲಿ ಸರ್ಟಿಫಿಕೇಟ್ ಕೋರ್ಸು ಹಾಗೂ ಡಿಪ್ಲೋಮ ಆರಂಭಿಸಲು ಉದ್ದೇಶಿಸಲಾಗಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಸಚಿವರಾದ ಹೆಚ್.ಕೆ.ಪಾಟೀಲ ಹೇಳಿದರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ವೇಳೆಯಲ್ಲಿಂದು ಸದಸ್ಯ ಎಸ್.ವಿ.ಸಂಕನೂರ ಅವರ ಪ್ರಶ್ನೆಗೆ ಉತ್ತರಿಸುತ್ತ ಈ ಮಾಹಿತಿ ನೀಡಿದರು. ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ವಿಶ್ವ ವಿದ್ಯಾಲಯದಲ್ಲಿ 172 ಹುದ್ದೆಗಳನ್ನು ಸೃಜಿಸಲಾಗಿದೆ.ಐದು ವಿಭಾಗಗಳನ್ನು ಶಾಲೆಗಳೆಂದು ಇಲ್ಲಿ ಕರೆಯಲಾಗುತ್ತಿದ್ದು ಗ್ರಾಮೀಣ ಕೃಷಿ ವ್ಯವಹಾರ ನಿರ್ವಹಣೆ,ಗ್ರಾಮೀಣಾಭಿವೃದ್ಧಿ ಹಾಗೂ ಉದ್ಯಮಶೀಲತಾ ನಿರ್ವಹಣೆಯ ವಿಶೇಷತೆಯೊಂದಿಗೆ ಎಂ.ಬಿ.ಎ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ / ಗ್ರಾಮೀಣಾಭಿವೃದ್ಧಿ ಮತ್ತು ಸಹಕಾರಿ ನಿರ್ವಹಣೆ ವಿಷಯಗಳಲ್ಲಿ ಎಂ.ಎ. ಜಿಯೋ ಇನ್ಫರ್‍ಮೇಟಿಕ್ಸ್‍ನಲ್ಲಿ ಎಂ.ಎಸ್ಸಿ, ಗ್ರಾಮೀಣ ಪುನರ್ ನಿರ್ಮಾಣದಲ್ಲಿ ಎಂ.ಎಸ್.ಡಬ್ಲ್ಯೂ. ಹಾಗೂ ಉದ್ಯಮಶೀಲತೆ/ಸಹಕಾರಿ ನಿರ್ವಹಣೆಯಲ್ಲಿ ಎಂ.ಕಾಂ. ಸ್ನಾತಕೋತ್ತರ ಪದವಿಗಳನ್ನು 2017-18 ರಿಂದ ಆರಂಭಿಸಲಾಗಿದೆ. ಮುಂಬರುವ ವರ್ಷಗಳಲ್ಲಿ ವಿವಿಧ ಡಿಪ್ಲೋಮ ಮತ್ತು ಸರ್ಟಿಫಿಕೇಟ್ ಕೋರ್ಸುಗಳನ್ನು ಆರಂಭಿಸಲು ಉದ್ದೇಶಿಸಲಾಗಿದೆ.
ವಿಶ್ವ ವಿದ್ಯಾಲಯವು ಪದವಿ ಹಾಗೂ ಇತರ ಕೋರ್ಸುಗಳನ್ನು ಕೇವಲ ಸರಕಾರಿ ನೌಕರಿ ಪಡೆಯುವದಕ್ಕಾಗಿ ಬೋಧಿಸುವದಿಲ್ಲ, ಬದಲಿಗೆ ಗ್ರಾಮೀಣಾಭಿವೃದ್ಧಿಯ ಸಮಗ್ರ ದೃಷ್ಟಿಕೋನ ಮತ್ತು ಜ್ಞಾನ ಹೊಂದಿರುವ ಮಾನವ ಸಂಪನ್ಮೂಲ ಸೃಷ್ಟಿಸುವದಾಗಿದೆ. ವಿ.ವಿ.ಯು ಕೋರ್ಸುಗಳನ್ನು ಪ್ರಾರಂಭಿಸುವಾಗ ಅನೇಕ ವಿಷಯ ತಜ್ಞರ ಸಮಿತಿಗಳನ್ನು ರಚಿಸಿ, ಹತ್ತು ಹಲವು ಸಭೆಗಳಲ್ಲಿ ವಿಸ್ತøತವಾಗಿ ಚರ್ಚಿಸಿ,ರೂಪಿಸಲಾಗಿದೆ.ಆಸಕ್ತ ಶಾಸಕರು,ವಿಧಾನ ಪರಿಷತ್ ಸದಸ್ಯರೊಂದಿಗೂ ಸಹ ಚಿಂತನೆ ನಡೆಸಲಾಗುವದು.
2017-18 ನೇ ಸಾಲಿಗೆ ವಿ.ವಿ.ಆಯವ್ಯಯದಲ್ಲಿ 265.9 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ.82.9 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದೆ.33.4 ಕೋಟಿ ರೂ.ವೆಚ್ಚವಾಗಿದೆ ಎಂದು ಸಚಿವ ಹೆಚ್.ಕೆ.ಪಾಟೀಲ ಸದನದಲ್ಲಿ ವಿವರಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: