ಉತ್ತಮ ಸಮಾಜಕ್ಕಾಗಿ

ಸರಕಾರಿ ಪ್ರಾಥಮಿಕ ಶಾಲೆಗಳ ಬಲವರ್ಧನೆಗೆ ಒತ್ತು- ಸಚಿವ ತನ್ವೀರ್‍ಸೇಠ್

0

ಬೆಳಗಾವಿ,ಸುವರ್ಣ ವಿಧಾನ ಸೌಧ ಪ್ರಸ್ತುತ ರಾಜ್ಯದಲ್ಲಿ 10ಕ್ಕಿಂತ ಕಡಿಮೆ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿರುವ 3 ಸಾವಿರಕ್ಕೂ ಅಧಿಕ ಸರಕಾರಿ ಪ್ರಾಥಮಿಕ ಶಾಲೆಗಳಿವೆ. ಈ ಶಾಲೆಗಳನ್ನು ಮುಚ್ಚುವ ಉದ್ದೇಶ ಸರಕಾರಕ್ಕಿಲ್ಲ. ಜ್ಞಾನ ಆಯೋಗ ಹಾಗೂ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಶಿಫಾರಸ್ಸುಗಳನ್ನು ಆಧರಿಸಿ ಶಾಲೆಗಳ ಬಲವರ್ಧನೆಗೆ ಕ್ರಮ ಜರುಗಿಸಲಾಗುವದು ಎಂದು ಪ್ರಾಥಮಿಕ,ಪ್ರೌಢ ಶಿಕ್ಷಣ,ಅಲ್ಪಸಮಖ್ಯಾತರ ಕಲ್ಯಾಣ ಹಾಗೂ ಔಕಾಫ್ ಸಚಿವ ತನ್ವೀರ್ ಸೇಠ್ ಹೇಳಿದರು.
ವಿಧಾನ ಪರಿಷತ್ತಿನಲ್ಲಿಂದು ಸದಸ್ಯೆ ತಾರಾ ಅನೂರಾಧಾ ಅವರ ಪ್ರಶ್ನೆಗೆ ಉತ್ತರಿಸುತ್ತ ಸಚಿವರು ಈ ಮಾಹಿತಿ ನೀಡಿದರು.
2015-16 ನೇ ಸಾಲಿನಲ್ಲಿ ಜಮಖಂಡಿಯ ಸರಕಾರಿ ಶಕುಂತಲಾ ಮರಾಠಿ ಮಾದರಿ ಶಾಲೆಯ ಕಟ್ಟಡ ಹಳೆಯದಾಗಿದ್ದು, ಜನನಿಬಿಡ ವಾಣಿಜ್ಯ ಸ್ಥಳದಲ್ಲಿದ್ದುದರಿಂದ ಶಬ್ದಮಾಲಿನ್ಯ ಅಧಿಕವಾಗಿತ್ತು. ಈ ಕಾರಣದಿಂದ ಶಾಲೆಯನ್ನು ಮುಚ್ಚಿ ಸಮೀಪದ ಸರಕಾರಿ ಪಾಗಾ ಮರಾಠಿ ಮಾದರಿ ಶಾಲೆಯಲ್ಲಿ ವಿಲೀನಗೊಳಿಸಲಾಗಿದೆ. ಬೆಂಗಳೂರಿನ ರಾಜಭವನದ ಬಳಿಯಿದ ವಸಂತ ನಗರ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯನ್ನು ರಾಷ್ಟ್ರಪತಿ, ಪ್ರಧಾನ ಮಂತ್ರಿ ಸೇರಿದಂತೆ ಗಣ್ಯರ ಭೇಟಿ ಸಂದರ್ಭದಲ್ಲಿ ಸೌಲಭ್ಯಗಳ ವಿಸ್ತರಣೆಗಾಗಿ ಶಾಲಾ ಕಟ್ಟಡ ಅಗತ್ಯವಿರುವುದರಿಂದ ಈ ಶಾಲೆಯನ್ನು ವಸಂತನಗರದ ಸರಕಾರಿ ಕನ್ನಡ/ ತಮಿಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಲೀನಗೊಳಿಸಲಾಗಿದೆ. ಸಕಲೇಶಪುರ ತಾಲೂಕಿನ ಶಾಲೆ ಸೇರಿದಂತೆ ಖಾಸಗಿ ಕಟ್ಟಡಗಳಲ್ಲಿದ್ದ ಶಾಲೆಗಳನ್ನು ಸಮೀಪದ ಸರಕಾರಿ ಕಟ್ಟಡಗಳಿಗೆ ಸ್ಥಳಾಂತರಿಸಲಾಗಿದೆ.
ಸರಕಾರಿ ಶಾಲೆಗಳ ಕಲಿಕಾ ಸಾಮಥ್ರ್ಯ ಹೆಚ್ಚಿಸಲು ಒಂದನೇ ತರಗತಿಯಿಂದ ಆಂಗ್ಲ ಭಾಷೆ ಪರಿಚಯಿಸಲು ಉದ್ದೇಶಿಸಲಾಗಿದೆ. ಮಕ್ಕಳ ಹಾಜರಾತಿ ಹೆಚ್ಚಿಸಲು ಪ್ರತಿದಿನಕ್ಕೆ 2 ರೂಪಾಯಿ ಪ್ರೋತ್ಸಾಹಧನ ನೀಡುವ ಘೋಷಣೆಯನ್ನು ದಾಖಲಾತಿಗಳ ನಿರ್ವಹಣೆಯ ಸಮಸ್ಯೆಯಿಂದಾಗಿ ಅನುಷ್ಠಾನಗೊಳಿಸಿಲ್ಲ. ಬರುವ ದಿನಗಳಲ್ಲಿ ಇದನ್ನು ಜಾರಿಗೊಳಿಸಲು ಸರಕಾರ ಬದ್ದವಾಗಿದೆ. ಹೊಸ ನಿಯಮಾವಳಿ ರೂಪಿಸಿದ ನಂತರ ಅನುಷ್ಠಾನಗೊಳಿಸಲಾಗುವುದು ಎಂದು ಸಚಿವರು ವಿವರಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.