ಉತ್ತಮ ಸಮಾಜಕ್ಕಾಗಿ

ಡ್ರೋಣಗೆ ಬೆದರಿ ಜೇಣು ದಾಳಿ; ಅರಣ್ಯ ಸಚಿವ ಸೇರಿ ಅಧಿಕಾರಿಗಳಿಗೆ ಕಡಿತ

0

ಬೆಳಗಾವಿ: ಕರ್ನಾಟಕ ಗೋವಾ ರಸ್ತೆಯ ವಿಟಿಯು ಬಳಿ ನಡೆದಿದ್ದ City Forest Park ಉದ್ಘಾಟನೆ ವೇಳೆ ಡ್ರೋಣ ಕ್ಯಾಮೆರಾಕ್ಕೆ ಬೆದರಿ ಜೇಣುನೊಣ ದಾಳಿ ಮಾಡಿದ್ದು ಘಟನೆಯಲ್ಲಿ ಅರಣ್ಯ ಸಚಿವ ರಮಾನಾಥ ರೈ ಸೇರಿದಂತೆ ಇತರ ಅಧಿಕಾರಿಗಳಿಗೆ ಇಂದು ಬೆಳಿಗ್ಗೆ ಕಚ್ಚಿವೆ. ಶಾಲಾ ವಿದ್ಯಾರ್ಥಿಗಳು ಸೆರಿದಂತೆ ಸುಮಾರು ನೂರಾರು ಜನ ಸೇರಿದ್ದ ಬಯೋಡೈವರ್ಸಿಟಿ ಉದ್ಯಾನ ಉದ್ಘಾಟನಾ ಕಾರ್ಯಕ್ರಮದಲ್ಲಿ ನಡೆದ ಈ ಅನಿರೀಕ್ಷಿತ ಘಟನೆಯಿಂದ ಕಾರ್ಯಕ್ರಮ ಅರ್ಧಕ್ಕೆ ಮೊಟಕುಗೊಳಿಸಲಾಯಿತು.

ಸಚಿವರಿಗೆ ಒಂದೆರಡು ಹುಳು ಕಚ್ಚಿದರೆ ಎಸಿಎಫ್ ಶಿವಾನಂದ ನಾಯಕವಾಡಿ ಮತ್ತು ಆರ್ ಎಫ್ ಈ ಶ್ರೀನಾಥ್ ಕಡೋಲಕರ ಸೇರಿದಂತೆ ಇತರ ಎಲ್ಲರಿಗೂ ಜೇಣು ನೊಣ ಕಚ್ಚಿದೆ. ಜೇಣು ಹುಟ್ಟಿನ ಗಮನ ಇರದ ಅಧಿಕಾರಿಗಳು ಸಮಾರಂಭ ಏರ್ಪಡಿಸಿದ್ದರು. ಈ ಭವ್ಯ ಮಹತ್ವಾಕಾಂಕ್ಷಿ ಕಾರ್ಯಕ್ರಮದ ಚಿತ್ರಣ ಸೆರೆ ಹಿಡಿಯುವ ಡ್ರೋಣ ಕ್ಯಾಮೆರಾಗೆ ಬೆದರಿ ಜೇಣು ನೊಣ ದಾಳಿ ಮಾಡಿದ್ದು ಸ್ಥಳದಲ್ಲಿ ಗಂಭೀರತೆ ಸೃಷ್ಟಿ ಮಾಡಿತು. ಕೆಲ ಅಧಿಕಾರಿಗಳು ಆಸ್ಪತ್ರೆಯಲ್ಲಿ ಶುಶ್ರೂಶೆ ಪಡೆದರು.

Leave A Reply

 Click this button or press Ctrl+G to toggle between Kannada and English

Your email address will not be published.