ಉತ್ತಮ ಸಮಾಜಕ್ಕಾಗಿ

ನೈಸ್ ಹಗರಣದ ಚರ್ಚೆಗೆ ಪರಿಷತ್ತಿನಲ್ಲಿ ವಿಪಕ್ಷಗಳ ಆಗ್ರಹ

0

ಬೆಳಗಾವಿ(ಸುವರ್ಣಸೌಧ): ಸಾವಿರಾರು ಕೋಟಿ ನೈಸ್ ಹಗರಣದ ಚರ್ಚೆಗೆ ಅವಕಾಶ ನೀಡುವಂತೆ ಪರಿಷತ್ ನಲ್ಲಿ ವಿಪಕ್ಷ ನಾಯಕರು ಸದನವನ್ನು ಆಗ್ರಹಿಸಿದರು. ಕನಿಷ್ಠ ಅರ್ಧ ತಾಸು ಇಲ್ಲವೇ ಹತ್ತು ನಿಮಿಷ ಸಮಯ ನಗದಿ ಮಾಡಿ ಎಂದು ಬಸವರಾಜ ಹೊರಟ್ಟಿ, ಟಿ. ಎ. ಶರವಣ, ಶ್ರೀಕಂಠೇಗೌಡ ಇತರರು ಆಗ್ರಹಿಸಿದರು. ರಾಜ್ಯದ ಇತಿಹಾಸದಲ್ಲಿ ₹30 ಸಾವಿರ ಕೋಟಿ ಅವ್ಯವಹಾರ ನೈಸ್ ಸಂಸ್ಥೆ ಮಾಡಿದೆ. ಈ ಬಗ್ಗೆ ಕಾನೂನು ಸಚಿವರ ನೇತೃತ್ವದ ವರದಿ ಸಹ ಕೊಟ್ಟು ವರ್ಷ ಕಳೆದಿದೆ. ಜಗತ್ತಿಗೆ ತಿಳಿದಿರುವ ಬೃಹತ್ ಹಗರಣ ಮುಚ್ಚಿ ಹಾಕಿ ನೈಸ್ ಸಂಸ್ಥೆ ಬಚಾವ್ ಮಾಡುವ ಯತ್ನ ನಡೆದಿದೆ ಎಂದು ಹೊರಟ್ಟಿ ಆಗ್ರಹಿಸಿ ಸಭಾಧ್ಯಕ್ಷರು ತಮ್ಮ ಅಧಿಕಾರ ಬಳಸಿ ನೈಸ್ ಹಗರಣದ ಚರ್ಚೆಗೆ ಅರ್ಧ ಗಂಟೆ ಅವಕಾಶವನ್ನು ಹೃದಯ ವೈಶಾಲ್ಯದಿಂದ ಕೊಡಬೇಕೆಂದು ಆಗ್ರಹಿಸಿದರು. ಒಂದು ನೊಟೀಸ್ ಕೊಟ್ಟರೆ ಅವಕಾಶ ಕೊಡುವುದಾಗಿ ಡಿ. ಎಚ್. ಶಂಕರಮೂರ್ತಿ ತಿಳಿಸಿದರು. ಸ್ವತಃ ಕಾನೂನು ಸಚಿವರ ವರದಿ ಮೇಲೆ ಚರ್ಚೆ ಮಾಡಲು ಅವಕಾಶ ಸಿಗಬೇಕು ಎಂದು ವಿಪಕ್ಷಗಳ ಆಗ್ರಹವಾಯಿತು. ನಿಯಮ 330 ಅಡಿ ಕೊಟ್ಟ ನೊಟೀಸನ್ನು ಅರ್ಧ ಗಂಟೆಯ ಚರ್ಚೆಗೆ ಅವಕಾಶ ಕೊಡುವುದಾಗಿ ಸಭಾಧ್ಯಕ್ಷರು ಸಮಾಧಾನಪಡಿಸಿದರು.

ಮುಂದುವರೆಸಿ: ಸದನ ಇನ್ನೂ ಕೆಲ ದಿನ ಮುಂದುವರೆಸಿ ಪ್ರಶ್ನೋತ್ತರ ಚರ್ಚೆಗೆ ಅವಕಾಶ ನೀಡಬೇಕು ಎಂದು ಬಿಜೆಪಿ, ಜೆಡಿಎಸ್ ಆಗ್ರಹಿಸಿದವು. ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಸದನ ಮುಂದುವರೆಸಲು ಪ್ರತಿಪಕ್ಷಗಳು ಆಗ್ರಹಿಸಿದವು.

Leave A Reply

 Click this button or press Ctrl+G to toggle between Kannada and English

Your email address will not be published.