ಉತ್ತಮ ಸಮಾಜಕ್ಕಾಗಿ

ಜನರ ಕನಸಿನ ಬಯೋಡೈವರ್ಸಿಟಿ ಪಾರ್ಕ್ ಉದ್ಘಾಟನೆ

0

ಬೆಳಗಾವಿ: ಬೆಳಗಾವಿ ನಾಗರಿಕರ ಬಹುದಿನದ ಉದ್ಯಾನವನ ಬೇಡಿಕೆಯನ್ನು ಅರಣ್ಯ ಇಲಾಖೆ ನೆರವೇರಿಸಿದ್ದು ವಿಶಾಲ ‘ಬಯೋಡೈವರಸಿಟಿ’ ಪಾರ್ಕ್ ಇಂದು ನಗರದ ಮಚ್ಛೆ ಬಳಿಯ ವಿಟಿಯು ವಿವಿ ಪಕ್ಕದಲ್ಲಿ ಉದ್ಘಾಟನೆಯಾಯಿತು. ಬೆಳಗಾವಿ ಅರಣ್ಯ ವಿಭಾಗ ಕಳೆದೊಂದು ವರ್ಷದಿಂದ ಬೆಳಗಾವಿ-ಗೋವಾ ಅಂತರ್ ರಾಜ್ಯ ಹೆದ್ದಾರಿಯಲ್ಲಿ ಇಂತಹ ಬೃಹತ್ ಉದ್ಯಾನ ನಿರ್ಮಾಣಕ್ಕೆ ಇಳಿದಿತ್ತು. ತರಹೇವಾರಿ ಔಷಧಿ ಸಸ್ಯಗಳು, ಅಳವಿನಂಚಿನ ಮರಗಳು, ಮಕ್ಕಳ ಆಟದ ಉದ್ಯಾನ, ವಾಕಿಂಗ್ ಪಾಥ್ ಸೇರಿದಂತೆ ಬೆಂಗಳೂರು ಕಬ್ಬನ್ ಪಾರ್ಕ್ ಗೆ ಕಡಿಮೆ ಇಲ್ಲದಂತೆ ಈ ಪಾರ್ಕ್ ಸಿದ್ದಪಡಿಸಲಾಗಿದ್ದು ಇಂದಿನಿಂದ ಜನರ ಬೇಸರದ ಸಮಯ ನೀಗಲಿದೆ.ಅರಣ್ಯ ಸಚಿವ ರಮಾನಾಥ ರೈ ಇಂದು ಬೆಳಿಗ್ಗೆ ಉದ್ಯಾನಕ್ಕೆ ಚಾಲನೆ ನೀಡಿದರು. ಬೆಳಗಾವಿ ಜಿಲ್ಲಾಡಳಿತ ಮತ್ತು ಸರಕಾರ ಬೆಳಗಾವಿಯಲ್ಲಿ ಒಂದು ಉತ್ತಮ ಉದ್ಯಾನ ಜನರಿಗೆ ಮಾಡಿಕೊಡುವ ಭರವಸೆ ನೀಡುವಲ್ಲೇ ಕಾಲ ಕಳೆದ ಮಧ್ಯೆ ಅರಣ್ಯ ಇಲಾಖೆ ಇಂತಹದೊಂದು ಪ್ರಯತ್ನದಲ್ಲಿ ಮುಂದಾಗಿ ಯಶಸ್ಸು ಪಡೆದು ಪ್ರಶಂಸೆಗೆ ಈಡಾಗಿದೆ.

ಸಿಸಿಎಫ್ ಕೃಷ್ಣಾ ಉದಪುಡಿ, ಡಿಎಫ್ ಓ ಬಸವರಾಜ ಪಾಟೀಲ, ಎಸಿಎಫ್ ಶಿವಾನಂದ ನಾಯಿಕವಾಡಿ, ಆರ್ ಎಫ್ ಓ ನಾಗರಾಜ ಬಾಳೆಹೊಸೂರ ಮತ್ತಿತರರು ಉಪಸ್ಥಿತರಿದ್ದರು. ಆರ್ ಎಫ್ ಓ ಶ್ರೀನಾಥ ಮನೋಹರ ಕಡೋಲಕರ ಉದ್ಯಾನ ನಿರ್ಮಾಣಕ್ಕೆ ಡಿಸಿಎಫ್ ಬಿ. ವಿ. ಪಾಟೀಲ ಮಾರ್ಗದರ್ಶನದಲ್ಲಿ ವಿಶೇಷ ಆಸ್ಥೆ ವಹಿಸಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.