ಉತ್ತಮ ಸಮಾಜಕ್ಕಾಗಿ

ರಾಜ್ಯಮಟ್ಟದ ಜಾನಪದ ಕಲಾಸಮ್ಮೇಳನ ಹಾಗೂ ವಿಚಾರ ಸಂಕಿರ್ಣ

0

ಯಮಕನಮರಡಿ :- ಅಖಿಲ ಕರ್ನಾಟಕ ಜೈಬೀಮ ಹಿತರಕ್ಷಣಾ ಹಾಗೂ ಸರ್ವ ಸಮುದಾಯದ ಕಲಾವಿದರ ಸಂಘ ಮತ್ತು ಕನ್ನಡ ಸಂಸ್ಕøತಿ ಇಲಾಖೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ದಿ. 25 ರಂದು ಮುಂಜಾನೆ 11 ಗಂಟೆಗೆ ಕುಮಾರ ಗಂದರ್ವ ರಂಗಮಂದಿರದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಅದೃಶ್ಯಾನಂದ ಸ್ವಾಮಿಗಳು ಶಿವಲಿಂಗೇಶ್ವರಮಠ ಚಿಕಲದಿನ್ನಿ ಹಾಗೂ ಸದ್ಗುರು ನಾಗೇಂದ್ರ ಸ್ವಾಮಿಗಳು ಬಡೇಕೊಳ್ಳಮಠ, ಬ್ರಹ್ಮಾನಂದ ಅಜ್ಜನವರು ಯರನಾಳ ಸುಕ್ಷೇತ್ರ, ವೇದಮೂರ್ತಿ ಮಹಾಂತೇಶ ಶಾಸ್ತ್ರಿಗಳು ಬೈಲಹೊಂಗಲ ಇವರ ಉಪಸ್ಥಿತಿಯಲ್ಲಿ ಬಸವರಾಜ ಚಲವಾದಿ ಪ್ರಗತಿ ಚಿಂತಕರು ಬಾಗಲಕೋಟ ಅವರ ಆಗಮಿಸಿದ್ದು, ಸತ್ಕಾರ ಸಮಾರಂಭವು ಶ್ರೀಮತಿ ಲಕ್ಷ್ಮಿಬಾಯಿ ಸಾಲಹಳ್ಳಿ, ಪ್ರಭಾವತಿ ಕಿರಣಗಿ, ಶಿರಂಜನ ಬೋಳಣ್ಣವರ, ಬಸವರಾಜ ದೊಡಮನಿ, ಮಹಾದೇವ ತಳವಾರ, ವಿಜಯ ತಳವಾರ, ಮುಂತಾದವರು ಉಪಸ್ಥಿತರಿದ್ದರು ಕಲಾಮೇಳವನ್ನು ಯಮಕನಮರಡಿ ಶಾಸಕರು ಹಾಗೂ ಎಐಸಿಸಿ ಕಾರ್ಯದರ್ಶಿಗಳು ಆದ ಸತೀಶಅಣ್ಣಾ ಜಾರಕಿಹೊಳಿಯವರು ಉದ್ಘಾಟಿಸಿ ಮಾತನಾಡುತ್ತಾ ನಮ್ಮ ನಾಡಿನ ಕಲೆ ಸಂಸ್ಕøತಿ ಉಳಿಸಿ ಬೆಳಸುವಲ್ಲಿ ತಮ್ಮ ಜೀವನವನ್ನು ಮುಡುಪಾಗಿಟ್ಟ ಕಲಾವಿದರಿಗೆ ನಾವು ಸರಕಾರದಿಂದ ಹಾಗೂ ನಮ್ಮದೇ ಆದ ಸಂಸ್ಥೆಗಳಿಂದ ಬೆಂಬಲಿಸಲು ಸಿದ್ದರಿದ್ದೆವೆ ಎಂದು ಹೇಳಿದರು.
ಕಾರ್ಯಕ್ರಮಕ್ಕೆ ಜಿಲ್ಲೆಯ ಎಲ್ಲ ಜನಪ್ರತಿನಿದಿಗಳು ಹಾಗೂ ಸಂಘ ಸಂಸ್ಥೆಗಳ ಸದಸ್ಯರು ಉಪಸ್ಥಿತರಿದ್ದು, ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಸಮಿತಿಯ ಗೌರವ ಅದ್ಯಕ್ಷರಾದ ಭರಮಣ್ಣಾ ಮಲ್ಲಪ್ಪ ಸತ್ಯನ್ನವರ ಹಾಗೂ ರಾಜ್ಯಾಧ್ಯಕ್ಷರಾದ ರಾಜಕುಮಾರ ಎಸ್. ಸೂರ್ಯವಂಶಿ, ಉಪಾಧ್ಯಕ್ಷರಾದ ಪ್ರಕಾಶ ಹವಳಪ್ಪ ಮಾದರ, ಪ್ರದಾನ ಕಾರ್ಯದರ್ಶಿ ಕೃಷ್ಣಾ ಈರಪ್ಪಾ ಗುಡದವರ, ಸಂಘಟನಾ ಕಾರ್ಯದರ್ಶಿ ರಮೇಶ ರಾಯಪ್ಪಗೋಳ, ಹಾಗೂ ಶಂಕರ ಈಶ್ವರಪ್ಪ ತಡಸಿ, ಸದಸ್ಯರಾದ ಬಿ. ರಮೇಶ, ಮಹಮ್ಮದ ರಫೀಕ ಬಾಗವಾನ, ಶ್ರೀಮತಿ ಅನಸೂಯಾ ಹಿರೇಮಠ, ಅಣ್ಣಪ್ಪ ಚಂದ್ರಪ್ಪ ಲೆಂಡೆ, ರಾಯಪ್ಪ ನಿಂಗಪ್ಪ ದಡ್ಡಿಮನಿ, ಯಮಕನಮರಡಿ ಜಾನಪದ ಕಲಾವಿದ ಗೋಪಾಲ ಚಿಪಣಿ, ಯುವ ದುರೀಣರಾದ ರವೀಂದ್ರ ಜಿಂಡ್ರಾಳಿ, ತಾ.ಪಂ. ಅಧ್ಯಕ್ಷ ದಸ್ತಗಿರ ಬಸ್ಸಾಪೂರಿ, ಹಾಗೂ ಜಿಲ್ಲಾ ಸಮಿತಿಯ ಅಧ್ಯಕ್ಷರು ಉಪಾದ್ಯಕ್ಷರು ಹಾಗೂ ಸರ್ವಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು.
ಈ ಸಂದರ್ಭದಲ್ಲಿ ಅನೇಕ ಹಿರಿಯ ಕಲಾವಿದರನ್ನು ಹಾಗೂ ಪೂಜ್ಯರನ್ನು ಸನ್ಮಾನಿಸಲಾಯಿತು.

Leave A Reply

 Click this button or press Ctrl+G to toggle between Kannada and English

Your email address will not be published.