ಉತ್ತಮ ಸಮಾಜಕ್ಕಾಗಿ

ಜಿ.ಪಂ.ಸಭೆಯಲ್ಲಿ ಭಾರೀ ಗದ್ದಲಕ್ಕೆ ಕಾರಣವಾಯ್ತು ಮಾತೃಪೂರ್ಣ ಮತ್ತೂ ಬಿಸಿಯೂಟ ಯೋಜನೆ

0

ಬೆಳಗಾವಿ: ಜಿಲ್ಲಾ ಪಂಚಾಯತ ಸಾಮಾನ್ಯ ಸಭೆಯಲ್ಲಿ ಇಂದು ಮಾತೃಪೂರ್ಣ ಹಾಗೂ ಬಿಸಿಯೂಟ ಯೋಜನೆ ವಿಷಯ ಭಾರೀ ಗದ್ದಲ ಹಾಗೂ ಬಿಸಿ ಬಿಸಿ ಚರ್ಚೆಗೆ ಕಾರಣವಾಯಿತು. ಕೆಲ ಮಹಿಳಾ ಸದಸ್ಯರು ಗುಂಪಾಗಿ ವಿಷಯ ಪ್ರಸ್ತಾಪಿಸಿ, ಜಿಲ್ಲೆಯ ಎಲ್ಲ ಭಾಗಗಳಲ್ಲಿ ವಿಶೇಷವಾಗಿ ಗ್ರಾಮೀಣ ಭಾಗಗಳಲ್ಲಿ ಮಾತ್ರಪೂರ್ಣ ಯೋಜನೆ ಸಂಪೂರ್ಣ ವಿಫಲವಾಗಿದ್ದು ಅಂಗನವಾಡಿಗಳಲ್ಲಿ ಗರ್ಭೀಣಿಯರು ಹಾಗೂ ಬಾಣಂತಿಯರು ಊಟ ಮಾಡಲು ಬರುತ್ತಿಲ್ಲ. ಅಂಗನವಾಡಿ ಕೇಂದ್ರಗಳಲ್ಲಿ ಸುಶಿತ್ವ ಇಲ್ಲದೇ ಇರುವುದರಿಂದ ಹಾಗೂ ಹೆರಿಗೆ ನಂತರ ಬಾಣಂತಿಯರು ಅಶಕ್ತರಾಗಿರುತ್ತಾರೆ ಅವರು ದೂರದ ಅಂಗನವಾಡಿಗೆ ನಡೆದು ಬರುವದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು. ಇದಕ್ಕೆ ಸಾಥ ನೀಡಿದ ಹಲವು ಸದಸ್ಯರು ಮಾತೃಪೂರ್ಣ ಯೋಜನೆ ಸಂಪೂರ್ಣ ಭೃಷ್ಟಾಚಾರದಿಂದ ಕೂಡಿದ್ದು ಇದರಲ್ಲಿ ಕೆಳಗಿನವರಿಂದ ಹಿಡಿದು ಮೇಲಿನವರೆಲ್ಲರೂ ಭಾಗಿಯಾಗಿದ್ದಾರೆ ಎಂದು ಆರೊಪಿಸಿದರು. ಅಲ್ಲದೇ ಈ ಯೋಜನೆಯನ್ನು ಮುಚ್ಚಬೇಕು ಎಂದು ಆಗ್ರಹಿಸಿದರು.ಆಗ ಮಧ್ಯ ಪ್ರವೇಶಿಸಿದ ಜಿಲ್ಲಾ ಪಂಚಾಯತ ಸಿ.ಇ.ಓ. ರಾಮಚಂದ್ರನ್ ಸದಸ್ಯರಿಗೆ ಸಮಾಧಾನ ಪಡಿಸಿ ಸರಕಾರದ ಯಾವುದೇ ಯೋಜನೆಗಳು ಒಂದು ನಿರ್ದಿಷ್ಟ ಪ್ರದೇಶಕ್ಕೆ ಮುಚ್ಚಲು ಅಸಾಧ್ಯ ರಾಜ್ಯ ಸರಕಾರಕ್ಕೆ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳುವ ಅಧಿಕಾರವಿದೆ ಎಂದು ತಿಳಿಸಿ ವಿಷಯದ ಬಗ್ಗೆ ಪರಿಶೀಲಿಸಲು ಅಧಿಕಾರಿಗಳಿಗೆ ಆದೇಶ ನೀಡಿದರು.ಇದೇ ಸಂಧರ್ಭದಲ್ಲಿ ಶಾಲೆಗಳಿಗೆ ಸರಿಯಾಗಿ ಬಿಸಿಯೂಟದ ಸಾಮಗ್ರಿಗಳನ್ನು ಪೋರೈಸುತ್ತಿಲ್ಲ ಎಂದು ಹಲವು ಸದಸ್ಯರು ಆರೋಪಿಸಿ ಕಳಪೆ ಆಹಾರ ಪದಾರ್ಥಗಳನ್ನು ಸಭೆಯಲ್ಲಿ ಪ್ರದರ್ಶಿಸಿದರು. ಸದಸ್ಯರ ಪ್ರಶ್ನೆಗಳಿಗೆ ಉತ್ತರ ಕೊಡುವಲ್ಲಿ ಸಂಬಂಧಪಟ್ಟ ಅಧಿಕಾರಿಗಳು ತಡವರಿಸಿದ್ದು ಕಂಡು ಬಂದಿತು.

Leave A Reply

 Click this button or press Ctrl+G to toggle between Kannada and English

Your email address will not be published.