ಉತ್ತಮ ಸಮಾಜಕ್ಕಾಗಿ

ಜಿಲ್ಲೆ ವಿಭಜನೆ ಹೇಳಿಕೆಗೆ ಕನ್ನಡ ಸಂಘಟನೆಗಳ ಪ್ರತಿಭಟನೆ

0

ಬೆಳಗಾವಿ: ಬೆಳಗಾವಿ ಜಿಲ್ಲೆ ವಿಭಜನೆ ಸಂಬಂಧ ಸರಕಾರ ಸುಳಿವು ನೀಡಿದೆ ಎಂಬ ಮಾಹಿತಿ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಜಿಲ್ಲೆಯ ಪ್ರಮುಖ ಕನ್ನಡ ಸಂಘಟನೆಗಳ ಮುಖಂಡರು ಇಂದು ಸಭೆ ನಡೆಸಿ, ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ಮಾಡುವ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪ್ರವೀಣ ಶೆಟ್ಟಿ ಬಣ, ಶಿವರಾಮೇಗೌಡ ಬಣ ಹಾಗೂ ನಾರಾಯಣ ಗೌಡ ಬಣ, ಕನ್ನಡ ಕ್ರಿಯಾ ಸಮಿತಿ ಸೇರಿದಂತೆ ಎಲ್ಲ ಸಂಘಟನೆಗಳು ಪ್ರತ್ಯೇಕವಾಗಿ ಪ್ರತಿಭಟನೆ ದಾಖಲಿಸಿದವು.

ಸಿಎಂ ಸಿದ್ದರಾಮಯ್ಯ ಅವರ ಜಿಲ್ಲಾ ವಿಭಜನೆ ಹೇಳಿಕೆ ಖಂಡನಾರ್ಹ. ರಾಜ್ಯ ವಿರೋಧಿ ಎಂಇಎಸ್ ನ ಚಟುವಟಿಕೆಗಳು ಅತಿಯಾಗಿ ಗರಿಗೆದರುತ್ತವೆ ಎಂಬ ಆತಂಕ ವ್ಯಕ್ತಪಡಿಸಿದರು. ಗಡಿ ವಿವಾದದಲ್ಲಿ ಎಂಇಎಸ್ ಅನ್ನು ಬಲಾಢ್ಯರನ್ನಾಗಿ ಮಾಡುವ ಪ್ರಯತ್ನ ನಮ್ಮ ಸರಕಾರವೇ ಮಾಡಿದಂತಾಗುತ್ತದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ. ಸರಕಾರ ಯಾವುದೇ ನಿರ್ಣಯ ಕೈಗೊಂಡರು ಬೆಳಗಾವಿ ಕನ್ನಡಿಗರೊಂದಿಗೆ ಚರ್ಚಿಸುವುದು ಅತ್ಯಾವಶ್ಯಕ ಎಂದು ಕೋರಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: