ಉತ್ತಮ ಸಮಾಜಕ್ಕಾಗಿ

ಜಾರಕಿಹೊಳಿ ಕಾಂಗ್ರೆಸ್ ನಿಂದ ಹೊರಹಾಕಿ: ಶಂಕರ ಮುನವಳ್ಳಿ

0

ಬೆಳಗಾವಿ: ಮೂಢನಂಬಿಕೆ ಹೆಸರಲ್ಲಿ ಮಾಜಿ ಸಚಿವ ಸತೀಶ ಜಾರಕಿಹೊಳಿ ದಲಿತರನ್ನು ಅವಮಾನ ಮಾಡುತ್ತಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ವಿಷಯ ತಿಳಿಸಿದ ಮಾಜಿ ಕೆಪಿಸಿಸಿ ಸದಸ್ಯ ಶಂಕರ ಮುನವಳ್ಳಿ ಮತ್ತು ದಲಿತ ಸಂಘಟನೆಗಳ ಮುಖಂಡರು ಹಣ & ತೋಳ್ಬಲ ಬಂಡವಾಳ ಮಾಡಿಕೊಂಡು ಸತೀಶ ಸಮಾಜದ ಮೇಲೆ ದಬ್ಬಾಳಿಕೆ ಪ್ರವೃತ್ತಿ ಮೆರೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ತಾನೆಂದರೆ ಜಿಲ್ಲಾಡಳಿತ ಎಂದು ಭಾವಿಸಿರುವ ಸತೀಶ ಜಾರಕಿಹೊಳಿ ಮೂಢನಂಬಿಕೆ ಹೆಸರಲ್ಲಿ ಪ್ರತಿವರ್ಷ ಸ್ಮಶಾನದಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರ ಇಟ್ಟು, ಹಲವಾರು ಸ್ವಾಮೀಜಿಗಳನ್ನು ಕರೆದು ದುಖಃದಲ್ಲಿರುವವರ ಮುಂದೆ ಸಿಹಿ ಊಟ ಮಾಡುವ ಕೆಲಸ ನಿಲ್ಲಿಸಬೇಕು ಎಂದರು.

ಪೇಜಾವರ ಶ್ರೀ ಇಂದು ಅಂಬೇಡ್ಕರ್ ಅವಹೇಳನಕ್ಕೆ ನಿಂತಿದ್ದಾರೆ. ಅಂಬೇಡ್ಕರ್ ಅವರು ಸಂವಿಧಾನ ರಚನಾಕಾರರಲ್ಲಿ ಒಬ್ಬರು ಎಂದು ಪೇಜಾವರ ಶ್ರೀ ಹೇಳಿದ್ದು ಅವಮಾನಿಸುವ ಪರಮಾವಧಿ ಎಂದರು. ಸಂವಿಧಾನದ ಅಡಿಯಲ್ಲಿ ಬದುಕುವ ನಾವೆಲ್ಲ ಅದನ್ನು ರಚಿಸಿದವರಿಗೂ ಯೋಗ್ಯ ಗೌರವ ಕೊಡಬೇಕಾಗುತ್ತದೆ. ಕಾಂಗ್ರೆಸ್ ಪಕ್ಷ ಮೂಲ ಅಸ್ಪ್ರಶ್ಯರ ಮೀಸಲಾತಿ ಕಿತ್ತುಕೊಳ್ಳುತ್ತಿದೆ. ಇತರರನ್ನು ಸೇರಿಸಿದ್ದೀರಿ ಅವರಿಗೆ ಬೇಕಾದರೆ ಪ್ರತ್ಯೇಕ ಮೀಸಲಾತಿ ಕೊಡಿ ಎಂದರು. ದಲಿತರ ಬಗ್ಗೆ ಕಾಂಗ್ರೆಸ್ ಪಕ್ಷ ಮತ್ತು ಸರಕಾರಕ್ಕೆ ಗೌರವವಿದ್ದರೆ ಕೂಡಲೇ ಸತೀಶ ಜಾರಕಿಹೊಳಿ ಅವರನ್ನು ಎಐಸಿಸಿ ಮತ್ತು ಕೆಪಿಸಿಸಿ ಅಧ್ಯಕ್ಷರು ಪಕ್ಷದಿಂದ ಕಿತ್ತು ಹಾಕುವಂತೆ ಶಂಕರ ಮುನವಳ್ಳಿ ಆಗ್ರಹಿಸಿದರು.

ಡಿ. 6 ರಿಂದ ಪ್ರತಿ ಮೂಲ ದಲಿತರ ಮನೆಗೆ ಭೇಟಿ ನೀಡಿ ಯಾವ ಪಕ್ಷಕ್ಕೂ ಮತ ನೀಡದಂತೆ ಉತ್ತರ ಕರ್ನಾಟಕದಲ್ಲಿ ಪ್ರಚಾರಕ್ಕೆ ತೆರಳುವ ಬಗ್ಗೆ ಎಲ್ಲ ದಲಿತ ಸಂಘಟನೆಗಳ ನಿರ್ಧಾರ ಪ್ರಕಟಿಸಲಾಗುವುದು ಎಂದರು. ಡಾ. ಅಂಬೇಡ್ಕರ್ ಪುಣ್ಯತಿಥಿ ದಿನ ಡಿ. 6 ರಂದು ದಲಿತ ಸಂಘಟನೆಗಳು ಗಂಭೀರ ಚರ್ಚೆ ನಡೆಸಲಿವೆ ಎಂದರು. ರಾಜ್ಯದ ಮುಖ್ಯಮಂತ್ರಿ ಸಂವಿಧಾನ ಅರ್ಪಣಾ ದಿನದ ಜಾಹೀರಾತಿನಲ್ಲಿ ಡಾ. ಬಿ. ಆರ್. ಅಂಬೇಡ್ಕರ್ ಭಾವಚಿತ್ರ ಬಳಸಿಲ್ಲ ಎಂದು ಖೇದ ವ್ಯಕ್ತಪಡಿಸಿದರು. ನನ್ನ ಸಮಾಜಕ್ಕೆ ಅಗೌರವ ತೋರಿಸುವ ಕಾಂಗ್ರೆಸ್ ಪಕ್ಷದ ಬಾಂಧವ್ಯ ಬೇಡ ಎನ್ನುವಷ್ಟರ ಮಟ್ಟಿಗೆ ಅಸಹ್ಯ ಮೂಡಿಸಿದೆ ಎಂದರು. ದಲಿತರ ಪರ ನಡೆದುಕೊಳ್ಳುವ ಸರಕಾರಕ್ಕೆ ನಮ್ಮ ಬೆಂಬಲ ಇರುತ್ತದೆ ಎಂದರು.

Leave A Reply

 Click this button or press Ctrl+G to toggle between Kannada and English

Your email address will not be published.