ಉತ್ತಮ ಸಮಾಜಕ್ಕಾಗಿ

ಬೆಳಗಾವಿ ಜಿಲ್ಲೆಯ 12 ಗ್ರಾಮ ಪಂಚಾಯತಗಳಿಗೆ ಉಪಚುನಾವಣೆ

0

ಬೆಳಗಾವಿ, ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆದೇಶದಂತೆ ಬೆಳಗಾವಿ ಜಿಲ್ಲೆಯಲ್ಲಿ 8 ತಾಲೂಕಿನ, 12 ಗ್ರಾಮ ಪಂಚಾಯತಿಗಳ 17 ಗ್ರಾಮ ಪಂಚಾಯತಿ ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ ಜರುಗಿಸಲು ಬೆಳಗಾವಿ ಜಿಲ್ಲಾಧಿಕಾರಿಗಳು ವೇಳಾಪಟ್ಟಿಯನ್ನು ಪ್ರಕಟಿಸಿದ್ದಾರೆ.

ಉಪ ಚುನಾವಣೆ ಜರುಗುವ ಗ್ರಾಮ ಪಂಚಾಯತಿಗಳ ಹಾಗೂ ತೆರವಾದ ವಾರ್ಡಗಳ ವಿವರ:
ಖಾನಾಪೂರ ತಾಲೂಕಿನ 50- ಲಿಂಗನಮಠ (3- ಚುಂಚವಾಡ), ಹುಕ್ಕೇರಿ ತಾಲೂಕಿನ 32- ಸುಲ್ತಾನಪೂರ (06-ನೋಗಿನಿಹಾಳ) ಮತ್ತು 34-ಬೆಲ್ಲದ ಬಾಗೇವಾಡಿ (04-ಬೆಲ್ಲದ ಬಾಗೇವಾಡಿ), ಚಿಕ್ಕೋಡಿ ತಾಲೂಕಿನ 18- ಗಳತಗಾ (11-ಗಳತಗಾ), ಅಥಣಿ ತಾಲೂಕಿನ 30-ಕೋಹಳ್ಳಿ (1-ಕೊಹಳ್ಳಿ), ರಾಯಬಾಗ ತಾಲೂಕಿನ 32-ಕಪ್ಪಲಗುದ್ದಿ (2-ಕಪ್ಪಲಗುದ್ದಿ), ಗೋಕಾಕ ತಾಲೂಕಿನ 06-ಸುಣದೋಳಿ (6- ಹೊನಕುಪ್ಪಿ), 17-ಕೊಳವಿ (04-ಕಡಬಗಟ್ಟಿ), 46-ವಡ್ಡೆರಹಟ್ಟಿ (8-ಪುಲಗಡ್ಡಿ), ಬೈಲಹೊಂಗಲ ತಾಲೂಕಿನ 17-ನೇಗಿನಾಹಾಳ (2-ನೇಗಿನಹಾಳ), 21-ಬೆಳವಡಿ (2-ಬೆಳವಡಿ) ತಲಾ ಒಂದು ಸ್ಥಾನಗಳಿಗೆ ಚುನಾವಣೆ ಜರುಗಿಸಲಾಗುವುದು. ಅದರಂತೆ ಕಿತ್ತೂರು ತಾಲೂಕಿನ 38- ದಾಸ್ತಿಕೋಪ್ಪ (04- ವೀರಾಪೂರ 4 ಸ್ಥಾನ, 05-ಅಮರಾಪೂರ 2 ಸ್ಥಾನ) ಒಟ್ಟು 17 ಸದಸ್ಯರ ಸ್ಥಾನಗಳಿಗೆ ಉಪಚುನಾವಣೆ ಜರುಗಿಸಲಾಗುತ್ತಿದೆ.

ಚುನಾವಣೆ ವೇಳಾಪಟ್ಟಿ ವಿವರ:
ನಾಮಪತ್ರಗಳನ್ನು ಸಲ್ಲಿಸಲು ನವೆಂಬರ್ 30 ಗುರುವಾರ ಕೊನೆಯ ದಿನವಾಗಿದ್ದು, ನಾಮಪತ್ರಗಳ ಪರಿಶೀಲನೆ ಡಿಸೆಂಬರ್ 1 ಶುಕ್ರವಾರದಂದು ನಡೆಯಲಿದ್ದು, ಮತ್ತು ಉಮೇದುವಾರಿಕೆಗಳನ್ನು ಹಿಂತೆಗೆದುಕೊಳ್ಳಲು ಡಿಸೆಂಬರ್ 4 ಸೋಮವಾರ ಕೊನೆಯ ದಿನಾಂಕವಾಗಿದೆ.
ಮತದಾನ ಅವಶ್ಯವಿದ್ದರೆ ಮತದಾನವನ್ನು ಡಿಸೆಂಬರ್ 17ರ ಭಾನುವಾರದಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಸಲಾಗುವುದು ಹಾಗೂ ಮರು ಮತದಾನ ಅವಶ್ಯವಿದ್ದರೆ ಡಿಸೆಂಬರ್ 19ರ ಮಂಗಳವಾರದಂದು ಬೆಳಿಗ್ಗೆ 7 ಗಂಟೆಯಿಂದ ಸಾಯಂಕಾಲ 5 ಗಂಟೆಯವರೆಗೆ ನಡೆಸಲಾಗುವುದು.
ಮತಗಳ ಏಣಿಕೆ ಡಿಸೆಂಬರ್ 20 ಬುಧವಾರದಂದು ಬೆಳಿಗ್ಗೆ 8 ಗಂಟೆಯಿಂದ ಆಯಾ ತಾಲೂಕಿನ ಕೇಂದ್ರ ಸ್ಥಳಗಳಲ್ಲಿ ನಡೆಯಲಿದೆ. ಡಿಸೆಂಬರ್ 20ರ ಬುಧವಾರದೊಳಗೆ ಚುನಾವಣೆಯನ್ನು ಮುಕ್ತಾಯಗೊಳ್ಳಿಸಲಾಗುವುದೆಂದು ಜಿಲ್ಲಾಧಿಕಾರಿಗಳಾದ ಜಿಯಾವುಲ್ಲಾ ಎಸ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.