ಉತ್ತಮ ಸಮಾಜಕ್ಕಾಗಿ

ದಾರಿಮ್ಯಾಲಿನ ಹೊಲ’ ಧ್ವನಿಸುರುಳಿ ಬಿಡುಗಡೆ

0

ಬೆಳಗಾವಿ :- ನಶಿಸಿ ಹೋಗುತ್ತಿರುವ ಜಾನಪದ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯ ಮಾಡುವುದು ಅತ್ಯಗತ್ಯವಾಗಿದೆ ಎಂದು ಬೆಳಗಾವಿ ನಗರ ಪೊಲೀಸ ಆಯುಕ್ತ ಟಿ. ಜೆ. ಕೃಷ್ಣಭಟ್ ಹೇಳಿದರು.
ರವಿವಾರ ಕುಮಾರ ಗಂಧರ್ವ ರಂಗಮಂದಿರದಲ್ಲಿ ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ ರಾಜ್ಯೋತ್ಸವ ನಿಮಿತ್ತ ಹಮ್ಮಿಕೊಂಡ ಸಮಾರಂಭದಲ್ಲಿ ಮಾರಿಹಾಳ ಠಾಣೆ ಇನ್ಸ್‍ಪೇಕ್ಟರ ಜ್ಯೋತಿರ್ಲಿಂಗ ಹೊನಕಟ್ಟಿ ಹಾಗೂ ಅವರ ಧರ್ಮ ಪತ್ನಿ ಅಶ್ವಿನಿ ಹೊನಕಟ್ಟಿ ಅವರ ದಾರಿಮ್ಯಾಲಿನ ಹೊಲ ಧ್ವನಿಸುರುಳಿ ಬಿಡುಗಡೆಗೊಳಿಸಿ ಅವರು ಮಾತನಾಡಿದರು.
ಜಾನಪದ ಕಲೆ ನಶಿಸುತ್ತಿರುವ ಇಂದಿನ ದಿನಗಳ ನಡುವೆಯೂ ಜೋತಿರ್ಲಿಂಗ ಹೊನಕಟ್ಟಿ ಅವರು ಜಾನಪದ ಕಲೆ, ಸಂಸ್ಕøತಿ, ಸಾವಯವ ಸಿರಿಧಾನ್ಯಗಳ ಜಾಗೃತಿ ಸ್ವದೇಶಿ ವಸ್ತುಗಳ ಬಳಕೆ ಕುರಿತು ಜಾಗೃತಿ ಇತ್ಯಾದಿ ಕಾರ್ಯ ಮಾಡುತ್ತಿರುವುದು ಪ್ರಶಂಸನಿಯವಾಗಿದೆ ಎಂದು ಕೃಷ್ಣಭಟ್ಟ ಮೆಚ್ಚುಗೆ ವ್ಯಕ್ತಪಡಿಸಿದರು.
ಜೋತಿರ್ಲಿಂಗ ಹೊನಕಟ್ಟಿ ಅವರು ಕೌಟುಂಬಿಕ ಪರಿಸರದಿಂದ ಭಜನಾ ಗೀತೆಗಳಿಂದ ಜಾನಪದ ಕಲೆಯನ್ನು ಮೈಗೂಡಿಸಿಕೊಂಡು ಬಂದಿದ್ದಾರೆ ಈ ಕಲೆ ಕುರಿತು ಅವರ ಒಲವು ಹೆಚ್ಚಾದಂತೆ ಅದನ್ನೇ ಬಹುವಾಗಿ ಆಸಕ್ತಿಯುತವಾಗಿ ಬೆಳೆಸಿಕೊಳ್ಳುತ್ತಾ ವಿವಿಧ ಸಾರ್ವಜನಿಕ ವೇದಿಕೆಗಳಲ್ಲಿ ಜಾನಪದ ಗೀತೆಗಳ ಕಾರ್ಯಕ್ರಮ ನೀಡತೊಡಗಿದರು.
ಇವರ ‘ದಾರಿಮ್ಯಾಲಿನ ಹೊಲ’ ಧ್ವನಿ ಸುರುಳಿಯಲ್ಲಿ ಮೂಲ ಮಟ್ಟದ ಜಾನಪದ ಗೀತೆಗಳು ಸೇರಿದೆ. ಬೀಳಗಿಯ ಸಿದ್ದಪ್ಪ ಬಿದರಿ ಸಾಹಿತ್ಯ, ಪ್ರಕಾಶ ಜೈನ ದಾಸನ ಹಳ್ಳಿ, ರಾಗ ಸಂಯೋಜನೆ ಹಾಗೂ ಮುನ್ನಾ ಚಿತ್ರದುರ್ಗ ಇವರು ಸಂಗೀತ ನೀಡಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.