ಉತ್ತಮ ಸಮಾಜಕ್ಕಾಗಿ

ನಾಮದೇವ’ರಿಗೆ ದಿನಪತ್ರಿಕೆ ಅವಹೇಳನ: ವಾರಕರಿಗಳ ಪ್ರತಿಭಟನೆ

0

ಬೆಳಗಾವಿ: ಹಿಂದೂ ಸಂಸ್ಕ್ರತಿಯ ಮಹಾಸಂತ, ಉತ್ತರ ಭಾರತದಲ್ಲಿ ವಾರಕರಿಗಳ ಆರಾಧ್ಯ ದೈವ, ಪಂಡರಪುರ ವಿಠ್ಠಲನ ಮಹಾಭಕ್ತ ಶ್ರೀ ಸಂತ ನಾಮದೇವ ಮಹಾರಾಜರನ್ನು ಶಿವಮೊಗ್ಗ ಮೂಲದ ಪತ್ರಿಕೆಯೊಂದು ಅವಮಾನಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಗರದಲ್ಲಿ ಇಂದು ನಡೆಯಿತು.ನೂರಾರು ವಾರಕರಿಗಳು ತಮ್ಮ ಸಂಪ್ರದಾಯಿಕ ಉಡುಗೆ ತೊಡುಗೆ, ತಕೆಗೆ ಟೋಪಿ, ವಾದ್ಯಗಳ ಸಹಿತ ಆಗಮಿಸಿ ಸದರಿ ಪತ್ರಿಕೆ ವಿರುದ್ಧ ಕ್ರಮಕ್ಕೆ ಆಗ್ರಹಿಸಿದರು. ಶಿವಮೊಗ್ಗದ ದಿನಪತ್ರಿಕೆ ‘ನಾವಿಕ’ ಅಕ್ಟೋಬರ್‌ 24 ರ ಸಂಚಿಕೆಯಲ್ಲಿ ಪ್ರಕಟಿಸಿದ ಬರಹ ವಾರಕರಿಗಳನ್ನು ದಿಗ್ಭ್ರಾಂತರನ್ನಾಗಿ ಮಾಡಿದೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ. ಸಂತ ನಾಮದೇವರನ್ನು ದರೋಡೆಕೋರ, ಕೊಲೆಗಡುಕ ಸುಮಾರು 64 ಕೊಲೆ ಮಾಡಿದಾತ ಎಂದು ಬರೆಯಲಾಗಿದೆ. ಇದು ಧಾರ್ಮಿಕ ಭಾವನೆ ಕೆರಳಿಸುವ ಕುಚೋದ್ಯದ ಬರಹವಾಗಿದೆ. ಪತ್ರಿಕೆ ಸಂಪಾದಕ ಎಂ. ಎನ್. ಸುಂದರರಾಜ್ ಮತ್ತು ಅವರ ಪತ್ರಿಕೆ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ‘ವಾರಕರಿಗಳು’ ಆಗ್ರಹಿಸಿದರು. ಸರಕಾರ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ತೀವೃಗೊಳಿಸುವುದಾಗಿ ತಿಳಿಸಿದರು. ಶ್ರೀ ನಾಮದೇವ ದೈವಖಿ ಸಂಸ್ಥಾ ಪ್ರತಿಭಟನೆ ನೇತೃತ್ವ ವಹಿಸಿತು.

ದ್ವಾರಕನಾಥ ಉರನಕರ, ದೀಪಕ ಖಟಾವಕರ, ವಿಠ್ಠಲ ಕಾಂಬಳೆ, ಶಶಿಕಾಂತ ಹಲವಿ, ರಾಜನ್ ಕಾಕಡೆ, ಬಾಳು ಭಕ್ತಿಕರ, ವಿಷ್ಣು ಕೊಂಡುಸ್ಕರ್ ಇತರರು ಉಪಸ್ಥಿತರಿದ್ದರು.

(ಮಹಾರಾಷ್ಟ್ರ ರಾಜ್ಯದ ಪರಮದೈವ, ಲಕ್ಷಾಂತರ ಭಕ್ತರ ಗುರು ನಾಮದೇವ ಅವರ ಅನುಯಾಯಿಗಳು ವಾರಕರಿಗಳೆಂದು ಹೆಸರಾಗಿದ್ದಾರೆ)

Leave A Reply

 Click this button or press Ctrl+G to toggle between Kannada and English

Your email address will not be published.