ಉತ್ತಮ ಸಮಾಜಕ್ಕಾಗಿ

“ರಾಷ್ಟ್ರ ಭೂಷಣ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಾಯಿತು.

0

ಬೆಳಗಾವಿ:ವಿಜಯಕುಮಾರ ರಂಗಪ್ಪಾ ಬಡಿಗೇರ, ಪೋರ್‍ಮನ್, ಆಟೋಮೋಬೈಲ್ ವಿಭಾಗ, ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮಾಧಿಕಾರಿ ಸರ್ಕಾರಿ ಪಾಲಿಟೆಕ್ನಿಕ್‍ಮ ಬೆಳಗಾವಿ ಇವರ ಸಾಮಾಜಿಕ ಹಾಗೂ ಶಿಕ್ಷಣ ಕೇತ್ರಕ್ಕೆ ಗಣನೀಯ ಸರ್ವತೋಮುಖ ಅಭಿವೃದ್ದಿಗಾಗಿ ಅವಿಸ್ಮರಣೀಯ ಸೇವೆಸಲ್ಲಿಸಿದ್ದು, ಇವರ ಸೇವಾ ಮನೋಭಾವನೆಯನ್ನು ಗಮನಿಸಿ, ದಿನಾಂಕ: 26-11-2017 ರಂದು ಶ್ರೀ. ಕುಮಾರಗಂಧರ್ವ ಕಲಾ ಮಂದಿರದಲ್ಲಿ ನಡೆದ ”ಸಿರಿಗನ್ನಡ ರಾಜ್ಯೋತ್ಸವ 2017” ಸಮಾರಂಭದಲ್ಲಿ “ಸಿರಿಗನ್ನಡ ರಾಷ್ಟ್ರೀಯ ಪ್ರತಿಷ್ಠಾನ [ರಿ] ಬೆಳಗಾವಿ. ಇವರ ವತಿಯಿಂದ “ರಾಷ್ಟ್ರ ಭೂಷಣ ಪ್ರಶಸ್ತಿ” ಯನ್ನು ನೀಡಿ ಗೌರವಿಸಲಾಯಿತು.
ಸಮಾರಂಭದ ಮುಖ್ಯ ಅತಿಥಿಗಳಾಗಿ ಶ್ರೀ. ಮ.ನಿ.ಪ್ರ.ಸ್ವ. ಸಿದ್ಧರಾಮ ಮಹಾಸ್ವಾಮಿಗಳು, ನಾಗನೂರು ರುದ್ರಾಕ್ಷಿ ಮಠ, ಶ್ರೀ. ಮ.ನಿ.ಪ್ರ.ಸ್ವ. ಚನ್ನಬಸವ ಮಹಾಸ್ವಾಮಿಗಳು, ಓಲೇಮಠ, ಜಮಖಂಡಿ, ಶ್ರೀ. ನ್ಯಾಯಮೂರ್ತಿ ಅರಳೀ ನಾಗರಾಜ, ನಿವೃತ್ತಿ ನ್ಯಾಯಾಧೀಶರ, ಗಂಗಾವತಿ, ಕರ್ನಾಟಕ ಉಚ್ಛ ನ್ಯಾಯಾಲಯ, ಬೆಂಗಳೂರು, ಶ್ರೀಮತಿ. ಆಶಾ ಪ್ರಶಾಂತರಾವ ಐಹೊಳೆ, ಅಧ್ಯಕ್ಷರು ಜಿಲ್ಲಾ ಪಂಚಾಯತ, ಬೆಳಗಾವಿ. ಶ್ರೀ. ನಾಗರಾಜ ಯಾಧವ, ಅಧ್ಯಕ್ಷರು, ಬಿ.ಎಮ್.ಟಿ.ಸಿ. ಬೆಂಗಳೂರು. ಶ್ರೀ. ಟಿ.ಜಿ. ಕೃಷ್ಣಾಭಟ್, ಪೋಲಿಸ್ ಆಯುಕ್ತರು, ಬೆಳಗಾವಿ. ಶ್ರೀಮತಿ. ಸೀಮ ಲಾಟ್ಕರ, ಡಿ.ಸಿ.ಪಿ., ಬೆಳಗಾವಿ. ಸಮಾರಂಭದಲ್ಲಿ ಪ್ರತಿಷ್ಠಾನದ ಅಧ್ಯಕ್ಷರಾದ ಶ್ರೀ. ಶೆಶಿಧರ ಘಿವಾರಿ, ಉಪಸ್ಥಿತರಿದ್ದರು.
ಸರ್ಕಾರಿ ಪಾಲಿಟೆಕ್ನಿಕ್ ಬೆಳಗಾವಿಯ ಪ್ರಾಚಾರ್ಯರಾದ ಶ್ರೀ. ವಾಯ್.ಎನ್. ದೊಡ್ಡಮನಿ, ಹರ್ಷ ವ್ಯಕ್ತಪಡಿಸಿ ಅಭಿನಂದಿಸಿರುತ್ತಾರೆ. ಹಾಗೂ ಎಲ್ಲಾ ಸಿಬ್ಬಂದಿಯ ವರ್ಗದವರು ಕೂಡಾ ಅಭಿನಂದಿಸಿರುತ್ತಾರೆ.

Leave A Reply

 Click this button or press Ctrl+G to toggle between Kannada and English

Your email address will not be published.