ಉತ್ತಮ ಸಮಾಜಕ್ಕಾಗಿ

ಕನಸು ಹೊತ್ತು ತಂದ ಪಾಲಿಕೆ ಸದಸ್ಯರು: ಕಾರ್ಯ ರೂಪಕ್ಕೆ ಬರುವುದು ಯಾವಾಗ?

0

ಬೆಳಗಾವಿ: ಮೊದಲಿನ ವರಂತೆಯೇ ಅಧ್ಯಯನದ ನೆಪದಲ್ಲಿ ಪಾಲಿಕೆ ಸದಸ್ಯರು ಈ ಬಾರಿಯೂ ಜಾಲಿ ಟೂರ ಮುಗಿಸಿ ಬಂದಿದ್ದು ಅಧ್ಯಯನ ಪ್ರವಾಸದ ನಂತರ ಇದೇ ಮೊದಲಬಾರಿ ಪರಿಷತ್ ಸಭೆಯಲ್ಲಿ ಎಲ್ಲ ಸದಸ್ಯರು ಸೇರಿದ್ದರು.ತಮ್ಮ ತಮ್ಮ ಅನುಭವವನ್ನು ಹಂಚಿಕೊಳ್ಳುತ್ತಾ ಎಲ್ಲರೂ ಚಂಡೀಗಡ ನಗರ ಪಾಲಿಕೆಯ ಬಗ್ಗೆ ಪ್ರಶಂಸೆಯ ಮಾತನಾಡಿದರು. ಕೆಲವರು ಅಲ್ಲಿಯ ಒಳಚರಂಡಿ ಹಾಗೂ ತ್ಯಾಜ್ಯ ವಿಂಗಡಣೆ ಮರುಬಳಕೆ ಬಗ್ಗೆ ಉದಾಹರಿಸಿದರೆ ಕೆಲವರು ಟ್ರಾಫಿಕ್ ಹಾಗೂ ಪಾರ್ಕಿಂಗ್ ವ್ಯವಸ್ಥೆ ಬಗ್ಗೆ ಪ್ರಶಂಶಿಸಿದರು.

ಇದಕ್ಕೆ ಮಧ್ಯ ಪ್ರವೇಶಿಸಿ ಮಾತನಾಡಿದ ಸರಳಾ ಹೆರೇಕರ ಜನರ ದುಡ್ಡಲ್ಲಿ ಚಂಡೀಗಡಕ್ಕೆ ಹೋಗಿ ಮಜಾ ಮಾಡಿ ಬಂದಿದ್ದೀರಿ ಅದೇ ದುಡ್ಡನ್ನು ನಗರದ ಅಭಿವೃದ್ಧಿಗೆ ವಿನಿಯೋಗಿಸಬಹುದಿತ್ತು ಎಂದು ಆಕ್ರೋಶ ವ್ಯಕ್ತ ಪಡಿಸಿದರು. ಅದೇ ರೀತಿ ಯಾವುದೇ ಕೆಲಸಗಳಿದ್ದರೂ ಅಧಿಕಾರಿಗಳು ಸ್ಪಂದಿಸುವದಿಲ್ಲ ಕೇವಲ ಹಾರಿಕೆ ಉತ್ತರ ನೀಡುತ್ತಾರೆಯೆ ವಿನಹ ಕೆಲಸ ಮಾಡುವದಿಲ್ಲವೆಂದು ಪಕ್ಷಾತೀತವಾಗಿ ಎಲ್ಲ ಸದಸ್ಯರು ಒಕ್ಕೊರಲಿನಿಂದ ಆರೋಪಿಸಿದರು. ಚಂಡಿಗಡ ಮಾದರಿ ಮಾಡುವದು ಹಗುರವಾದ ಕೆಲಸವಲ್ಲ ಮೊದಲು ಸ್ಮಾರ್ಟ್ ಸಿ.ಟಿ. ಯೋಜನೆಯ ಅನುಷ್ಠಾನಕ್ಕೆ ಪ್ರಯತ್ನಿಸಬೇಕೆಂದು ಕೆಲ ಸದಸ್ಯರು ಇದೇ ಸಂಧರ್ಭದಲ್ಲಿ ಮನವರಿಕೆ ಮಾಡಿಸಿದರು.

ಪಾಲಿಕೆ ಸಭೆಯಲ್ಲಿ ಝಟಾಪಟಿಗೆ ಕಾರಣವಾಯಿತು ಗುತ್ತಿಗೆದಾರರ ವಿಷಯ

ಬೆಳಗಾವಿ: ಇಂದು ನಗರ ಪಾಲಿಕೆಯಲ್ಲಿ ನಡೆದ ಪರಿಷತ್ ಸಭೆಯಲ್ಲಿ ಗುತ್ತಿಗೆದಾರರ ವಿಷಯ ಭಾರೀ ಜಟಾಪಟಿಗೆ ಕಾರಣವಾಯಿತು. ಗುತ್ತಿಗೆದಾರರಿಗೆ ಸಂಬಂಧಪಟ್ಟ ವಿಷಯೊಂದರ ಬಗ್ಗೆ ಚರ್ಚೆ ನಡೆಯುತ್ತಿದ್ದಾಗ ಮಧ್ಯ ಪ್ರವೇಶಿಸಿ ಮಾತನಾಡಿದ ಹಿರಿಯ ಪಾಲಿಕೆ ಸದಸ್ಯೆ ಸರಳಾ ಹಿರೇಕರ ನಗರದ ವಿವಿಧ ಪ್ರದೇಶಗಳಲ್ಲಿ ನಡೆದ ಹಾಗೂ ಸದ್ಯ ನಡೆಯುತ್ತಿರುವ ಕಾಮಗಾರಿಗಳು ಕಳಪೆಯಾಗಿದ್ದರೂ ಕೂಡ ಮತ್ತೇ ಅವರಿಗೆ ಗುತ್ತಿಗೆ ಸಿಗುತ್ತಿರುವ ಬಗ್ಗೆ ಆಕ್ರೊಷ ವ್ಯಕ್ತ ಪಡಿಸುತ್ತಿದ್ದಾಗ ಮಧ್ಯ ಪ್ರವೇಶಿಸಿದ ಮೇಯರ ಬಾಂದೇಕರ ಸರಳಾ ಅವರಿಗೆ ಕುಳಿತುಕೊಳ್ಳುವಂತೆ ಆದೇಶ ನೀಡಿದರು.ಇದರಿಂದ ಮತ್ತೇ ಕೆರಳಿದ ಸರಳಾ ಹೇರೆಕರ ನಿಮ್ಮ ಹಾಗೇ ನಾವೇನು ಮೇಯರ ಗೆ ಚಪ್ಪಲಿ, ಬಳೆ ತೋರಿಸುತ್ತಿಲ್ಲ ಒಂದು ಗಂಭೀರ ವಿಷಯ ಪ್ರಸ್ತಾಪಿಸುತ್ತಿದ್ದೇನೆ ಎಂದು ತರಾಟೆಗೆ ತೆಗೆದುಕೊಂಡರು ಇದು ಕೆಲ ಸಮಯ ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷದ ಸದಸ್ಯರ ನಡುವೆ ಝಟಾಪಟಿಗೆ ಕಾರಣವಾಯಿತು .

 

Leave A Reply

 Click this button or press Ctrl+G to toggle between Kannada and English

Your email address will not be published.