ಉತ್ತಮ ಸಮಾಜಕ್ಕಾಗಿ

ಪ್ರಕಟಣೆಗಳು

0

ಲೆಫ್ಟಿನೆಂಟ್ ಗವರ್ನರ್ ಕಿರಣ ಬೇಡಿ; ಪ್ರವಾಸ ವಿವರ
ಬೆಳಗಾವಿ,  ಪುದುಚೆರಿಯ ಲೆಫ್ಟಿನಂಟ್ ಗವರ್ನರ್ ಕಿರಣ ಬೇಡಿ ಅವರು ಡಿಸೆಂಬರ್ 1 ರಂದು ಬೆಳಿಗ್ಗೆ 9-05 ಗಂಟೆಗೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಆಗಮಿಸುವರು. ನಂತರ 11-30 ಗಂಟೆಗೆ ಬೆಳಗಾವಿಯಿಂದ ರಸ್ತೆ ಮಾರ್ಗವಾಗಿ ಹುಬ್ಬಳ್ಳಿಗೆ ಪ್ರಯಾಣ ಬೆಳೆಸುವರು ಎಂದು ಅಪರ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಫೆಲೋಶಿಪ್‍ಗಾಗಿ ಅರ್ಜಿ ಆಹ್ವಾನ
ಬೆಳಗಾವಿ: 2017-18ನೇ ಸಾಲಿನಲ್ಲಿ ಪÀೂರ್ಣಾವಧಿ ಪಿಎಚ್.ಡಿ ಅಧ್ಯಯನದಲ್ಲಿ ತೊಡಗಿರುವ ಹಿಂದುಳಿದ ವರ್ಗಗಳ ಪ್ರವರ್ಗ-1, 2(ಎ), 3(ಎ), 3(ಬಿ) ಹಾಗೂ ಇತರೆ (ಔಣheಡಿ ಔಃಅ) ಗಳಿಗೆ ಸೇರಿದ ಅರ್ಹ ವಿದ್ಯಾರ್ಥಿಗಳಿಗೆ ಮಾಸಿಕ ರೂ. 5000/- ದಂತೆ ವ್ಯಾಸಾಂಗ ವೇತನ, ಫೆಲೋಶಿಪ್ ಹಾಗೂ ನಿಗದಿತ ಶುಲ್ಕ ವಿನಾಯಿತಿ ಮಂಜೂರು ಮಾಡಲು ಅರ್ಜಿ ಆಹ್ವಾನಿಸಲಾಗಿದೆ.
ಇಲಾಖೆಯಿಂದ ಈ ಹಿಂದೆ ಮಾಸಿಕ ವ್ಯಾಸಾಂಗ ವೇತನ/ಫೆಲೋಶಿಪ್‍ಗೆ ಆಯ್ಕೆಯಾಗಿದ್ದು, ಪ್ರಸ್ತುತ ಸಾಲಿನಲ್ಲಿ ಮುಂದುವರಿಯುತ್ತಿರುವ ಅರ್ಹ ನವೀಕರಣ ವಿದ್ಯಾರ್ಥಿಗಳು ಹಾಗೂ ಹೊಸ ವಿದ್ಯಾರ್ಥಿಗಳು ಆನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: 07-12-2017. ಅರ್ಜಿ ಸಲ್ಲಿಸಿದ ನಂತರ ಆನ್‍ಲೈನ್ ಅರ್ಜಿಯ ಪ್ರತಿ ಹಾಗೂ ಅಪ್‍ಲೋಡ್ ಮಾಡಿರುವ ಎಲ್ಲಾ ದಾಖಲೆಗಳ ಒಂದು ಸೆಟ್ ದೃಢೀಕೃತ ಪ್ರತಿಗಳನ್ನು ಜಿಲ್ಲಾ ಅಧಿಕಾರಿಗಳ ಕಾರ್ಯಾಲಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಬೆಳಗಾವಿ ಇಲ್ಲಿಗೆ ಕೊನೆಯ ದಿನಾಂಕದೊಳಗಾಗಿ ಸಲ್ಲಿಸುವುದು. ಇಲ್ಲದಿದ್ದಲ್ಲಿ ಅರ್ಜಿಯನ್ನು ತಿರಸ್ಕರಿಸಲಾಗುವುದು. ಹೆಚ್ಚಿನ ವಿವರಗಳಿಗಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ವೆಬ್‍ಸೈಟ್ ತಿತಿತಿ.bಚಿಛಿಞತಿಚಿಡಿಜಛಿಟಚಿsses.ಞಚಿಡಿ.ಟಿiಛಿ.iಟಿ ಅಥವಾ ಸಹಾಯವಾಣಿ ಸಂಖ್ಯೆ: 080-65970004 ನ್ನು ಸಂಪರ್ಕಿಸಬಹುದಾಗಿದೆ ಎಂದು ಬೆಳಗಾವಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಚಿಕ್ಕೋಡಿ ವಾ.ಕ.ರ.ಸಂಸ್ಥೆ ಪ್ರತಿ ತಿಂಗಳು 29 ರಂದು
ಸಂವೇದನ ಕಾರ್ಯಕ್ರಮ
ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಜಾರಿಗೊಳಿಸಿರುವ ಬಸ್ ದಿನ (ಪ್ರತಿ ತಿಂಗಳು ದಿನಾಂಕ 20 ರಂದು) ಪ್ರತಿ ತಿಂಗಳ 2ನೇ ತಾರೀಖಿನಂದು ನಮ್ಮ ಬಸ್ ನಮ್ಮ ನಿಲ್ದಾಣ ಸ್ವಚ್ಛತೆಗಾಗಿ ಆಂಧೋಲನ, ಕಾರ್ಯಕ್ರಮಗಳಿಗೆ ಜನರಿಂದ ಭಾರೀ ಬೆಂಬಲ, ಪ್ರೋತ್ಸಾಹ ವ್ಯಕ್ತವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸದಾನಂದ ವಿ ಡಂಗನವರ, ಹರ್ಷ ವ್ಯಕ್ತಪಡಿಸಿರುತ್ತಾರೆ.
ಸಾರಿಗೆ ನಿಗಮದಲ್ಲಿರುವ ಹಲವಾರು ಸಮಸ್ಯೆಗಳಿಗೆ ಪ್ರಯಾಣಿಕರೇ ಮುಂದಾಗಿ ಸಲಹೆ ಸೂಚನೆ ನೀಡುತ್ತಿದ್ದಾರೆ. ಇದೊಂದು ಉತ್ತಮ ಬೆಳವಣೆಗೆ. ಬಸ್‍ಗಳಲ್ಲಿ, ನಿಲ್ದಾಣಗಳಲ್ಲಿ ಮಹಿಳೆಯರು ಮತ್ತು ಹಿರಿಯ ನಾಗರಿಕರಿಗೆ ಆಗುವ ಅನಾನುಕೂಲ ನಿವಾರಣೆಗೆ ಮತ್ತು ಅವರ ಸುಖಕರ ಪ್ರಯಾಣಕ್ಕೆ ಏನು ಮಾಡಬೇಕೆಂಬ ಉದ್ದೇಶದಿಂದ ಪ್ರತಿ ತಿಂಗಳು ದಿನಾಂಕ 29 ರಂದು ಮಹಿಳೆಯರು ಮತ್ತು ಹಿರಿಯ ನಾಗರಿಕರ ಜೊತೆ ಸಂವೇದನೆ ಇಟ್ಟುಕೊಳ್ಳಲಾಗಿದೆ.
ಆ ದಿನ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಚಿಕ್ಕೋಡಿ ವಿಭಾಗೀಯ ಕಛೇರಿಯಲ್ಲಿ ಪೂರ್ತಿ ದಿನ ಮಹಿಳೆಯರು ಮತ್ತು ಹಿರಿಯ ನಾಗರಿಕರಿಂದ ಮಾತ್ರ ಸಲಹೆ ಸೂಚನೆ, ಅಹವಾಲು ಸ್ವೀಕರಿಸಲಾಗುವುದು, ಇದು ಸಾರಿಗೆ ಇಲಾಖೆಯಲ್ಲಿ ಪ್ರಯಾಣಿಕರೇ ನಮ್ಮ ಪ್ರಭುಗಳು ಮಾದರಿಯಲ್ಲಿ ಮಾಡುತ್ತಿರುವ ವಿನೂತನ ಪ್ರಯತ್ನ.

ಆ ದಿನ ಅಂದರೆ ಪ್ರತಿ ತಿಂಗಳ ದಿನಾಂಕ 29 ರಂದು ಬೆಳಿಗ್ಗೆ 11 ರಿಂದ ಸಾಯಂಕಾಲ 5.30 ರವರೆಗೆ ಮಹಿಳೆಯರು ಮತ್ತು ಹಿರಿಯ ನಾಗರಿಕರು ಪ್ರತ್ಯಕ್ಷವಾಗಿ ಸಂಪರ್ಕಿಸಲು ಅವಕಾಶ ಕಲ್ಪಿಸಲಾಗುವುದು.
ಈ ಸಂವೇದನೆಯಲ್ಲಿ ಮಹಿಳೆಯರು ಮತ್ತು ಹಿರಿಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವ ಮೂಲಕ ಸಾರಿಗೆ ನಿಗಮ ಇನ್ನಷ್ಟು ಉತ್ಕøಷ್ಟ ಸೇವೆ ಸಲ್ಲಿಸಬೇಕೆಂಬ ನಮ್ಮ ಬಯಕೆಗೆ ಸ್ಪಂದಿಸಲು ವಿನಂತಿಸುವೆ.
ನಮಗೆ ಬಂದ ದೂರುಗಳನ್ನು ಸಲಹೆಗಳನ್ನು ವಿಂಗಡಿಸಿ ತಕ್ಷಣ ಕ್ರಮ ಕೈಕೊಳ್ಳಲಾಗುವುದು ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪ್ರತಿ ತಿಂಗಳು 29 ರಂದು ಹಿರಿಯ ನಾಗರಿಕರು
ಮತ್ತು ಮಹಿಳೆಯರಿಂದ ಅಹ್ವಾಲು ಸ್ವೀಕಾರ
ಬೆಳಗಾವಿ: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು ಪ್ರಪ್ರಥಮ ಬಾರಿಗೆ ಹಿರಿಯ ನಾಗರಿಕರು ಮತ್ತು ಮಹಿಳಾ ಪ್ರಯಾಣಿಕರ ಕುಂದುಕೊರತೆ ನಿವಾರಣೆ ಮಾಡುವ ಪ್ರಯುಕ್ತ ಇದೇ ಮಾಹೆಯ ದಿನಾಂಕ 29 ರಿಂದ ಕೇವಲ ಹಿರಿಯ ನಾಗರಿಕರು ಮತ್ತು ಮಹಿಳೆಯರಿಂದ ಮಾತ್ರ ಸಾರಿಗೆ ಸೌಲಭ್ಯಗಳಿಗೆ ಸಂಬಂಧಿಸಿದಂತೆ ಅಹವಾಲುಗಳನ್ನು ಸ್ವೀಕರಿಸುವ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ನವೆಂಬರ್ 29ರಿಂದ ಸದರಿ ಅಭಿಯಾನವನ್ನು ಪ್ರಾರಂಭಿಸಲಾಗಿದೆ. ಕಾರಣ ಸಾರಿಗೆ ಸೌಲಭ್ಯಗಳಿಗೆ ಸಂಭಂದಿಸಿದಂತೆ ಕೇವಲ ಹಿರಿಯ ನಾಗರಿಕರು ಮತ್ತು ಮಹಿಳೆಯರು ತಮ್ಮ ಅಹ್ವಾಲುಗಳನ್ನು ಪ್ರತಿ ತಿಂಗಳು ದಿನಾಂಕ 29 ರಂದು ವಾ.ಕ.ರ.ಸಾ ಸಂಸ್ಥೆ ಬೆಳಗಾವಿಯ ವಿಭಾಗೀಯ ಕಛೇರಿಯಲ್ಲಿ ಸಮಯ ಬೆಳಿಗ್ಗೆ 11.00 ರಿಂದ 13.00 ರ ವರೆಗೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ ಎಂದು ವಿಭಾಗೀಯ ನಿಯಂತ್ರಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನ.30 ರಂದು ವಿತಾವಿಯಲ್ಲಿ 69ನೇ ಕನ್ನಡ ರಾಜ್ಯೋತ್ಸವ
ಬೆಳಗಾವಿ: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ವತಿಯಿಂದ 69ನೇ ಕನ್ನಡ ರಾಜ್ಯೋತ್ಸವ ಹಾಗೂ 2017ನೇ ಸಾಲಿನ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕøತರ ಸನ್ಮಾನ ಸಮಾರಂಭವನ್ನು ನವೆಂಬರ್ 30 ರಂದು ಬೆಳಿಗ್ಗೆ 10-30 ಗಂಟೆಗೆ ವಿತಾವಿ ಪ್ರೇಕ್ಷಾಗ್ರಹ ಜ್ಞಾನ ಸಂಗಮ ಆವರಣದಲ್ಲಿ ಆಯೋಜಿಸಲಾಗಿದೆ.
ವೈಚಾರಿಕ ಬರಹಗಾರರು ಹಾಗೂ ಅನುವಾದಕರು, ಪ್ರದ್ಮಶ್ರೀ ಪುರಸ್ಕøತಿ ಕವಿಗಳಾದ ನಾಡೋಜ ಪ್ರೊ.ಕೆ.ಎಸ್.ನಿಸಾರ್ ಅಹಮದ್ ಅವರು ಮುಖ್ಯ ಅತಿಥಿಗಳಾಗಿ ಪಾಲ್ಗೊಳುವರು. ಬೆಳಗಾವಿ ನಾಗನೂರು ರುದ್ರಾಕ್ಷಿಮಠ ಶ್ರೀ ಮ.ನಿ.ಪ್ರ. ಡಾ ಸಿದ್ಧರಾಮ ಮಹಾಸ್ವಾಮಿಗಳು, ಬೆಳಗಾವಿ ಖ್ಯಾತ ಅಭಿಯಂತರರು ಶ್ರೀ ಬಿ.ಎ. ರೆಡ್ಡಿ, ಖ್ಯಾತ ಹಿಂದೂಸ್ತಾನಿ ಸಂಗೀತಗಾರರಾದ ಶ್ರೀ ಪಂ ರಾಜಪ್ರಭು ಧೋತ್ರೆ ಅವರು ಸನ್ಮಾನಿತರಾಗಿ ಉಪಸ್ಥಿತರಿರುವರು. ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಕುಲಪತಿಗಳಾದ ಡಾ. ಕರಿಸಿದ್ದಪ್ಪ ಅವರು ಅಧ್ಯಕ್ಷತೆ ವಹಿಸುವರು.

Leave A Reply

 Click this button or press Ctrl+G to toggle between Kannada and English

Your email address will not be published.