ಉತ್ತಮ ಸಮಾಜಕ್ಕಾಗಿ

ಅನಧಿಕೃತ ವಧಾಲಯಗಳನ್ನು ಬಂದ್ ಮಾಡಿ: ಬಿಜೆಪಿ ಆಗ್ರಹ

0

ಬೆಳಗಾವಿ: ಹಿರೇಬಾಗೇವಾಡಿಯಿಂದ ಬೆಳಗಾವಿ ನಗರಕ್ಕೆ ಕಸಾಯಿಖಾನೆ ಸ್ಥಳಾಂತರಗೊಳಿಸಕೂಡದು. ನಗರದಲ್ಲಿರುವ ಅನಧಿಕೃತ ಕಸಾಯಿಖಾನೆಗಳನ್ನು ತೆರವುಗೊಳಿಸಬೇಕು ಎಂದು ಒತ್ತಾಯಿಸಿ ಮಂಗಳವಾರ ಬಿಜೆಪಿ ಮಹಾನಗರ ಘಟಕದ ಪ್ರಧಾನ ಕಾರ್ಯದರ್ಶಿ ರಾಜು ಟೋಪಣ್ಣವರ ನೇತೃತ್ವದಲ್ಲಿ ನಾಗರಿಕರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಹಿರೇಬಾಗೇವಾಡಿ ಹೊರವಲಯದಲ್ಲಿ 20 ಎಕರೆ ಪ್ರದೇಶದಲ್ಲಿ ಆರಂಭವಾಗಬೇಕಿದ್ದ ಕುರಿ ಮತ್ತು ಮೇಕೆ ವಧಾಗಾರ(ಕಸಾಯಿಖಾನೆ)ಗೆ ಅಲ್ಲಿನ ಜನರು ವಿರೋಧ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ ಪಶು ಸಂಗೋಪನೆ ಸಚಿವ ಎ.ಮಂಜು ಅದನ್ನು ನಗರದ ರಾಮತೀರ್ಥ ನಗರದಲ್ಲಿ ಸ್ಥಳಾಂತರ ಮಾಡುವ ಆದೇಶ ಮಾಡಿರುವುದನ್ನು ಪ್ರತಿಭಟನಾಕಾರರು ಖಂಡಿಸಿದರು.

ರಾಮತೀರ್ಥ ನಗರದ ಪ್ರದೇಶದಲ್ಲಿ ಹಿಂದುಗಳು ಹೆಚ್ಚಾಗಿ ವಾಸವಿದ್ದಾರೆ. ಸಿದ್ದೇಶ್ವರ ದೇವಸ್ಥಾನ ಸೇರಿದಂತೆ ಇನ್ನಿತರ ದೇವಸ್ಥಾನಗಳು ಇವೆ. ಇಲ್ಲಿನ ಜನರ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ ಯಾವುದೇ ಕಾರಣಕ್ಕೂ ಈ ಭಾಗದಲ್ಲಿ ಕಸಾಯಿಖಾನೆ ಸ್ಥಳಾಂತರ ಮಾಡಬಾರದು. ಕಸಾಯಿಖಾನೆ ಸ್ಥಳಾಂತರ ಮಾಡಿದರೆ ಮುಂದಾಗುವ ಅನಾಹುತಗಳಿಗೆ ಜಿಲ್ಲಾಡಳಿತ ಹೊಣೆಯಾಗಬೇಕಾದಿತು ಎಂದು ಮನವಿಯಲ್ಲಿ ತಿಳಿಸಿದ್ದಾರೆ. ರಾಮತೀರ್ಥ ನಗರ, ಅಟೋ ನಗರ ಪ್ರದೇಶದಲ್ಲಿ ಕರ್ನಾಟಕ ಮುನ್ಸಿಪಲ್ ಕಾಯ್ದೆಯಡಿ ಕಸಾಯಿಖಾನೆಗಳು ನಗರ ಪ್ರದೇಶ ಬಿಟ್ಟು 5 ಕಿ.ಮಿ ದೂರದಲ್ಲಿರಬೇಕು ಎಂದು ಆದೇಶವಿದ್ದರೂ ಅದನ್ನು ಉಲ್ಲಂಘನೆ ಮಾಡಿ ಅನಧಿಕೃತವಾಗಿ ಅನೇಕ ಕಸಾಯಿಖಾನೆಗಳು ಕಾರ್ಯನಿರ್ವಹಿಸುತ್ತವೆ. ಅಲ್ಲಿ ಗೋವುಗಳನ್ನು ಸಹ ವಧಾ(ಕಡಿಯಲಾಗುತ್ತದೆ) ಇದಕ್ಕೆ ಉತ್ತರ ಕ್ಷೇತ್ರದ ಶಾಸಕರ ಕುಮ್ಮಕ್ಕುವಿದೆ ಮಹಾನಗರ ಪಾಲಿಕೆಯವರು ಅವರ ಮಾತಿನಂತೆ ಅನಧಿಕೃತ ಕಸಾಯಿಖಾನೆಗಳಿಗೆ ಸಹಕಾರ ನೀಡುತ್ತಿದ್ದಾರೆ. ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ರಾಮತೀರ್ಥ ನಗರ, ಅಟೋ ನಗರ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಧಿಕೃತ ಕಸಾಯಿಖಾನೆ ತೆರವುಗೊಳಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು, ಇಲ್ಲವಾದಲ್ಲಿ ನಾವು ಅವುಗಳನ್ನು ತೆರವುಗೊಳಿಸುತ್ತವೆ ಮುಂದೆ ಏನಾದರೂ ಕಾನೂನು ಸುವ್ಯವಸ್ಥೆ ಹದಗೆಟ್ಟರೆ ಅದಕ್ಕೆ ಜಿಲ್ಲಾಡಳಿತ ಹೊಣೆಯಾಗುತ್ತದೆ ಎಂದು ಪ್ರತಿಭಟನಾಕಾರರು ಎಚ್ಚರಿಸಿದ್ದಾರೆ.

ಮುರಗೇಶ ಪಾಟೀಲ, ಮಹಾಂತ ಒಕ್ಕುಂದ, ವಿನಾಯಕ ಪಾಟೀಲ, ಮಹಾದೇವ ಧರೇನ್ನವರ, ಈರಯ್ಯಾ ಖೋತ, ಶಿವಾನಂದ ಖಾರಿ, ಕೇದಾರ ಜವಲಾಪೂರೆ ಸೇರಿದಂತೆ ಮುಂತಾದವರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.