ಉತ್ತಮ ಸಮಾಜಕ್ಕಾಗಿ

ಕಮಿಷ್ನರ್ ಕೃಷ್ಣಭಟ್ ಅವರಿಗೆ ಅಭಿಮಾನದ ನಾಗರಿಕ ಬೀಳ್ಕೊಡುಗೆ

0

ಬೆಳಗಾವಿ: ಬೆಳಗಾವಿ ಪೊಲೀಸ್ ಕಮಿಷ್ನರ್ ನಾಳೆ ನಿವೃತ್ತಿ ಹೊಂದಲಿರುವ ಹಿರಿಯ ಐಪಿಎಸ್ ಅಧಿಕಾರಿ ಟಿ. ಜಿ. ಕೃಷ್ಣಭಟ್ ಅವರಿಗೆ ಬೆಳಗಾವಿ ನಾಗರಿಕರ ಅಭಿಮಾನದ ಬೀಳ್ಕೊಡುಗೆ ಇಂದು ಸಂಜೆ ನಡೆಯಿತು. ಮಾಜಿ ಮಹಾಪೌರ ವಿಜಯ ಮೋರೆ ಮಾತನಾಡಿ ಸಾಮಾಜಿಕ ಕಳಕಳಿ, ಸಾಮಾನ್ಯ ನಾಗರಿಕರೊಂದಿಗಿನ ಒಡನಾಟ, ಮಹಿಳೆಯರು, ಮಕ್ಕಳು ಮತ್ತು ಅನಾಥ ವೃದ್ಧರೊಂದಿಗಿದ್ದ ಅವರ ಗೌರವಾದ ಬನ್ನಿಸಲು ಅಸಾಧ್ಯ ಎಂದು ತಿಳಿಸಿದರು. ನಿವೃತ್ತ ಪೊಲೀಸ್ ಅಧಿಕಾರಿಗಳ ಸಂಘದ ಅಧಿಕಾರಿಗಳು, ಪತ್ರಕರ್ತರು, ಸಂಘಟನೆಗಳ ಮುಖಂಡರು ಮಾತನಾಡಿದರು.

DCP ಅಮರನಾಥರೆಡ್ಡಿ ಮಾತನಾಡಿ ಪೊಲೀಸ್ ಇಲಾಖೆಯಲ್ಲಿ ಉನ್ನತಾಧಿಕಾರಿ ಆಡಳಿತ ವೈಖರಿಯಂತೆ ಕೆಳಗಿನ ಸಿಬ್ಬಂಧಿ ಮಾನಸಿಕ ಸ್ಥಿತಿ ಇರುತ್ತದೆ. ಇದು ಪೊಲೀಸ್ ಇಲಾಖೆಯಲ್ಲಿ ವಿಶೇಷತೆಯಾಗಿದೆ ಎಂದರು. ಜ್ಞಾನದ ಜತೆ ಅನುಭವ ಪೊಲೀಸ್ ಇಲಾಖೆಯಲ್ಲಿ ಮುಖ್ಯ. ಅಧಿಕಾರಿಗಳ ಮೇಲೆ ಹೆಚ್ಚಿನ ಒತ್ತಡ ಕಡಿಮೆಯಾಗಲು ಮೇಲಾಧಿಕಾರಿಗಳ ಅಭಯ ಇರಬೇಕಾಗುತ್ತದೆ ಎಂದರು. ಮಂಗಳೂರು ನಂತರ ಬೆಳಗಾವಿಯೇ ಪ್ರಮುಖ ಸೂಕ್ಷ್ಮ ಕೇಂದ್ರವಾಗಿದೆ. ಯುವ ಅಧಿಕಾರಿಗಳಿಗೆ ಕೈಬಿಚ್ಚಿ ಕೆಲಸ ಮಾಡಲು, ಸೂಕ್ತ ನಿರ್ಧಾರ ಕೈಗೊಳ್ಳಲು ಅವರು ಸ್ವತಂತ್ರವಾಗಿ ಬಿಟ್ಟಿದ್ದರು ಎಂದರು.ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ.‌ಆರ್. ರವಿಕಾಂತೇಗೌಡ ಮಾತನಾಡಿ ಕಳೆದ 40 ವರ್ಷದ ಹಿಂದೆ 20 ವರ್ಷದ ಯುವಕನಾಗಿದ್ದಾಗ ಬೆಳಗಾವಿಗೆ ಕೃಷ್ಣಭಟ್ ಬಂದಿದ್ದರು. ಸತತ 5 ವರ್ಷ ಬೆಳಗಾವಿ ಜಿಲ್ಲೆಯಲ್ಲಿ ಸೇವೆ ಸಲ್ಲಿಸಿ ಇಂದು ಮತ್ತೆ ಇಲ್ಲಿಯೇ ನಿವೃತ್ತಿಯಾಗುತ್ತಿದ್ದಾರೆ ಇದು ಯೋಗಾಯೋಗ ಎಂದು ಬಣ್ಣಿಸಿದರು. ಕೆಳ ಅಧಿಕಾರಿಗಳ ಬೆನ್ನೆಲುಬಾಗಿ ನಿಲ್ಲಬೇಕಾದದ್ದು ಬಹಳ ಮುಖ್ಯ. ಅಂತಹ ಇಲಾಖೆಯ ಬೆನ್ನೆಲುಬು ಕೃಷ್ಣಭಟ ಆಗಿದ್ದರು ಎಂದರು.

ಐಜಿಪಿ ರಾಮಚಂದ್ರರಾವ್, ಡಿಸಿ ಎಸ್. ಜಿಯಾವುಲ್ಲಾ ಮಾತನಾಡಿದರು. ಸಿಇಓ ರಾಮಚಂದ್ರನ್, ಲೋಕಾಯುಕ್ತ ಎಸ್ಪಿ ರವಿಕುಮಾರ, ಡಿಸಿಪಿ ಸೀಮಾ ಲಾಟಕರ, ನಗರ ಕಮಿಷ್ನರ್ ಶಶಿಧರ ಕುರೇರ, ವಿಟಿಯು ಕುಲಪತಿ ಡಾ. ಕರಿಸಿದ್ದಪ್ಪ ಇತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.