ಉತ್ತಮ ಸಮಾಜಕ್ಕಾಗಿ

ಪ್ರಕಟಣೆಗಳು

0

ಪಹಣಿ ಪತ್ರ ಮುದ್ರಿಸಲು ನೂತನ ಕ್ರಮ
ಬೆಳಗಾವಿ: ಪಹಣಿ ವಿತರಣೆಯಲ್ಲಿ ಆಗುತ್ತಿರುವ ಅನಾನೂಕೂಲತೆಯನ್ನು ಹಾಗೂ ಪೂರ್ವ ಮುದ್ರಿತ ಪಹಣಿ ನಮೂನೆಗಾಗಿ ಸರಬರಾಜುದಾರರ ಮೇಲೆ ಅವಲಂಬಿತವಾಗುವುದನ್ನು ತಪ್ಪಿಸಲು ರಾಜ್ಯ ಸರ್ಕಾರ ತಂತ್ರಾಂಶದಲ್ಲಿಯೇ ಕಪ್ಪು-ಬಿಳುಪು ಬಣ್ಣದಲ್ಲಿ ಲೀಗಲ್ ಗಾತ್ರದ ಕಾಗದದ ಮೇಲೆ ಪಹಣಿಯನ್ನು ಮುದ್ರಿಸಲು ಕ್ರಮಕೈಗೊಂಡಿದೆ.
ಪ್ರಸ್ತುತ ಟೆಂಡರ್‍ದಾರರಿಂದ ನೀಲಿ ಬಣ್ಣದ ಪೂರ್ವ ಮುದ್ರಿತ ಪಹಣಿ ನಮೂನೆಯನ್ನು ಪಡೆದು ಸದರಿ ನಮೂನೆಯಲ್ಲಿ ಭೂಮಿ ಡೇಟಾಬೇಸ್‍ನಿಂದ ಪಹಣಿಯ ಮಾಹಿತಿಯನ್ನು ಮುದ್ರಿಸಿ ಸಾರ್ವಜನಿಕರಿಗೆ ವಿತರಿಸಲಾಗುತ್ತಿತ್ತು. ಪ್ರಸ್ತುತ ಇರುವ ವ್ಯವಸ್ಥೆಯಲ್ಲಿ ಪಹಣಿ ಪತ್ರಿಕೆಗಳನ್ನು ಮುದ್ರಿಸಲು, ಪೂರ್ವ ಮುದ್ರಿತ ಪಹಣಿ ನಮೂನೆಗಾಗಿ ಸರ್ಕಾರವು ಸರಬರಾಜುದಾರರ ಮೇಲೆ ಸಂಪೂರ್ಣವಾಗಿ ಅವಲಂಭಿತವಾಗಿತ್ತು. ಇದರಿಂದ ರೈತರಿಗೆ ಪಹಣಿಗಳ ತುರ್ತು ಅಗತ್ಯವಿದ್ದ ಸಂದರ್ಭದಲ್ಲಿ ಅಂದರೆ ಬ್ಯಾಂಕುಗಳಿಂದ ಅಥವಾ ಯಾವುದಾದರೂ ಸಂಸ್ಥೆಯಿಂದ ಸಾಲ ಪಡೆಯಲು ಕಷ್ಟವಾಗುತ್ತಿತ್ತು.
ಸದರಿ ಕಪ್ಪು-ಬಿಳುಪು ಗಾತ್ರದ ಪಹಣಿಯಲ್ಲಿ ಈ ಹಿಂದೆ ನೀಡುತ್ತಿದ್ದ ಪಹಣಿಯಲ್ಲಿದ್ದ ಎಲ್ಲಾ ಸುರಕ್ಷತಾ ಕ್ರಮಗಳನ್ನು ಒಳಗೊಂಡಿದ್ದು, ಹೆಚ್ಚುವರಿ ಭದ್ರತಾ ವೈಶಿಷ್ಟ್ಯಗಳಾದ ವಿಶೇಷ ಪಹಣಿ ಗುರುತಿನ ಸಂಖ್ಯೆ, ಕ್ರಮ ಸಂಖ್ಯೆ, ಬಾರ್‍ಕೋಡ, ಡಿಜಿಟಲ್ ಸಹಿಗಳನ್ನು ಒಳಗೊಂಡಿದೆ ಹಾಗೂ ಹಿಂದೆಂದಿಗಿಂತಲೂ ಹೆಚ್ಚು ಸುರಕ್ಷಿತವಾಗಿದೆ.

ಸಾರ್ವಜನಿಕರು ಈ ಬದಲಾವಣಿಯನ್ನು ಗಮನದಲ್ಲಿಟ್ಟುಕೊಂಡು ಯಾವುದೇ ಗೊಂದಲಕ್ಕೆ ಒಳಗಾಗದೇ ತಾಲೂಕು ಕಚೇರಿಯ ಭೂಮಿ ಕೇಂದ್ರದಲ್ಲಿ, ಅಟಲ್‍ಜೀ ಜನಸ್ನೇಹಿ ಕೇಂದ್ರಗಳಲ್ಲಿ, ಗ್ರಾಮ ಪಂಚಾಯತಿಯ ಬಾಪೂಜೀ ಸೇವಾ ಕೇಂದ್ರಗಳಲ್ಲಿ ಹಾಗೂ ಸರ್ಕಾರದಿಂದ ಪಹಣಿ ವಿತರಿಸಲು ಅನುಮತಿ ನೀಡಿರುವ ಖಾಸಗಿ ಕೇಂದ್ರಗಳಲ್ಲಿ ವಿತರಿಸಲಾಗುವ ಪಹಣಿ ಪತ್ರಿಕೆಗಳನ್ನು ಪಡೆದು ತಮ್ಮ ಅವಶ್ಯಕ ಕಾರ್ಯಗಳಿಗೆ ಬಳಸಿಕೊಳ್ಳಬಹುದು.
ಸಾರ್ವಜನಿಕರು ಪಹಣಿ ಪತ್ರದ ನೈಜತೆಯನ್ನು ವೆಬ್‍ಸೈಟ್ ತಿತಿತಿ.ಟಚಿಟಿಜಡಿeಛಿoಡಿಜs.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಪರಿಶೀಲಿಸಿಕೊಳ್ಳಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ನ.30 ರಂದು ಪಿಂಚಣಿ ಅದಾಲತ್
ಬೆಳಗಾವಿ:  ಸಮಾಜಿಕ ಭದ್ರತಾ ಯೋಜನೆಯಡಿ ವಿವಿಧ ಮಾಸಿಕ ಪಿಂಚಣಿ ಪ್ರಕರಣಗಳ ಕುರಿತು ಸಾರ್ವನಿಕರ ಅಹವಾಲು ಹಾಗೂ ಹೊಸ ಅರ್ಜಿಗಳನ್ನು ಸ್ವಿಕೃತಿ ಹಾಗೂ ವಿಲೇವಾರಿ ಕುರಿತು ಉಪವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನವೆಂಬರ್ 30 ರಂದು ಮುಂಜಾನೆ 11 ಗಂಟೆಗೆ ಬಸಾಪೂರ ಹಣಮಾನ ದೇವಸ್ಥಾನದಲ್ಲಿ ಪಿಂಚಣಿ ಅದಾಲತ್‍ನ್ನು ಆಯೋಜಿಸಲಾಗಿದೆ.
ಸಾರ್ವಜನಿಕರು ಸದರಿ ದಿನದಂದು ಅದಾಲತನಲ್ಲಿ ಭಾಗವಹಿಸಿ ತಮ್ಮ ಅಹವಾಲುಗಳು ಅಥವಾ ದೂರುಗಳು ಏನಾದರೂ ಇದ್ದಲ್ಲಿ ಈ ಅದಾಲತನಲ್ಲಿ ಅರ್ಜಿಸಲ್ಲಿಸಿ ಪರಿಹಾರ ಕಂಡುಕೊಳ್ಳಬಹುದು ಎಂದು ಬೆಳಗಾವಿ ತಹಶೀಲ್ದಾರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಐಎಸ್‍ಐ/ಬಿಐಎಸ್ ಹೊಂದಿಲ್ಲದ ಕುಡಿಯುವ ನೀರಿನ ಘಟಕಗಳ
ಮಾಹಿತಿ ನೀಡಲು ಮನವಿ
ಬೆಳಗಾವಿ: ಬೆಳಗಾವಿ ಜಿಲ್ಲೆಯಲ್ಲಿ ಐಎಸ್‍ಐ ಅಥವಾ ಬಿಐಎಸ್ ಪ್ರಮಾಣ ಪತ್ರ ಹೊಂದಿಲ್ಲದೇ ಕುಡಿಯುವ ನೀರನ್ನು ಮಾರಾಟ ಮಾಡುತ್ತಿರುವ ಕುಡಿಯುವ ನೀರಿನ ಘಟಕಗಳು ಕಂಡುಬಂದರೇ ಸಾರ್ವಜನಿಕರು “ಅಂಕಿತ ಅಧಿಕಾರಿಗಳ ಕಚೇರಿ, ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆ, ಲಸಿಕಾ ಸಂಸ್ಥೆ ಆವರಣ, ಟಿಳಕವಾಡಿ, ಬೆಳಗಾವಿ-590006” ಈ ವಿಳಾಸಕ್ಕೆ ಅಥವಾ ದೂ: 0831-2485973 ಗೆ ತಿಳಿಸಬೇಕೆಂದು ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಇಲಾಖೆಯ ಅಂಕಿತ ಅಧಿಕಾರಿಗಳು ಪ್ರಕಟಣೆಯಲ್ಲಿ ಕೋರಿದ್ದಾರೆ.

ಹಿಂಗಾರು ಹಂಗಾವಿನ ಬೆಳೆ ವಿಮೆಗೆ ಡಿ.15 ಕೊನೆಯ ದಿನ
ಬೆಳಗಾವಿ:  ಬೆಳಗಾವಿ ಜಿಲ್ಲೆಯಲ್ಲಿ 2017ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆ ಮತ್ತು ಹವಾಮಾನ ಆಧಾರಿತ ವಿಮಾ ಯೋಜನೆಯನ್ನು ಜಾರಿಗೊಳಿಸಿದ್ದು, ರೈತರು ತಮ್ಮ ಹೋಬಳಿಗೆ ಹಾಗೂ ಗ್ರಾಮ ಪಂಚಾಯತ ಸಂಬಂಧಿಸಿದ ಬೆಳೆಗಳ ಬಗ್ಗೆ ಮಾಹಿತಿಯನ್ನು ಬ್ಯಾಂಕುಗಳು ಅಥವಾ ಕೃಷಿ ಇಲಾಖೆಯ ಕಚೇರಿಗಳಲ್ಲಿ ಪಡೆದು ತಮ್ಮ ವ್ಯಾಪ್ತಿಯ ಬ್ಯಾಂಕ್ ಅಥವಾ ಸಹಕಾರಿ ಬ್ಯಾಂಕುಗಳಲ್ಲಿ ಬೆಳೆ ವಿಮೆ ಕಂತು ತುಂಬಬಹುದಾಗಿದೆ.
ಹಿಂಗಾರು ಹಂಗಾಮಿನ ಇತರೆ ಅಧುಸೂಚಿತ ಬೆಳೆಗಳಿಗೆ ವಿಮೆ ಕಂತನ್ನು ಪಾವತಿಸಲು ನೆವೆಂಬರ್ 30 ಕೊನೆಯ ದಿನವಾಗಿರುತ್ತದೆ ಹಾಗೂ ಮುಸುಕಿನ ಜೋಳ(ನೀರಾವರಿ) ಮತ್ತು ಗೋಧಿ (ನೀರಾವರಿ) ಬೆಳೆಗಳಿಗೆ ವಿಮೆ ಕಂತು ಪಾವತಿಸಲು ಡಿಸೆಂಬರ್ 15 ಕೊನೆಯ ದಿನವಾಗಿರುತ್ತದೆ ಎಂದು ಬೆಳಗಾವಿ ಜಂಟಿ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.