ಉತ್ತಮ ಸಮಾಜಕ್ಕಾಗಿ

Lt. ಗವರ್ನರ್ ಕಿರಣ ಬೇಡಿಗೆ ಜಿಲ್ಲಾಡಳಿತದ ಸುಸ್ವಾಗತ

0

ಬೆಳಗಾವಿ: ದೇಶದ ಮೊಟ್ಟ ಮೊದಲ ಮಹಿಳಾ ಐಪಿಎಸ್ ಅಧಿಕಾರಿಯೆಂದೇ ದೇಶಾದ್ಯಂತ ಹೆಸರಾದ, ಕಟ್ಟುನಿಟ್ಟಿನ ಅಧಿಕಾರಿ ಕಿರಣ ಬೇಡಿ ಸದ್ಯ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಪದವಿಯಲ್ಲಿ ಇಂದು ಕುಂದಾನಗರಿ ಬೆಳಗಾವಿಗೆ ಆಗಮಿಸಿದರು.Her Excellency ಅವರಿಗೆ ಜಿಲ್ಲಾಡಳಿತ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ ಅಭೂತಪೂರ್ವ ಸ್ವಾಗತ ಕೋರಿತು. ಜಿಲ್ಲಾಧಿಕಾರಿ ಎಸ್. ಜಿಯಾವುಲ್ಲಾ, ಜಿಲ್ಲಾ ಪಂಚಾಯಿತಿ ಸಿಇಓ ಆರ್. ರಾಮಚಂದ್ರನ್, ಡಿಸಿಪಿ ಸೀಮಾ ಲಾಟಕರ, ಡಿಸಿಪಿ ಅಮರನಾಥರೆಡ್ಡಿ, ಎಸಿ ಕವಿತಾ ಯೋಗಪ್ಪನವರ ಹಾಗೂ ಹಿರಿಯ ಅಧಿಕಾರಿಗಳು ಗವರ್ನರ್ ಅವರಿಗೆ ಹೂಗುಚ್ಛ ನೀಡಿ ಸ್ವಾಗತಿಸಿದರು. ಹುಬ್ಬಳ್ಳಿ ಕಾರ್ಯಕ್ರಮಕ್ಕೆ ಆಗಮಿಸುವ ಮಾರ್ಗಮಧ್ಯೆ ಬೆಳಗಾವಿ ವಿಮಾನ ನಿಲ್ದಾಣಕ್ಕೆ ಕಿರಣ ಬೇಡಿ ಬಂದಿಳಿದು ರಸ್ತೆ ಮೂಲಕ ಮುಂದೆ ಸಾಗಿದರು. ಸ್ವಾಗತಿಸಿದ ಅಧಿಕಾರಿಗಳೊಂದಿಗೆ ಗವರ್ನರ್ ಪದವಿಯ ಶಿಷ್ಟಾಚಾರದ ಆಚೆ ಆತ್ಮೀಯವಾಗಿ ಮಾತನಾಡಿದರು ಎಂದು ಹಿರಿಯ ಅಧಿಕಾರಿಗಳು ಹರ್ಷ ವ್ಯಕ್ತಪಡಿಸಿದ್ದಾರೆ.ಆಂದೋಲನದಲ್ಲಿ: ಐಪಿಎಸ್ ನಿವೃತ್ತಿ ನಂತರ ಭ್ರಷ್ಟಾಚಾರ ವಿರೋಧಿ ಆಂದೋಲನದಲ್ಲಿ ಅಣ್ಣಾ ಹಜಾರೆ ಅವರೊಂದಿಗೆ ಪಾಲ್ಗೊಂಡು ಹೆಸರಾಗಿದ್ದ ಕಿರಣ ಬೇಡಿ ಆ ನಂತರದ ರಾಜಕೀಯ ಬೆಳವಣಿಗೆಗಳ ನಂತರ ಪುದುಚೇರಿ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಕವಾಗಿದ್ದರು. ಮಹಿಳಾ ಐಪಿಎಸ್ ಅಧಿಕಾರಿಯಾಗಿದ್ದಾಗ ತೋರಿದ್ದ ಕಾರ್ಯದಕ್ಷತೆ ಇಡೀ ದೇಶದ ತುಂಬ ಅವರು ಹೆಸರು ಮಾಡಲು ಕಾರಣವಾಗಿತ್ತು. ಇಂದಿಗೂ ದೇಶದ ಅಧಿಕಾರಿ( Bureaucrats) ವಲಯದಲ್ಲಿ ಕಿರಣ ಬೇಡಿ ಹೆಚ್ಚಿನ ಪ್ರೀತಿ ಗೌರವಕ್ಕೆ ಪಾತ್ರರಾಗಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.