ಉತ್ತಮ ಸಮಾಜಕ್ಕಾಗಿ

ಲಿಂಗಾಯತ ಧರ್ಮ ಹೋರಾಟ ಸಮಿತಿ ಪ್ರತಿಭಟನೆ

0

ಬೆಳಗಾವಿ: ವೀರ ರಾಣಿ ಕಿತ್ತೂರು ಚನ್ನಮ್ಮ ಮತ್ತು ರಾಣಿ ಒಣಕಿ ಓಬವ್ವ ಅವರ ಬಗ್ಗೆ ಬಹಳ ಹಗುರವಾದ ಕಾಮೆಂಟ್ ಸಾಮಾಜಿಕ ಜಾಲತಾಣದಲ್ಲಿ ಸಂಸದ ಪ್ರತಾಪಸಿಂಹ ಅವರನ್ನು ತಳುಕು ಹಾಕಿಕೊಂಡು ಮೂಡಿರುವುದು ಈಗ ಗಂಭೀರತೆ ಪಡೆಯುತ್ತಿದೆ. ಬೆಳಗಾವಿಯಲ್ಲಿ ಸಂಘಟನೆಗಳು ದಿನದಿಂದ ದಿನಕ್ಕೆ ಹೆಚ್ಚು ಗಂಭೀರವಾಗಿ ಪರಿಗಣಿಸುತ್ತಿದ್ದು ಸ್ವತಂತ್ರ ಲಿಂಗಾಯತ ಧರ್ಮ ಹೋರಾಟ ಸಮಿತಿ ಇಂದು ಸಂಸದ ಪ್ರತಾಪಸಿಂಹ ವಿರುದ್ಧ ಪ್ರತಿಭಟನೆ ನಡೆಸಿತು.

ಲಿಂಗಾಯತ ಸ್ವತಂತ್ರ ಧರ್ಮ ಬೇಡಿಕೆ ರಾಷ್ಟ್ರವ್ಯಾಪಿ ವ್ಯಾಪಿಸುತ್ತಿರುವುದನ್ನು ಸಹಿಸಿಕೊಳ್ಳದೆ ಇಂತಹ ವಿಪರೀತ ಹೇಳಿಕೆಗಳನ್ನು ನೀಡಿ ಇತಿಹಾಸ ತಿರುಚಿ, ಧರ್ಮಸಂಹಿಷ್ಣುತೆ ಮುರಿಯುವ ಪ್ರಯತ್ನ ನಡೆದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇತಿಹಾಸದಲ್ಲಿ ಅಚ್ಛಳಿಯದ ಹೆಸರು ಗಳಿಸಿರುವ ಚನ್ನಮ್ಮ ಮತ್ತು ಓಬವ್ವರ ಹೆಸರು ಕೆಡೆಸುವ ಪ್ರಯತ್ನ ನಿಲ್ಲಿಸುವ ಕೆಲಸ ಆಗಬೇಕು ಎಂದು ಪ್ರಧಾನಿಗೆ ಬರೆದ ಪತ್ರದಲ್ಲಿ ಆಗ್ರಹಿಸಿದರು.

ರಾಷ್ಟ್ರೀಯ ಬಸವಸೇನೆ, ಲಿಂಗಾಯತ ಸಂಘಟನೆ, ರಾಷ್ಟ್ರೀಯ ಬಸವದಳ, ವೀರ ಗಣಾಚಾರದಳ ಸಂಯೋಜಿಸಿದ್ದವು. ಅಡಿವೇಶ ಇಟಗಿ, ಶಂಕರ ಗುಡಸ, ರಾಮನಗೌಡ ಪಾಟೀಲ, ಎಸ್. ಎಸ್. ಪಾಟೀಲ, ಸುನೀಲ ಸಿರಗನ್ನವರ, ಎ. ವೈ. ಬೆಂಡಿಗೇರಿ, ಎಸ್. ಸಿ. ಪೂಜೇರ ಇತರರು ಉಪಸ್ಥಿತರಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.