ಉತ್ತಮ ಸಮಾಜಕ್ಕಾಗಿ

‘ಗತಿ’ ನಾಟಕಕ್ಕೆ ಎಸ್ಪಿ ಡಾ. ರವಿಕಾಂತೇಗೌಡ ಚಾಲನೆ

0

ಬೆಳಗಾವಿ: ರಂಗಸಂಪದ ಬೆಳಗಾವಿ ಅವರ ವತಿಯಿಂದ ಇಂದು ಸಂಜೆ ‘ಗತಿ’ ನಾಟಕ ಪ್ರದರ್ಶನ ನಡೆಯಿತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಬಿ. ಆರ್. ರವಿಕಾಂತೇಗೌಡ ನಾಟಕಕ್ಕೆ ಕೊನವಾಳ ಗಲ್ಲಿಯ ಲೋಕಮಾನ್ಯ ರಂಗ ಮಂದಿರದಲ್ಲಿ ಚಾಲನೆ ನೀಡದರು. ರಂಗಸಂಪದ ತಂಡ ಪ್ರಸ್ತುತಪಡಿಸುತ್ತಿರುವ ನಾಟಕಕ್ಕೆ ಶ್ರೀ ಶಿರೀಶ್ ಜೋಶಿ ನಿರ್ದೇಶಿಸಿದ್ದಾರೆ. ಮಂಜುಳಾ ಜೋಶಿ ಸಂಗೀತ ನೀಡಿದ್ದಾರೆ.
ಡಾ. ಅರವಿಂದ ಕುಲಕರ್ಣಿ, ಪದ್ಮಾ ಕುಲಕರ್ಣಿ, ಶರಣಗೌಡ ಪಾಟೀಲ, ಮಂಜುನಾಥ ನೀಲನ್ನವರ, ಸೌಮ್ಯಾ, ಮುಕುಂದ ನಿಂಗನ್ನವರ, ಕವಿತಾ ಬಡಿಗೇರ ಅಭಿನಯಿಸಿದ್ದಾರೆ. ಹಿರಿಯ ಪತ್ರಕರ್ತ ಸರಜೂ ಕಾಟಕರ, ಎಂ. ಕೆ. ಜೈನಾಪೂರ, ಗುರುನಾಥ ಕುಲಕರ್ಣಿ ಇತರರು ಉಪಸ್ಥಿತರಿದ್ದರು.

ಎಸ್ಪಿ ಡಾ. ರವಿಕಾಂತೇಗೌಡ ಮಾತನಾಡಿ ಬೆಳಗಾವಿಯಲ್ಲಿ ನಾನು ಬಂದ ನಂತರ ಕನ್ನಡ ನಾಟಕ ಪ್ರದರ್ಶನ ನೋಡಲು ನಾನು ಮತ್ತು ಜನ ಬಂದಿರುವುದು ಅಭಿನಂದನಾರ್ಹ ಎಂದರು. ರಂಗಸಂಪದಕ್ಕೆ ಜನ ಹೆಚ್ಚು ಆಸಕ್ತಿ ತೋರಿಸಬೇಕು. ರಂಗ ನಾಟಕ ಒಂದು ಉತ್ತಮ ದೇಶಿ ಸಂಸ್ಕ್ರತಿಯ ಭಾಗ ಎಂದರು.

Leave A Reply

 Click this button or press Ctrl+G to toggle between Kannada and English

Your email address will not be published.