ಉತ್ತಮ ಸಮಾಜಕ್ಕಾಗಿ

ಓಖಿ: ತುಂತುರಿನ ಸೂಸುಗಾಳಿಗೆ ಬೆಳಗಾವಿ ತತ್ತರ

0

ಬೆಳಗಾವಿ: ದೇಶದ ಪಶ್ಚಿಮ ಕರಾವಳಿಗೆ ಅಪ್ಪಳಿಸಿರುವ ಓಖಿ ಚಂಡಮಾರುತ ಕೇರಳ, ತಮಿಳುನಾಡು, ಗೋವಾ ಜತೆಗೆ ರಾಜ್ಯದ ಇತರ ಜಿಲ್ಲೆಗಳಿಗೂ ಬಿಸಿ ತಟ್ಟಿಸಿದೆ. ಇಂದು ಬೆಳಗಾವಿ ನಗರ ಇಡೀ ದಿನ ಸೂರ್ಯದರ್ಶನವಿಲ್ಲದೇ ದಟ್ಟ ಮೋಡ ಕವಿದು, ಮೈಕೊರೆಯುವ ಶೀತಗಾಳಿ ಬೀಸಿದ್ದರಿಂದ ಜನಜೀವನ ಕುಗ್ಗಿಸಿತು.

ಸೂಸುವ ಮಳೆಹನಿಯಿಂದ ವಿಪರೀತ ಎನ್ನುವಷ್ಟರ ಮಟ್ಟಿಗೆ ಚಳಿ ಉಂಟಾಯಿತು. ಇದು ಓಖಿ ಪರಿಣಾಮ ಎಂದು ಸಾರ್ವಜನಿಕ ವಲಯದಲ್ಲಿ ಚರ್ಚೆ ಗರಿಗೆದರಿತು. ಆರೋಗ್ಯ ಇಲಾಖೆ ಆಗಲೇ ಜನತೆಗೆ ವಾಯುವಿಹಾರ ಮಾಡದಂತೆ ಮನವಿ ಸಹ ಮಾಡಿದೆ. ರಾಜ್ಯದ ಕರಾವಳಿಗಳಲ್ಲಿ ಆಗಲೇ ಮೀನುಗಾರಿಕೆ ಮತ್ತು ನಾಗರಿಕರು ಬೀಚಗಳಿಗೆ ತೆರಳದಂತೆ ಆಯಾ ಜಿಲ್ಲಾಡಳಿತಗಳು ಮನವಿ ಮಾಡಿವೆ.

ಮಂಗಳವಾರ ಬೆಳಗಾವಿಯಲ್ಲಿ ಕನಿಷ್ಠ 14 ಡಿಗ್ರಿ ತಾಮಪಾನ ದಾಖಲಾಯಿತು. ಓಖಿ ಚಂಡಮಾರುತದ ಪ್ರತಾಪ ಬರೀ ಕರಾವಳಿಗಷ್ಟೇ ಅಲ್ಲದೇ ಅನುರೂಪ ಜಿಲ್ಲೆಗಳಿಗೂ ತಟ್ಟಿ ವಾತಾವರಣದಲ್ಲಿ ಬದಲಾವಣೆ ಮಾಡಿತು. ಪಕ್ಕದ ಸಿಂಧದುರ್ಗ, ಕೊಲ್ಲಾಪುರ ಜಿಲ್ಲೆ ಸೇರಿ ರತ್ನಾಗಿರಿ ಜಿಲ್ಲೆಗಳಲ್ಲೂ ಮೋಡ ಕವಿದ ಶೀತಗಾಳಿ ಬೀಸಿದ್ದರಿಂದ ಅಲ್ಲಿನ ಆಡಳಿತಗಳು ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಿದವು. ಇದೇ ಹವಾಮಾನ ಮುಂದುವರೆಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.