ಉತ್ತಮ ಸಮಾಜಕ್ಕಾಗಿ

ಅಳವನ ಗಲ್ಲಿ ಕಲ್ಲು ತೂರಾಟ ಘಟನೆ: 10 ಜನರ ಬಂಧನ

0

ಬೆಳಗಾವಿ: ರವಿವಾರ ರಾತ್ರಿ ನಗರದ ಶಹಾಪೂರ ಭಾಗದ ಅಳವನ್ ಗಲ್ಲಿಯಲ್ಲಿ ನಡೆದ ಕಲ್ಲು ತೂರಾಟಕ್ಕೆ ಸಂಬಂಧಿಸಿ 10 ಜನರನ್ನು ದಸ್ತಗಿರಿ ಮಾಡಲಾಗಿದ್ದು, ಬಂಧಿತರಲ್ಲಿ ಎರಡೂ ಕೋಮಿನ ಯುವಕರು ಇದ್ದು ಇದರಲ್ಲಿ ಒಬ್ಬ 17 ವರುಷದ ಅಪ್ರಾಪ್ತ ಯುವಕ ಕೂಡ ಶಾಮೀಲಾಗಿದ್ದಾನೆ. ರವಿವಾರ ರಾತ್ರಿ ಮದುವೆ ಮೆರವಣಿಗೆಯ ಡಿ.ಜೆ ಸ್ಪೀಕರ್ ಧ್ವಜವೊಂದಕ್ಕೆ ತಾಗಿ ಎರಡು ಗುಂಪುಗಳಲ್ಲಿ ಘರ್ಷಣೆ ನಡೆದು ಕಲ್ಲು ತೂರಾಟ ನಡೆಸಲಾಗಿತ್ತು. ಘಟನೆಗೆ ಸಂಬಂಧಿಸಿದಂತೆ ತಪ್ಪಿತಸ್ಥರನ್ನು ಬಂಧಿಸುವಂತೆ ಎರಡೂ ಕೋಮಿನ ಜನರು ಸೊಮವಾರ ಶಾಹಪೂರ ಪೋಲಿಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದನ್ನು ಇಲ್ಲಿ ಸ್ಮರಿಸಬಹುದು.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: