ಉತ್ತಮ ಸಮಾಜಕ್ಕಾಗಿ

ಪೊಲೀಸ್ ಬಲವರ್ಧನೆ, ಆಧುನೀಕರಣಕ್ಕೆ ಸರಕಾರ ಶ್ರಮ: ರಾಮಲಿಂಗಾರೆಡ್ಡಿ

0

ಬೆಳಗಾವಿ: ಕಾಂಗ್ರೆಸ್ ಸರಕಾರ ಕಳೆದ ತನ್ನ 4 ವರ್ಷದಲ್ಲಿ ಸುಮಾರು 28 ಸಾವಿರ ಪೊಲೀಸರ ನೇಮಕ ಮಾಡಿದೆ ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ನುಡಿದರು. KSRP ಮಹಿಳಾ ಹಾಗೂ ಪುರುಷ ಪೊಲೀಸ್ ಕಾನ್ಸಟೇಬಲ್ ಗಳ ನಿರ್ಗಮನ ಪಥಸಂಚಲನದಲ್ಲಿ ಇಂದು ಬೆಳಿಗ್ಗೆ ಮಾತನಾಡಿದರು. ಕಳೆದ ನಾಲ್ಕೂವರೆ ವರ್ಷದಲ್ಲಿ 28 ಸಾವಿರ ಪೊಲೀಸ್ ಸಿಬ್ಬಂದಿ ಭರ್ತಿ ಮಾಡಲಾಗಿದೆ. ಒಂದು ಲಕ್ಷಕಿಂತಲೂ ಹೆಚ್ಚು ಪೊಲೀಸ್ ಸಿಬ್ಬಂದಿ ಸದ್ಯ ಇದೆ. ಇಡೀ ದೇಶದಲ್ಲೇ ಉತ್ತಮ ಪೊಲೀಸ್ ವ್ಯವಸ್ಥೆ ಎಂದು ಕರ್ನಾಟಕ ಹೆಸರಾಗಿದೆ. ನಾವು ಪೊಲೀಸ್ ಇಲಾಖೆ ವ್ಯವಸ್ಥೆಯನ್ನು ಸಾಕಷ್ಟು ಸುಧಾರಿಸುತ್ತಿದ್ದೇವೆ ಎಂದರು.

ನಾಲ್ಕುವರೆ ವರ್ಷದಲ್ಲಿ ಪೊಲೀಸರಿಗೆ ವಸತಿ ವ್ಯವಸ್ಥೆ ಕಲ್ಪಿಸಲು ಆದ್ಯತೆ ನೀಡಲಾಗಿದೆ. ಪೊಲೀಸ್ ಇಲಾಖೆಯನ್ನು ಇನ್ನೂ ಸಶಕ್ತ, ಆಧುನಿಕ ಹಾಗೂ ಜನಸ್ನೇಹಿಯಾಗಿ ಬಲಪಡಿಸುವ ಕೆಲಸ ಮುಂದುವರೆದಿದೆ ಎಂದ ಗೃಹ ಸಚಿವ ರಾಮಲಿಂಗಾರೆಡ್ಡಿ ನುಡಿದರು.

Leave A Reply

 Click this button or press Ctrl+G to toggle between Kannada and English

Your email address will not be published.