ಉತ್ತಮ ಸಮಾಜಕ್ಕಾಗಿ

ಖಾರದ ಪುಡಿ ಎರಚಿ, ಸುಮಾರು 24 ಲಕ್ಷ ದರೋಡೆ

0

ಬೆಳಗಾವಿ: ಹೂವಿನ ವ್ಯಾಪಾರಿಯಿಂದ ಸುಮಾರು 24 ಲಕ್ಷ ದರೋಡೆ ಮಾಡಿದ ಘಟನೆ ತಡರಾತ್ರಿ ನಡೆದಿದೆ. ನಗರದ ಸಾಗರ ಹೊಟೇಲ್ ಬಳಿ ಈ ಘಟನೆ ವರದಿಯಾಗಿದ್ದು
ಕಣ್ಣಿಗೆ ಖಾರದ ಪುಡಿ ಎರಚಿ ೨೪ ಲಕ್ಷ ರೂಪಾಯಿಯಷ್ಟು ದರೋಡೆ ಮಾಡಲಾಗಿದೆ. ತುಮಕೂರು ಮೂಲದ ನಾರಾಯಣ ಎಂಬ ವ್ಯಕ್ತಿಯಿಂದ ಖದಿಮರು ಹಣ ದೋಚಿದ್ದರು. ಹೂವಿನ ವ್ಯಾಪಾರದ ಕಲೆಕ್ಷನ್ ಗಾಗಿ ಬೆಳಗಾವಿಗೆ ಬಂದಿದ್ದ ನಾರಾಯಣ ಎಂಬಾತ ದರೋಡೆಗೆ ಒಳಗಾದವರು. ಚಾಕು ತೊರಸಿ, ಕಣ್ಣಿಗೆ ಖಾರದ ಪುಡಿ ಎರಚಿ ಹಣದ ಬ್ಯಾಗನ್ನು ಕಸಿದುಕೊಂಡು ಹೋದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: