ಉತ್ತಮ ಸಮಾಜಕ್ಕಾಗಿ

ಸ್ಮಶಾನದಲ್ಲಿ ಮಲಗಿ ರಾತ್ರಿ ಕಳೆದ ಶಾಸಕ ಸತೀಶ ಜಾರಕಿಹೊಳಿ-

0

ಬೆಳಗಾವಿ: ಬುಧವಾರ ಇಡೀ ರಾತ್ರಿ ಮಾಜಿ ಸಚಿವ ಸತೀಶ ಜಾರಕಿಹೊಳಿ ಸದಾಶಿವ ನಗರ ಸ್ಮಶಾನದಲ್ಲಿ ಮಲಗಿ ಕಾಲ ಕಳೆದರು. ಮಾನವ ಬಂಧುತ್ವ ವೇದಿಕೆ ವತಿಯಿಂದ ಬುಧವಾರ ಸ್ಮಶಾನದಲ್ಲಿ ನಡೆದ ಮೌಢ್ಯವಿರೋಧಿ ಸಂಕಲ್ಪ ದಿನ ನಂತರ ಇಡೀ ರಾತ್ರಿ ವಾಸ್ತವ್ಯ ಹೂಡಿದರು.ಟೀಕಾಕಾರರು ಲಕ್ಸುರಿ ಬಸ್ ನಲ್ಲಿ ಮಲಗುತ್ತಾರೆ ಎಂಬ ಆರೋಪವನ್ನು ಸಲಹೆಯಾಗಿ ಸ್ವೀಕರಿಸಿದ ಸತೀಶ ಜಾರಕಿಹೊಳಿ ತಮ್ಮ ಬೆಂಬಲಿಗರೊಂದಿಗೆ ತೆರೆದ ಸ್ಮಶಾನದಲ್ಲಿ ಮಲಗಿದರು. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC) ಅಧ್ಯಕ್ಷ ನಾಗರಾಜ ಯಾದವ ಶಾಸಕ ಸತೀಶ ಜಾರಕಿಹೊಳಿ ಅವರೊಂದಿಗಿದ್ದು ವಾಸ್ತವ್ಯ ಹೂಡಿದರು. ನಿದ್ರೆಗೆ ಜಾರುವ ಮುನ್ನ ಇಳಿರಾತ್ರಿವರೆಗೆ ಲೋಕರೂಢಿ ಹರಟೆ ನಡೆಯಿತು. ಶಾಸಕರ ಬೆಂಬಲಿಗರು ಸ್ಮಶಾನದಲ್ಲಿ ಉಪಸ್ಥಿತರಿದ್ದರು

Leave A Reply

 Click this button or press Ctrl+G to toggle between Kannada and English

Your email address will not be published.

%d bloggers like this: