ಉತ್ತಮ ಸಮಾಜಕ್ಕಾಗಿ

ಲಿಂ. ಡಾ. ಶಿವಬಸವ ಮಹಾಸ್ವಾಮಿ ಸ್ಮರಣೆ

0

ಬೆಳಗಾವಿ: ಲಿಂಗೈಕ್ಯ ಡಾ. ಶಿವಬಸವ ಮಹಾಸ್ವಾಮಿಗಳ 128ನೇ ಜಯಂತಿ ಇಂದು ನಗರದಲ್ಲಿ ನಡೆಯಿತು. ನಗರದ ಆರ್. ಎನ್. ಶೆಟ್ಟಿ ಪಾಲಿಟೆಕ್ನಿಕ್ ಮಹಾವಿದ್ಯಾಲಯದ ಆವರಣದಲ್ಲಿ ಇಂದು ಆರಂಭವಾದ ಕಾರ್ಯಕ್ರಮದಲ್ಲಿ
ಲಿಂ.ಪ್ರಭುಸ್ವಾಮಿಗಳ ಪುಣ್ಯಸ್ಮರಣೆ, ಕನ್ನಡ ರಾಜ್ಯೋತ್ಸವ, ಹಳೆಯ ವಿದ್ಯಾರ್ಥಿಗಳ ಸಮಾವೇಶ, ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಿಗೆ ಗೌರವ, ಪ್ರಸಾದ ಶ್ರೀ ಗೌರವ, ಕನ್ನಡ ನುಡಿಶ್ರೀ ಪ್ರಶಸ್ತಿ ಪ್ರದಾನ ಈ ಸಂದರ್ಭದಲ್ಲಿ ನಡೆದವು. ಡಾ.ಸಿದ್ದರಾಮ ಮಹಾಸ್ವಾಮಿಗಳ ಸಾನಿಧ್ಯದಲ್ಲಿ ನಡೆದ ಸಮಾರಂಭ ಖ್ಯಾತ ಕವಿ ಚೆನ್ನವೀರ ಕಣವಿ ಅವರಿಂದ ಉದ್ಘಾಟನೆಯಾದದ್ದು ವಿಶೇಷ. ಹಂದಿಗುಂದ ವಿರಕ್ತಮಠದ ಶ್ರೀ ಶಿವಾನಂದ ಸ್ವಾಮಿಗಳು ಉಪಸ್ಥಿತರಿದ್ದರು. ಬಿ.ಎಸ್.ಗವಿಮಠ ಅತಿಥಿಗಳಾಗಿದ್ದರು. ಪ್ರೊ.ಎಮ್.ಆರ್ .ಉಳ್ಳೇಗಡ್ಡಿ ಅಧ್ಯಕ್ಷತೆ ವಹಿಸಿದ್ದರು.ಬೆಂಗಳೂರಿನ ಕನ್ನಡ ಹೋರಾಟಗಾರ ಪಾಲನೇತ್ರ, ಬರಗಿಯ ಯಲ್ಲಪ್ಪ ಜೋಗಿ, ಬೆಳಗಾವಿಯ ನಾಗಪ್ಪ ಢವಳಿ ಹಾಗೂ ದೀಪಕ ಗುಡಗನಟ್ಟಿ ಅವರಿಗೆ ನುಡಿ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಎಫ್.ಡಿ.ಮೇಟಿ, ಆರ್.ಎಸ್.ಚಾಪಗಾವಿ, ಎಮ್.ಎಫ್.ನಾಯ್ಕರ್, ಐ.ಆರ್.ಚೌಗಲಾ, ಡಿ.ಎಮ್.ಪಾಟೀಲ, ಪಿ.ಎಸ್.ಗದಗ ಅವರಿಗೆ ಪ್ರಸಾದ ಶ್ರೀ ಗೌರವ ನೀಡಲಾಯಿತು. ರಾಜ್ಯೋತ್ಸವ ಪ್ರಶಸ್ತಿ ಪಡೆದ ಬಿ.ಎ.ರೆಡ್ಡಿ, ರಾಜಪ್ರಭು ಧೋತ್ರೆ, ಬಸವರಾಜ ಸಬರದ, ವೀರೇಶ ಕಿತ್ತೂರು ಅವರನ್ನು ಸತ್ಕರಿಸಲಾಯಿತು. ಕಾರಂಜಿ ಮಠದ ಶ್ರೀ ಗುರುಸಿದ್ಧ ಮಹಾಸ್ವಾಮಿಗಳೂ ವೇದಿಕೆಯ ಮೇಲಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.