ಉತ್ತಮ ಸಮಾಜಕ್ಕಾಗಿ

ಪುಸ್ತಕ ದಾನಿ ಶಾಂತಿನಾಥ್ ಕಾಗತಿ ಅವರ ಸನ್ಮಾನ

0

ಬೆಳಗಾವಿ: ಭರತೇಶ ಶಿಕ್ಷಣ ಸಂಸ್ಥೆಯ ಜೀವನವ್ವ ದೊಡ್ಡಣ್ಣವರ ಶಾಲೆಯ ನಿವೃತ್ತ ಪ್ರಾಂಶುಪಾಳ ಶಾಂತಿನಾಥ ಕಾಗತಿ ಇವರು ಭರತೇಶ ಎಂಬಿಎ ಮಹಾವಿದ್ಯಾಲಯದ ಗ್ರಂಥಾಲಯಕ್ಕೆ ಸುಮಾರು 1500 ಪುಸ್ತಕಗಳನ್ನು ದಾನವಾಗಿ ನೀಡಿದ ಹಿನ್ನಲೆಯಲ್ಲಿ ಅವರನ್ನು ಸಂಸ್ಥೆಯ ವತಿಯಿಂದ ಸನ್ಮಾಲಿಸಲಾಯಿತು.
ಸಮಾರಂಭಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದ ಮ್ಯಾನೇಜ್ಮೆಂಟ್ ಸ್ಟಡೀಸ್ನ ವಿಭಾಗದ ಮುಖ್ಯಸ್ಥ ಡಾ. ಸಿ.ಎಂ.ತ್ಯಾಗರಾಜ ಅವರು ಶಾಂತಿನಾಥ ಕಾಗತಿ ಅವರನ್ನು ಸನ್ಮಾನಿಸಿ ಮಾತನಾಡಿ, ಇಂತಹ ಶಿಕ್ಷಕರು ಸಂಸ್ಥೆಗಳಿಗೆ ಲಭಿಸುವುದು ವಿರಳ. ಅನೇಕ ಶೀಕ್ಷಕರು ನಿವೃತ್ತಿಯ ನಂತರ ಸಮಾಜದಿಂದ ದೂರವಾಗುತ್ತಾರೆ. ಆದರೆ ಶಾಂತಿನಾಥ ಕಾಗತಿ ಅವರು ಪುಸ್ತಕ ಓಧುವ ಹವ್ಯಾಸ ಬೆಳೆಸಿಕೊಳ್ಳುವುದಲ್ಲದೇ ಇತರರಿಗೂ ಓದಲು ಅನುಕೂಲವಾಗಲೆಂದು ಭಾವಿಸಿ ಇಂದು ಪುಸ್ತಕಗಳನ್ನು ದಾನವಾಗಿ ನೀಡಿದ್ದಾರೆ. ಇಂತಹ ಕಾರ್ಯಗಳು ನಿರಂತರ ನಡೆಯಬೇಕು.ಈಗಿನ ಶಿಕ್ಷಕರೂ ಸಹ ಶಾಂತಿನಾಥ ಕಾಗತಿ ಅವರ ಆದರ್ಶವನ್ನು ಅನುಕರಿಸಬೇಕೆಂದು ಅವರು ಹೇಳಿದರು

ಸಮಾರಂಭದ ಅಧ್ಯಕ್ಷತೆಯನ್ನು ಭರತೇಶ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಜಿನದತ್ತ ದೇಸಾಯಿ ಅವರು ವಹಿಸಿದ್ದರು. ಗ್ಲೋಬಲ್ ಬಿಜಿನೆಸ್ ಸ್ಕೂಲ್ ಆಡಳಿತ ಮಂಡಳಿಯ ಅಧ್ಯಕ್ಷ ವಿನೋದ ದೊಡ್ಡಣವರ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು. ಎ.ಎ.ಸನದಿ ಪರಿಚಯಿಸಿದರು. ಸಂಸ್ಥೆಯ ಕಾರ್ಯದರ್ಶಿ ರಾಜೀವ ದೊಡ್ಡಣ್ಣವರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಶ್ರೀಪಾಲ ಖೇಮಲಾಪೂರೆ, ಪ್ರೋ.ಉದಯ ಲವಾಟೆ, ಅಡಿವೇಶ ರಾಮದುರ್ಗ,ಸುಭಾಷ ಜಾಬನ್ನವರ, ಮೊದಲಾದವರು ಉಪಸ್ಥಿತರಿದ್ದರು. ಡಾ.ಎ.ಆರ್.ರೊಟ್ಟಿ ಕಾರ್ಯಕ್ರಮ ನಿರೂಪಿಸಿದರು. ಭರತ ಅಲಸಂದಿ ವಂದಿಸಿದರು.

Leave A Reply

 Click this button or press Ctrl+G to toggle between Kannada and English

Your email address will not be published.