ಉತ್ತಮ ಸಮಾಜಕ್ಕಾಗಿ

ಪ್ರಶಸ್ತಿ ವಿಜೇತ, ಸದಭಿರುಚಿಯ ಸಿನಿಮಾಗಳ ಉಚಿತ ಪ್ರದರ್ಶನ

0

ಚಿತ್ರೋತ್ಸವವನ್ನು ಸದುಪಯೋಗಿಸಿಕೊಳ್ಳಿ: ಸಿಇಓ ರಾಮಚಂದ್ರನ್ ಆರ್.
ಬೆಳಗಾವಿ: ಪ್ರಶಸ್ತಿ ವಿಜೇತ ಸದಭಿರುಚಿಯ ಸಿನಿಮಾಗಳನ್ನು ಸಾರ್ವಜನಿಕರಿಗೆ ತಲುಪಿಸುವ ಉದ್ದೇಶದಿಂದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ನಗರದ ಪ್ರಕಾಶ್ ಚಿತ್ರಮಂದಿರದಲ್ಲಿ ಆಯೋಜಿಸಿರುವ ಚಲನಚಿತ್ರೋತ್ಸವ ಸಪ್ತಾಹ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.
ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ರಾಮಚಂದ್ರನ್ ಆರ್. ಅವರು ಉದ್ಘಾಟಿಸಿ ಮಾತನಾಡಿ, ಅತ್ಯುತ್ತಮ ಚಲನಚಿತ್ರಗಳನ್ನು ಒಂದು ವಾರಗಳ ಕಾಲ ಉಚಿತವಾಗಿ ಪ್ರದರ್ಶಿಸಲಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಇದನ್ನು ಸದುಪಯೋಗಿಸಿಕೊಳ್ಳಬೇಕೆಂದು ಹೇಳಿದರು.
ಇಂದಿನ ಯುವ ಪೀಳಿಗೆಯು ಮಾತೃಭಾಷೆಯಲ್ಲಿ ಸ್ವಆಲೋಚನೆ ಮಾಡಬೇಕು. ಇದರಿಂದ ನಮ್ಮ ಗುರಿ ಮತ್ತು ಸಾಧನೆಗೆ ಅನೇಕ ಉತ್ತಮ ಮಾರ್ಗಗಳು ಲಭಿಸುತ್ತವೆ. ನಾವು ಆಲೋಚನೆಗಳನ್ನು ಕೈಗೊಳ್ಳಲು ಶೃವ್ಯ ಹಾಗೂ ದೃಶ್ಯ ಮಾಧ್ಯಮ ಪರಿಣಾಮಕಾರಿಯಾಗಿದೆ. ಆದ್ದರಿಂದ ಸದಭಿರುಚಿಯ ಚಲನಚಿತ್ರಗಳನ್ನು ಹೆಚ್ಚಾಗಿ ವೀಕ್ಷಿಸಬೇಕು ಎಂದು ಅವರು ಹೇಳಿದರು.
ವಿದ್ಯಾರ್ಥಿಗಳು ತಮ್ಮ ಪಾಠದ ಜೊತೆಗೆ ಕ್ರೀಡೆ ಹಾಗೂ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು. ಇದರಿಂದ ಉತ್ತಮ ವ್ಯಕ್ತಿತ್ವ ಹೊಂದಲು ಸಾಧ್ಯವಿದೆ ಎಂದು ವಿದ್ಯಾಥಿರ್üಗಳಿಗೆ ಸಲಹೆ ನೀಡಿದರು.
ವಾರ್ತಾ ಮತ್ತು ಸಾರ್ವನಿಕ ಸಂಪರ್ಕ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕರಾದ ಗುರುನಾಥ ಕಡಬೂರ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ, ಕಮರ್ಷಿಯಲ್ ಚಿತ್ರಗಳ ಬರಾಟೆಯಲ್ಲಿ ಕಳೆದು ಹೋಗುವ ಸದಭಿರುಚಿಯ ಮತ್ತು ಕಲಾತ್ಮಕ ಚಿತ್ರಗಳನ್ನು ಹೆಚ್ಚು ಜನರಿಗೆ ತಲುಪಿಸುವ ಉದ್ದೇಶದಿಂದ ವಾರ್ತಾ ಇಲಾಖೆಯಿಂದ ಪ್ರತಿವರ್ಷ ಚಿತ್ರೋತ್ಸವ ಸಪ್ತಾಹವನ್ನು ಹಮ್ಮಿಕೊಳ್ಳುತ್ತಾ ಬರಲಾಗುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರಾದ ಎ.ಬಿ. ಪುಂಡಲೀಕ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರಾದ ಎಸ್.ಡಿ. ಕಾಂಬಳೆ, ಚಲನಚಿತ್ರ ಪ್ರದರ್ಶಕರಾದ ಮಹೇಶ್ ಮನೋಹರ ಕುಗಜಿ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಂಗಳಾ ಅರಳ್ಳಿಮಟ್ಟಿ ಅವರು ನಿರೂಪಿಸಿದರು, ಅನಂತ. ಬಿ. ಪಪ್ಪು ಅವರು ವಂದಿಸಿದರು.
ಕಾರ್ಯಕ್ರಮದಲ್ಲಿ ಭಾತಕಂಡೇ ಹೈಸ್ಕೂಲ್, ಪಂಡಿತ ನೆಹರು ಹೈಸ್ಕೂಲ್, ಚಿಂತಾಮಣಿ ಹೈಸ್ಕೂಲ್, ಸರಸ್ವತಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಪ್ರತಿದಿನ ಚಿತ್ರೋತ್ಸವ ವೇಳಾಪಟ್ಟಿ:
ಡಿಸೆಂಬರ್ 9 ರಿಂದ 14ರವರೆಗೆ ಪ್ರತಿದಿನ ಬೆಳಿಗ್ಗೆ 10 ಗಂಟೆಯಿಂದ ಚಿತ್ರ ಪ್ರದರ್ಶನ ನಡೆಯಲಿದ್ದು, ಸಾರ್ವಜನಿಕರಿಗೆ ಉಚಿತ ಪ್ರವೇಶವಿರುತ್ತದೆ.
ಆಸನಗಳ ಲಭ್ಯತೆ ಆಧಾರದಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆ ನೀಡಲಾಗುವುದು. ಚಿತ್ರೋತ್ಸವ ವೇಳಾಪಟ್ಟಿ ಈ ಕೆಳಗಿನಂತಿದೆ.

ಡಿಸೆಂಬರ್ 9- ಕಿರಿಕ್ ಪಾರ್ಟಿ
ಡಿಸೆಂಬರ್ 10- ರಾಮ ರಾಮ ರೇ
ಡಿಸೆಂಬರ್ 11- ಮದಿಪು (ತುಳು ಭಾಷಾ ಚಲನಚಿತ್ರ)
ಡಿಸೆಂಬರ್ 12- ಯೂ ಟರ್ನ
ಡಿಸೆಂಬರ್ 13- ಅಲ್ಲಮ
ಡಿಸೆಂಬರ್ 14- ಮಾರಿಕೊಂಡವರು

Leave A Reply

 Click this button or press Ctrl+G to toggle between Kannada and English

Your email address will not be published.