ಉತ್ತಮ ಸಮಾಜಕ್ಕಾಗಿ

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಸಾಪ್ಟ್ ಸ್ಕಿಲ್ಸ್ ತರಬೇತಿ

0

ಬೆಳಗಾವಿ: ಮಾರ್ಚ ಮತ್ತು ಏಪ್ರಿಲ್ -2018ರಲ್ಲಿ ನಡೆಯಲಿರುವ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ. 50ಕ್ಕಿಂತ ಕಡಿಮೆ ಅಂಕಗಳಿಸಬಹುದಾದ ವಿದ್ಯಾರ್ಥಿಗಳಿಗೆ ಸಾಪ್ಟ ಸ್ಕಿಲ್ ತರಬೇತಿಯನ್ನು ಧಾರವಾಡ ಬಾಲ ವಿಕಾಸ ಅಕಾಡೆಮಿ ಸಂಚಾಲಕರಾದ ನಂದೀಶ, ಅವರು ತರಬೇತಿಯನ್ನು ಬೆಳಗಾವಿ ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಈಗಾಗಲೇ ಪ್ರಾರಂಭಿಸಲಾಗಿದೆ.

ತರಬೇತಿಯ ವೇಳಾಪಟ್ಟಿ:
ಡಿಸೆಂಬರ್ 9 ರಂದು ಬೆಳಗಾವಿ ಗ್ರಾಮೀಣ, ಡಿಸೆಂಬರ್ 11 ರಂದು ಕಿತ್ತೂರು, ಡಿಸೆಂಬರ್ 12 ರಂದು ಖಾನಾಪೂರ, ಡಿಸೆಂಬರ್ 13 ರಂದು ಬೈಲಹೊಂಗಲ ಹಾಗೂ ಡಿಸೆಂಬರ್ 14 ರಂದು ಬೆಳಗಾವಿ ನಗರ ವಲಯದಲ್ಲಿ ತರಬೇತಿಯನ್ನು ಆಯೋಜಿಸಲಾಗಿದೆ.
ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಶೇ.50 ಕ್ಕಿಂತ ಕಡಿಮೆ ಅಂಕ ಗಳಿಸಬಹುದಾದ ಎಲ್ಲ ವಿದ್ಯಾರ್ಥಿಗಳನ್ನು ಸದರಿ ತರಬೇತಿ ಕಾರ್ಯಕ್ರಮಕ್ಕೆ ಕರೆತರಲು ಜಿಲ್ಲೆಯ ಎಲ್ಲ ಸರ್ಕಾರಿ, ಅನುದಾನಿತ ಹಾಗೂ ಅನುದಾನರಹಿತ ಪ್ರೌಢಶಾಲಾ ಮುಖ್ಯಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ

Leave A Reply

 Click this button or press Ctrl+G to toggle between Kannada and English

Your email address will not be published.