ಉತ್ತಮ ಸಮಾಜಕ್ಕಾಗಿ

ರವಿ ಬೆಳಗೆರೆ ಅರೆಸ್ಟ

0

ಬೆಂಗಳೂರು/ಬೆಳಗಾವಿ: ಹಿರಿಯ ಪತ್ರಕರ್ತ ಹಾಗೂ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆಯನ್ನು ಪೋಲಿಸರು ಇಂದು ಬಂಧಿಸಿದ್ದಾರೆ. ಸಹೋದ್ಯೋಗಿ ಸುನಿಲ್‌ ಹೆಗ್ಗರವಳ್ಳಿ ಎಂಬುವರ ಕೊಲೆಗೆ ಸುಪಾರಿ ಕೊಟ್ಟ ಆರೋಪದ ಮೇಲೆ ರವಿ ಬೆಳಗೆರೆ ಅವರನ್ನು ಪೊಲೀಸರು ಇಂದು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

ಗೌರಿ ಲಂಕೇಶ್‌ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿದ್ದ ಸಂದರ್ಭದಲ್ಲಿ ರವಿ ಬೆಳಗೆರೆ, ಸುನಿಲ್‌ ಹೆಗ್ಗರವಳ್ಳಿ ಕೊಲೆಗೆ ಸುಪಾರಿ ಕೊಟ್ಟಿದ್ದ ವಿಷಯ ತಿಳಿದುಬಂದಿತ್ತು. ‘ಸುನಿಲ್‌ ಹೆಗ್ಗರವಳ್ಳಿ ಕೊಲೆ ಮಾಡಲು ರವಿ ಬೆಳಗೆರೆ ₹30 ಲಕ್ಷ ಸುಪಾರಿ ನೀಡಿದ್ದರು’ ಎಂದು ವಿಜಯಪುರದ ಶಾರ್ಪ್‌ಶೂಟರ್‌ ಶಶಿ ಮುಂಡೇವಾಡಗಿ ವಿಚಾರಣೆ ವೇಳೆ ತಿಳಿಸಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Leave A Reply

 Click this button or press Ctrl+G to toggle between Kannada and English

Your email address will not be published.