ಉತ್ತಮ ಸಮಾಜಕ್ಕಾಗಿ

ಸದ್ಯದಲ್ಲೇ:ಮೂಲ ಅಸ್ಪೃಷ್ಯರ ಮಹಾಸಮಾವೇಶ ಶಂಕರ ಮುನವಳ್ಳಿ

0

ಬೆಳಗಾವಿ: ಸಂವಿಧಾನದಡಿ ಮತ್ತು ಪ್ರಜಾಪ್ರಭುತ್ವದಡಿ ಚುನಾವಣೆ ನಡೆಸಲು ಸಮೀಕ್ಷೆ ಹೆಸರಲ್ಲಿ ತೊಂದರೆಯಾಗುತ್ತಿದೆ ಎಂದು ಕೆಪಿಸಿಸಿ ಮಾಜಿ ಸದಸ್ಯ ಶಂಕರ ಮುನವಳ್ಳಿ ಖೇದ ವ್ಯಕ್ತಪಡಿಸಿದರು. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿ ರಾಜ್ಯದ 6 ಕೋಟಿ ಜನಸಂಖ್ಯೆಯಲ್ಲಿ ಹತ್ತಾರು ಸಾವಿರ ಜನರಿಂದ ಮಾತ್ರ ಅಭಿಪ್ರಾಯ ಪಡೆದು ಚುನಾವಣೆ ಹೀಗೇ ಆಗುತ್ತದೆ, ಹಾಗೇ ಆಗುತ್ತದೆ ಎಂದು ಸಮೀಕ್ಷೆ ನಡೆಸಲಾಗುತ್ತಿದೆ ಎಂದು ವ್ಯಂಗ್ಯವಾಡಿದರು. ಸದ್ಯದಲ್ಲೇ ಇಂತಹ ಚುನಾವಣಾ ಪೂರ್ವ ಸಮೀಕ್ಷೆಗಳನ್ನು ನಿಲ್ಲಿಸಲು ಸುಪ್ರೀಂಕೋರ್ಟ್ ಬಾಗಿಲು ತಟ್ಟಲಾಗುವುದು ಎಂದರು.ಅಸಮಂಜಸ ಹೇಳಿಕೆ: ತುಮಕೂರು ಜಿಲ್ಲೆಯ ಎಂಎಲ್ ಸಿ ಎಂ. ಡಿ. ಲಕ್ಷ್ಮೀನಾರಾಯಣ ಅವರು ಕಾಂಗ್ರೆಸ್ ಸಿದ್ಧಾಂತ ಅರಿಯದೇ ತನಗೆ ಸೋನಿಯಾ ಗಾಂಧಿ ಅವರು ಟಿಕೇಟ್ ನೀಡಿದ್ದಾರೆ ಎಂದು ಹೇಳುತ್ತ ತಿರುಗಾಡುತ್ತಿರುವುದು ಅಸಮಂಜಸ ಎಂದು ಅಸಮಧಾನ ವ್ಯಕ್ತಪಡಿಸಿದರು. ಆಯಾ ಕ್ಷೇತ್ರದಲ್ಲಿ ಅಭ್ಯರ್ಥಿಗಳ ಬಗ್ಗೆ ಕೊನೆ ಕ್ಷಣದಲ್ಲಿ ಪಕ್ಷ ನಿರ್ಧರಿಸುತ್ತದೆ ಹೊರತು ಬಹಳ ಮುಂಚಿತವಾಗಿಯಲ್ಲ ಎಂದರು.

ಮಹಾಸಮಾವೇಶ: ಲೋಕಸಭೆ ಪ್ರತಿಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಿಎಂ ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ನೇತೃತ್ವದಲ್ಲಿ ಬರುವ ಜನವೇರಿ ಮೊದಲ ವಾರದಲ್ಲಿ ಉತ್ತರ ಕರ್ನಾಟಕದ ಅಖಂಡ ಮೂಲ ಅಸ್ಪ್ರಷ್ಯರ(ದಲಿತರ) ಮಹಾ ಸಮಾವೇಶ ಬೆಳಗಾವಿಯಲ್ಲಿ ನಡೆಸಲಾಗುವುದು. ಕನಿಷ್ಠ 25 ಸಾವಿರ ಜನ ಸೇರುವ ನಿರೀಕ್ಷೆ ಇದೆ ಎಂದರು. ಈ ಬಗ್ಗೆ ನಾನು ಜನವರಿಯಲ್ಲಿ ವರಿಷ್ಠರಿಂದ ದಿನಾಂಕ ಪಡೆಯುತ್ತೇನೆ ಎಂದರು. ಎಐಸಿಸಿ ರಾಜ್ಯ ಉಸ್ತುವಾರಿ ವೇಣುಗೋಪಾಲ, ಸರಕಾರದ ಹಿರಿಯ ಸಚಿವರು, ದಲಿತ ವರ್ಗದ ಸಚಿವರು, ಶಾಸಕರು, ಅಸ್ಪ್ರಷ್ಯರ ವಲಯದ ಎಲ್ಲ ಮುಖಂಡರು ಭಾಗವಹಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ದಲಿತ ಮುಖಂಡರು ಭಾಗವಹಿಸಿದ್ದರು.

Leave A Reply

 Click this button or press Ctrl+G to toggle between Kannada and English

Your email address will not be published.